ಸಾರಾಂಶ
ಕಲ್ಲಿನ ನಾಗ ಮೂರ್ತಿಗಳು ಇರುವ ಸ್ಥಳಕ್ಕೆ ತೆರಳಿದ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ ಹಾಲೆರೆದರು. ಉಂಡಿ, ತಂಬಿಟ್ಟು ನೈವೇದ್ಯ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಹುಬ್ಬಳ್ಳಿ: ನಾಗರ ಪಂಚಮಿಯನ್ನು ನಗರದಲ್ಲಿ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಕಲ್ಲಿನ ನಾಗ ಮೂರ್ತಿಗಳು ಇರುವ ಸ್ಥಳಕ್ಕೆ ತೆರಳಿದ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿ ಹಾಲೆರೆದರು. ಉಂಡಿ, ತಂಬಿಟ್ಟು ನೈವೇದ್ಯ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ನಗರದ ಸಿದ್ಧಾರೂಢ ಮಠದ ಆವರಣದಲ್ಲಿರುವ ನಾಗದೇವತೆ ಮೂರ್ತಿಗೆ ಮಹಿಳೆಯರು ಬೆಳಗಿನಿಂದಲೇ ವಿಶೇಷ ಪೂಜೆ ಸಲ್ಲಿಸಿ ಹಾಲೆರದರು. ಹಳೆ ಹುಬ್ಬಳ್ಳಿಯ ಇಂಡಿಪಂಪ್ ಬಳಿಯ ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಆವರಣದಲ್ಲಿರುವ ನಾಗದೇವತೆ ಮೂರ್ತಿ, ಗೋಕುಲ ರಸ್ತೆಯ ರಾಜಧಾನಿ ಕಾಲನಿ, ಗ್ರೀನ್ ಗಾರ್ಡನ್, ಹೆಗ್ಗೇರಿ ಸೇರಿದಂತೆ ನಗರ ಮತ್ತು ಗ್ರಾಮೀಣ ಪ್ರದೇಶದ ವಿವಿಧೆಡೆ ಇರುವ ನಾಗದೇವತೆ ಮೂರ್ತಿಗಳಿಗೆ ಭಕ್ತರು ಹಾಲೆರೆದು ಭಕ್ತಿ ಸಮರ್ಪಿಸಿದರು. ಮಕ್ಕಳು ಲಾಡು, ಕೊಬ್ಬರಿ ಸವಿದು ಖುಷಿ ಪಟ್ಟರೆ, ಯುವತಿಯರು ಜೋಕಾಲಿ ಜೀಕಿ ಸಂಭ್ರಮಿಸಿದರು.