ರಾಮ ಮಂದಿರದಲ್ಲಿ ವಿಶೇಷ ಪೂಜೆ

| Published : Jan 23 2024, 01:51 AM IST

ಸಾರಾಂಶ

ಚಿತ್ತಾಪುರ ಪಟ್ಟಣದ ರಾಮಮಂದಿರದಲ್ಲಿ ಬೆಳಗ್ಗೆಯಿಂದ ವಿಶೇಷ ಅಲಂಕಾರ, ಪೂಜೆ ಹೊಮ ಹವನ ಹಾಗೂ ಇನ್ನಿತರ ಪೂಜಾ ಕೈಂಕರ್ಯಗಳು ಸಂಭ್ರಮದಿಂದ ನಡೆದವು.

ಕನ್ನಡಪ್ರಭ ವಾರ್ತೆ ಚಿತ್ತಾಪುರ:

ಅಯೊಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದ ರಾಮಮಂದಿರದಲ್ಲಿ ಬೆಳಗ್ಗೆಯಿಂದ ವಿಶೇಷ ಅಲಂಕಾರ, ಪೂಜೆ ಹೊಮ ಹವನ ಹಾಗೂ ಇನ್ನಿತರ ಪೂಜಾ ಕೈಂಕರ್ಯಗಳು ಸಂಬ್ರಮದಿಂದ ನಡೆದವು.

ರಾಮಮಂದಿರ ನಿರ್ಮಾಣ ಮತ್ತು ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾನದ ಅಂಗವಾಗಿ ಬೆಳಗ್ಗೆಯಿಂದ ಪಟ್ಟಣದ ರಾಮ ಮಂದಿರದಲ್ಲಿ ಬ್ರಾಹ್ಮಣ ಸಮಾಜದಿಂದ ಮತ್ತು ವಿಶ್ವಹಿಂದೂ ಪರಿಷತ್ ಹಾಗೂ ಇನ್ನಿತರ ಹಿಂದು ಪರ ಸಂಘಟನೆಗಳಿಂದ ರಾಮನಿಗೆ ವಿಶೇಷ ಅಲಂಕಾರದಿಂದ ಶೃಂಗರಿಸಿ ವಿಶೇಷ ಪೂಜೆ ಹೊಮ ಹವನ ಆರತಿ ನೈವೇದ್ಯಗಳನ್ನು ಸಮರ್ಪಿಸಿ ಸಂಬ್ರಮದಿಂದ ಆಚರಣೆ ಮಾಡಿದರು.

ವಿಶೇಷ ಪೂಜೆಯ ಅಂಗವಾಗಿ ಬ್ರಾಹ್ಮಣ ಸಮಾಜದ ಮಹಿಳೆಯರು ಶ್ರೀರಾಮನ ಹಾಡಿಗೆ ಕೊಲಾಟ ಆಡುವದು, ಪಟ್ಟಣದ ಮಾರುಕಟ್ಟೆಯ ಮುಖ್ಯರಸ್ತೆಯಲ್ಲಿ ಹನುಮಾನ ದೇವಸ್ಥಾನದ ಎದುರಿನಲ್ಲಿ ಸಾರ್ವಜನಿಕರಿಗೆ ಅನ್ನ ಪ್ರಸಾದ ವಿತರಣೆ, ಸಿಹಿ ವಿತರಣೆ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಮೆರೆದರು.