ಶ್ರೀವೀರಭದ್ರೇಶ್ವರ ದೇಗುಲದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆ

| Published : Nov 09 2025, 02:00 AM IST

ಸಾರಾಂಶ

ಗ್ರಾಮದ ಯಜಮಾನರು ಹಾಗೂ ಶೆಟ್ಟರು, ದಿ.ಮಲ್ಲಿಕಾರ್ಜುನಪ್ಪ ಕುಟುಂಬದ ನಾಗೇಂದ್ರ, ಶಿವಪ್ಪ, ಹೇಮಂತ್ ಹಾಗೂ ಕುಟುಂಬದವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಾರ್ತಿಕ ಮಾಸದ ಅಂಗವಾಗಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರು.

ಹಲಗೂರು:ಗ್ರಾಮದ ಆರಾಧ್ಯ ದೇವ ನಡುಕೇರಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಕಾರ್ತಿಕ ಮಾಸದ ಅಂಗವಾಗಿ ವಿಶೇಷ ಪೂಜೆಗಳು ನಡೆದವು.ದೇವರ ಮೂರ್ತಿ ಶುಚಿಗೊಳಿಸಿ ಪಂಚಾಮೃತ, ರುದ್ರಾಭಿಷೇಕ ನಡೆಸಿದ ನಂತರ ವಿವಿಧ ರೀತಿಯ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.ಅರ್ಚಕ ತೇಜ್ ಕುಮಾರ್ ಮಾತನಾಡಿ, ಗ್ರಾಮದ ಯಜಮಾನರು ಹಾಗೂ ಶೆಟ್ಟರು, ದಿ.ಮಲ್ಲಿಕಾರ್ಜುನಪ್ಪ ಕುಟುಂಬದ ನಾಗೇಂದ್ರ, ಶಿವಪ್ಪ, ಹೇಮಂತ್ ಹಾಗೂ ಕುಟುಂಬದವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಾರ್ತಿಕ ಮಾಸದ ಅಂಗವಾಗಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಬಂದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿದರು.ಇಂದಿನಿಂದ ಶ್ರೀ ತಿರುಮಲ ತಿರುಪತಿ ಪಾದಯಾತ್ರೆ

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀತಿರುಮಲ ತಿರುಪತಿ ಪಾದಯಾತ್ರಾ ಸೇವಾ ಕೈಂಕರ್ಯ ಟ್ರಸ್ಟ್ ವತಿಯಿಂದ ನ.೯ರಿಂದ ನ.೧೬ರವರೆಗೆ ಈ ವರ್ಷದ ಪಾದಯಾತ್ರೆ ಆಯೋಜಿಸಲಾಗಿದೆ. ಯಾತ್ರೆಯಲ್ಲಿ ಭಾಗವಹಿಸುವ ಯಾತ್ರಿಕರು ಸಮಿತಿಯ ನಿಯಮ, ಶಿಸ್ತನ್ನು ಪಾಲಿಸಿ ಪ್ರತಿದಿನ ಬೆಳಗ್ಗೆ ಸುಪ್ರಭಾತ ಸೇವೆ, ಶ್ರೀವಿಷ್ಣು ಸಹಸ್ರನಾಮ ಸೇವೆಗೆ ಎಲ್ಲ ಯಾತ್ರಿಕರು ಭಾಗವಹಿಸಿ ಯಾತ್ರೆ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ಆರ್.ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

ಈ ವರ್ಷ ಹೊಸದಾಗಿ ಭಾಗವಹಿಸುವ ಯಾತ್ರಿಕರು ಸಮವಸ್ತ್ರ ಶುಲ್ಕ ೧೧೦೦ ರು. ಮತ್ತು ಲಗೇಜ್ ಬಾಕ್ಸ್‌ಗೆ ೮೦೦ ರು.ಗಳನ್ನು ನೀಡಬೇಕು. ಸೂಚಿತ ಸಮವಸ್ತ್ರ ಧರಿಸಿಯೇ ಯಾತ್ರೆಯನ್ನು ಪೂರ್ಣಗೊಳಿಸಬೇಕು. ಯಾತ್ರಿಕರು ತಮಗೆ ಪ್ರತಿನಿತ್ಯ ಅವಶ್ಯವಿರುವ ನೀರಿನ ಬಾಟಲ್, ಛತ್ರಿ, ಔಷಧಗಳು, ತಪ್ಪದೇ ಟಾರ್ಚ್‌ನ್ನು ಜೊತೆಯಲ್ಲಿಯೇ ತರುವಂತೆ ತಿಳಿಸಲಾಗಿದೆ.ದೇವಸ್ಥಾನಗಳಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ

ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶನಿವಾರ ಗ್ರಾಮದ ಕುಂಟನಿಂಗಿ ಸ್ವಾಮಿಗೌಡರ ಕುಟುಂಬ ವರ್ಗದಿಂದ ಎಲ್ಲ ದೇವಸ್ಥಾನಗಳಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿದ ಬಳಿಕ ಗ್ರಾಮದ ಶ್ರೀಆಂಜನೇಯ ಸ್ವಾಮಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.