ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆಗೆಯಲಾಗುತ್ತದೆ ಎಂಬ ನಂಬಿಕೆಯಿಂದ ದೇವಾಲಯದಲ್ಲೂ ಸ್ವರ್ಗದ ಬಾಗಿಲಿಗೆ ವಿಶೇಷ ಅಲಂಕಾರ ಮಾಡಿ ಭಕ್ತಾದಿಗಳು ಸ್ವರ್ಗದ ಬಾಗಿಲಿನ ಮೂಲಕ ಪ್ರವೇಶ ಮಾಡಿ ಪುನೀತರಾದರು.

ಆಲೂರು: ವೈಕುಂಠ ಏಕಾದಶಿಯ ಪ್ರಯುಕ್ತ ತಾಲೂಕಿನ ಪಾಳ್ಯ ಹೋಬಳಿ ಹಳೆಪಾಳ್ಯ ಗ್ರಾಮದಲ್ಲಿರುವ ಪುರಾತನ ಪ್ರಸಿದ್ಧ ಲಕ್ಷ್ಮೀ ಜನಾರ್ದನ ಸ್ವಾಮಿ ದೇವಾಲಯದಲ್ಲಿ ಸ್ವಾಮಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆಗೆಯಲಾಗುತ್ತದೆ ಎಂಬ ನಂಬಿಕೆಯಿಂದ ದೇವಾಲಯದಲ್ಲೂ ಸ್ವರ್ಗದ ಬಾಗಿಲಿಗೆ ವಿಶೇಷ ಅಲಂಕಾರ ಮಾಡಿ ಭಕ್ತಾದಿಗಳು ಸ್ವರ್ಗದ ಬಾಗಿಲಿನ ಮೂಲಕ ಪ್ರವೇಶ ಮಾಡಿ ಪುನೀತರಾದರು. ತಾಲೂಕಿನ ವಿವಿಧ ಕಡೆಗಳಿಂದ ಬಂದಿದ್ದ ಭಕ್ತರು ದೇವರ ದರ್ಶನ ಪಡೆದು ವಿಷ್ಣು ನಾಮ ಪಠಣ ಮಾಡಿದರು, ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.