ಸಾರಾಂಶ
ಲೋಕಾಪುರ: ಪಟ್ಟಣದ ಲೋಕೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯನ್ನು ಭಕ್ತರು ಸಂಭ್ರಮ ಸಡಗರದಿಂದ ಆಚರಿಸಿದರು. ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ಲೋಕೇಶ್ವರನಿಗೆ ವಿಶೇಷ ಪೂಜೆ, ಅಲಂಕಾರ, ಧೂಪ, ಶಿವಭಜನೆ, ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನದಲ್ಲಿ ಉಪವಾಸ, ಜಾಗರಣೆ ಶಿವಸ್ಮರಣೆ ಮಾಡುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು. ಶಿವರಾತ್ರಿ ನಿಮಿತ್ತ ಬೆಳಿಗ್ಗೆಯಿಂದಲೇ ಲೋಕೇಶ್ವರ ದೇವಸ್ಥಾದಲ್ಲಿ ವಿಶೇಷ ಪೂಜೆಗಳು ನಡೆದವು. ಶಿವನಿಗೆ ಬಿಲ್ಪಪತ್ರ ಅರ್ಪಿಸುವ ಮೂಲಕ ಪೂಜೆ, ಮಂಗಳಾರತಿ, ಶಿವನಸ್ಮರಣೆ ನಡೆಯಿತು. ಶಿವನ ಸಹಸ್ರ ನಾಮ ಪಠಣ, ವೇದಾಂತ ಉಪನ್ಯಾಸ, ಸಂಗೀತೋತ್ಸವ ಮತ್ತು ಅಹೋರಾತ್ರಿ ಶಿವನಾಮ ಜಪ ನಡೆದವು. ದೇವಾಲಯಗಳಲ್ಲಿ ಹೆಚ್ಚು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ದೇವಸ್ಥಾನಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೆ ಬಾಳೆಹಣ್ಣು ಪ್ರಸಾದ ವಿತರಿಸಲಾಯಿತು. ನೂರಾರು ಭಕ್ತರು ಶ್ರೀ ಲೋಕೇಶ್ವರನ ದರ್ಶನ ಪಡೆದು ಅರ್ಚಕರಿಂದ ಪ್ರಸಾದ ಸ್ವೀಕರಿಸಿ ಭಕ್ತಿ ಅರ್ಪಿಸಿ ಪುನಿತರಾದರು.
ಷಣ್ಮುಖಪ್ಪ ಕೊಲ್ಹಾರ, ಪವನ ಉದಪುಡಿ, ಬಸವರಾಜ ಕಾತರಕಿ, ಸದಾಶಿವ ಉದಪುಡಿ, ಚನ್ನಯ್ಯ ಗಣಾಚಾರಿ, ಚನ್ನಬಸು ಹುಬ್ಬಳ್ಳಿ , ಲೋಕಣ್ಣ ಗಣಾಚಾರಿ, ಮಂಜು ಗಣಾಚಾರಿ, ಜಾತ್ರಾ ಕಮೀಟಿ ಪದಾಧಿಕಾರಿಗಳು, ಭಕ್ತರು ಇದ್ದರು.