ಸಾರಾಂಶ
ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಮಾರ್ಚ್ ೧೩ರ ಗುರುವಾರ ನಡೆಯುವ ಪ್ರಯುಕ್ತ ನ್ಯಾಯಾಲಯ ಹಾಗೂ ವಕೀಲರ ಸಂಘದ ಸೇವಾರ್ಥದಲ್ಲಿ ವಿಶೇಷ ಪೂಜಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಶ್ರೀ ಸ್ವಾಮಿಯ ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ, ತಧಿ ಆರಾಧನೆ ಸೇವೆ, ಸಹಸ್ರ ನಾಮಾರ್ಚನೆ, ಮಂಗಳಾರತಿ ನೆರವೇರಿಸಿ, ಪಲ್ಲಕ್ಕಿ ಉತ್ಸವದ ಅಡ್ಡೆಯಲ್ಲಿ ಪರಿವಾರ ಸಮೇತ ಶ್ರೀಮನ್ ನಾರಾಯಣ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಮಾರ್ಚ್ ೧೩ರ ಗುರುವಾರ ನಡೆಯುವ ಪ್ರಯುಕ್ತ ನ್ಯಾಯಾಲಯ ಹಾಗೂ ವಕೀಲರ ಸಂಘದ ಸೇವಾರ್ಥದಲ್ಲಿ ವಿಶೇಷ ಪೂಜಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಶ್ರೀ ಸ್ವಾಮಿಯ ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ, ತಧಿ ಆರಾಧನೆ ಸೇವೆ, ಸಹಸ್ರ ನಾಮಾರ್ಚನೆ, ಮಂಗಳಾರತಿ ನೆರವೇರಿಸಿ, ಪಲ್ಲಕ್ಕಿ ಉತ್ಸವದ ಅಡ್ಡೆಯಲ್ಲಿ ಪರಿವಾರ ಸಮೇತ ಶ್ರೀಮನ್ ನಾರಾಯಣ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿ, ರಥ ಬೀದಿಯಲ್ಲಿ ಉತ್ಸವ ಹಾಗೂ ದೇವಾಲಯದ ಪ್ರಾಂಗಣದಲ್ಲಿ ಉತ್ಸವ ನಡೆಸಿದ ನಂತರ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್, ವಕೀಲರ ಕಾರ್ಯದರ್ಶಿ ಸತೀಶ್, ವಕೀಲರಾದ ರಾಮಪ್ರಸನ್ನ, ಪುರುಷೋತ್ತಮ್, ಆರ್.ಡಿ.ರವೀಶ್, ಎ.ಶ್ರೀಧರ್, ಶಿವಕುಮಾರ್, ಜಯಪ್ರಕಾಶ್, ಕೃಷ್ಣಮೂರ್ತಿ, ಶೇಖರಪ್ಪ, ಸುನೀಲ್ ಕುಮಾರ್, ಶಿವಕುಮಾರ್, ಕೆ.ಆರ್.ಸುನೀಲ್, ಆನಂದೇಶ್ವರ, ಎಚ್.ಕೆ.ಶಶಿಕುಮಾರ್, ಲಾವಣ್ಯ, ಮೈತ್ರಿ, ಆಶಾ ಕುಮಾರಿ, ಸಂಗೀತ, ರಾಣಿ, ಜ್ಯೋತಿ, ಅನುಷಾ, ನವೀನ್, ಇತರರು ಪೂಜಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.