ಸಾರಾಂಶ
ಎರಡು ಚುನಾವಣೆಗಳಲ್ಲಿ ಸೋತಿದ್ದರೂ ಎದೆಗುಂದದೆ ನಿಖಿಲ್ ಕುಮಾರಸ್ವಾಮಿ ಉಪ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಬಾರಿ ಚನ್ನಪಟ್ಟಣ ಮತದಾರರು ನಿಖಿಲ್ ಕೈ ಹಿಡಿಯುವರೆಂಬ ವಿಶ್ವಾಸವಿದೆ. ತಾಯಿ ಶ್ರೀಕಾಳಿಕಾಂಬ ದೇವಿ ಅವರಿಗೆ ರಾಜಕೀಯ ಗೆಲುವು ನೀಡಲಿ ಎಂದರಲ್ಲದೇ, ಸಚಿವ ಜಮೀರ್ ಅಹಮ್ಮದ್ ಅವರಿಗೆ ಒಳ್ಳೆಯ ಬುದ್ದಿ ನೀಡಲಿ. ಒಳ್ಳೆಯ ಮಾತನಾಡುವಂತೆ ಪ್ರೇರಣೆ ನೀಡಲಿ.
ಕನ್ನಡಪ್ರಭ ವಾರ್ತೆ ಮಂಡ್ಯ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಪ್ರಾರ್ಥಿಸಿ ಬಿಜೆಪಿ ಕಾರ್ಯಕರ್ತರು ನಗರದ ಶ್ರೀಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಬಿಜೆಪಿ ಕಾರ್ಯಕರ್ತ ಹೊಸಹಳ್ಳಿ ಶಿವು ನೇತೃತ್ವದಲ್ಲಿ ಶಕ್ತಿ ದೇವತೆ ಶ್ರೀಕಾಳಿಕಾಂಬ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಅವರ ಹೆಸರಿನಲ್ಲೇ ದೇವರಿಗೆ ಅರ್ಚನೆ ಮಾಡಿಸಿ, ತಡೆ ಹೊಡೆಸಿ ಗೆಲುವಿಗೆ ಪ್ರಾರ್ಥಿಸಿದರು.
ಎರಡು ಚುನಾವಣೆಗಳಲ್ಲಿ ಸೋತಿದ್ದರೂ ಎದೆಗುಂದದೆ ನಿಖಿಲ್ ಕುಮಾರಸ್ವಾಮಿ ಉಪ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಬಾರಿ ಚನ್ನಪಟ್ಟಣ ಮತದಾರರು ನಿಖಿಲ್ ಕೈ ಹಿಡಿಯುವರೆಂಬ ವಿಶ್ವಾಸವಿದೆ. ತಾಯಿ ಶ್ರೀಕಾಳಿಕಾಂಬ ದೇವಿ ಅವರಿಗೆ ರಾಜಕೀಯ ಗೆಲುವು ನೀಡಲಿ ಎಂದರಲ್ಲದೇ, ಸಚಿವ ಜಮೀರ್ ಅಹಮ್ಮದ್ ಅವರಿಗೆ ಒಳ್ಳೆಯ ಬುದ್ದಿ ನೀಡಲಿ. ಒಳ್ಳೆಯ ಮಾತನಾಡುವಂತೆ ಪ್ರೇರಣೆ ನೀಡಲಿ ಎಂದು ಪ್ರಾರ್ಥಿಸಿದರು.ಬಿಜೆಪಿ ಮುಖಂಡರಾದ ಕೇಶವ, ನಂದೀಶ್, ಚಂದು, ಮಂಜು, ರವಿ ಇತರರಿದ್ದರು.ನ.17 ರಂದು ಬೆಳ್ಳಿ ಸಂಭ್ರಮ, ಗುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ
ಮಳವಳ್ಳಿ:ತಾಲೂಕಿನ ಹೊಸಹಳ್ಳಿ ಪ್ರೌಢ ಶಾಲೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ನ.17ರಂದು ಬೆಳ್ಳಿ ಸಂಭ್ರಮದೊಂದಿಗೆ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10ಗಂಟೆಗೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಹೊಸಹಳ್ಳಿ ಸಿದ್ದಮಲ್ಲೇಶ್ವರ ಮಠಾಧ್ಯಕ್ಷ ಓಂಕಾರೇಶ್ವರಸ್ವಾಮಿ ವಹಿಸಿ ಉದ್ಘಾಟಿಸಲಿದ್ದಾರೆ. ಶಾಲೆ ಮುಖ್ಯಶಿಕ್ಷಕಿ ಬಿ.ಪ್ರತಿಭಾ ಅಧ್ಯಕ್ಷತೆ ವಹಿಸುವವರು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಆಶಯ ನುಡಿಯನ್ನು ನುಡಿಯಲಿದ್ದಾರೆ.ಮುಖ್ಯಅತಿಥಿಗಳಾಗಿ ಮಾಜಿ ಸಚಿವ ಬಿ.ಸೋಮಶೇಖರ್, ಶಾಲೆ ಎಸ್ಡಿಎಂಸಿ ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಶಿಕ್ಷಣಾಸಕ್ತರಾದ ಮಧು ಗಂಗಾಧರ್, ಶ್ರೀನಿವಾಸಮೂರ್ತಿ ಭಾಗಿಯಾಗಲಿದ್ದಾರೆ.
ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಕರ್ತವ್ಯನಿರ್ವಹಿಸಿದ್ದ ಶಿಕ್ಷಕರು, ಸಿಬ್ಬಂದಿಗಳು, ನಿವೃತ್ತ ಶಿಕ್ಷಕರು, ಶಾಲೆಗೆ ಜಮೀನು ದಾನ ನೀಡಿರುವ ದಾನಿಗಳನ್ನು ಅಭಿನಂದಿಸಲಾಗುವುದು. ನ.17ರ ಬೆಳಗ್ಗೆ 9ಗಂಟೆಗೆ ಸರ್ಕಾರಿ ಹಿರಿಯ ಬಾಲಕಿಯರ ಶಾಲೆಯಿಂದ ಹೊಸಹಳ್ಳಿ ಮುಖ್ಯರಸ್ತೆ ಮೂಲಕ ವೀರಗಾಸೆ, ಬೀರದೇವರ ಮೆರವಣಿಗೆಯೊಂದಿಗೆ ಗುರುವೃಂದದವರನ್ನು ಪ್ರೌಢಶಾಲಾ ಆವರಣದವರೆಗೆ ಸ್ವಾಗತಿಸಲಾಗುವುದು ಎಂದು ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))