ಬೃಹನ್ಮಠದಲ್ಲಿ ಗೌರಮ್ಮನಿಗೆ ಮುತ್ತೈದೆಯರಿಂದ ವಿಶೇಷ ಪೂಜೆ

| Published : Sep 07 2024, 01:32 AM IST

ಬೃಹನ್ಮಠದಲ್ಲಿ ಗೌರಮ್ಮನಿಗೆ ಮುತ್ತೈದೆಯರಿಂದ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಗೌರಿ ಹಬ್ಬವನ್ನು ಗಣೇಶ ಚತುರ್ಥಿ ಹಿಂದಿನ ದಿನ ಗಣೇಶನ ತಾಯಿಯಾದ ಗೌರಿ ದೇವಿಯನ್ನು ವಿವಾಹಿತ ಮಹಿಳೆಯರು ಸಿಂಧೂರ ಅಥವಾ ಕುಂಕುಮದೊಂದಿಗೆ ತಮ್ಮ ಸೌಭಾಗ್ಯಕ್ಕಾಗಿ, ಸದ್ಗುಣಶೀಲ ಗಂಡಂದಿರನ್ನು ಪಡೆಯುವ ಸಲುವಾಗಿ ಅವಿವಾಹಿತ ಯುವತಿಯರು ಗೌರಿಯನ್ನು ಪೂಜಿಸಿದರು.

ಕನ್ನಡಪ್ರಭ ವಾರ್ತೆ ಹಲಗೂರು

ತೊರೆಕಾಡನಹಳ್ಳಿ ಬಳಿಯ ಶಿಂಷಾ ನದಿಯಲ್ಲಿ ಮರಳಿನಿಂದ ಗೌರಮ್ಮ ಮೂರ್ತಿ ತಯಾರಿಸಿ ಹಲಗೂರಿನ ಬೃಹನ್ಮಠದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಮುತ್ತೈದೆಯರು ವಿಶೇಷ ಪೂಜೆ ಸಲ್ಲಿಸಿದರು.

ಒಬ್ಬರಿಗೊಬ್ಬರು ಅರಿಶಿನ ಕುಂಕುಮ ನೀಡಿ ಹಾಗೂ ಬಾಗಿನ ನೀಡಿ ಸಂಪ್ರದಾಯದಂತೆ ಹಬ್ಬವನ್ನು ಭಕ್ತಿ ಭಾವ ಪೂರಕವಾಗಿ ಆಚರಣೆ ಮಾಡಿದರು. ಸ್ವರ್ಣಗೌರಿ ವ್ರತವನ್ನು ಮಹಿಳೆಯರ ಹಬ್ಬವೆಂದೇ ಕರೆಯಲಾಗುವುದು. ಹೆಣ್ಣು ಮಕ್ಕಳು ಹಬ್ಬ ಮಾಡಿದರೆ ಗೌರಿ ಮಾತೆ ಸಕಲ ಸೌಭಾಗ್ಯ ನೀಡುತ್ತಾಳೆ ಎಂಬ ನಂಬಿಕೆಯೊಂದಿಗೆ ಪೂಜೆ ಸಲ್ಲಿಸಿದರು.

ಗೌರಿ ಹಬ್ಬವನ್ನು ಗಣೇಶ ಚತುರ್ಥಿ ಹಿಂದಿನ ದಿನ ಗಣೇಶನ ತಾಯಿಯಾದ ಗೌರಿ ದೇವಿಯನ್ನು ವಿವಾಹಿತ ಮಹಿಳೆಯರು ಸಿಂಧೂರ ಅಥವಾ ಕುಂಕುಮದೊಂದಿಗೆ ತಮ್ಮ ಸೌಭಾಗ್ಯಕ್ಕಾಗಿ, ಸದ್ಗುಣಶೀಲ ಗಂಡಂದಿರನ್ನು ಪಡೆಯುವ ಸಲುವಾಗಿ ಅವಿವಾಹಿತ ಯುವತಿಯರು ಗೌರಿಯನ್ನು ಪೂಜಿಸಿದರು.

ಹಬ್ಬಕ್ಕಾಗಿ ಗೃಹಿಣಿಯರು ಮನೆ ಶುಚಿಗೊಳಿಸಿ, ಹಬ್ಬದ ದಿನ ಶ್ರದ್ಧಾ ಭಕ್ತಿಯಿಂದ ಉಪವಾಸವಿದ್ದು ಗೌರಮ್ಮನಿಗೆ ಬಾಗಿನ ಅರ್ಪಿಸಿದ ನಂತರ ದೇವಸ್ಥಾನಕ್ಕೆ ಬರುವ ಮುತ್ತೈದೆಯರಿಗೆ ಮಂಗಳ ದ್ರವ್ಯಗಳು ಫಲ ತಾಂಬೂಲ ಧಾನ್ಯಗಳು ಸೇರಿಸಿ ಬಿದಿರಿನಿಂದ ತಯಾರಿಸಿದ ಮೊರದಲ್ಲಿ ತುಂಬಿಸಿ ಅರಿಶಿನ ಕುಂಕುಮ ನೀಡಿ ಬಾಗಿನ ಅರ್ಪಿಸಿ ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಗೌರಮ್ಮ ನಲ್ಲಿ ಪ್ರಾರ್ಥಿಸಿದರು.

ಅರ್ಚಕರಾದ ಚಂದ್ರು ಮಾತನಾಡಿ, ಶಿಂಷಾ ನದಿಯ ತೀರದಲ್ಲಿ ಮರಳಿನಿಂದ ಗೌರಮ್ಮನನ್ನು ಮಾಡಿಕೊಂಡು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಇಂದಿನಿಂದ 9 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿದ ನಂತರ ಶಿಂಷಾ ನದಿಯಲ್ಲಿ ವಿಸರ್ಜಿಸಲಾಗುತ್ತದೆ ಎಂದು ತಿಳಿಸಿದರು.