ಸ್ತ್ರೀ ವೈಭವ ಮಹಿಳಾ ಸಬಲೀಕರಣದ ವಿಶೇಷ ಸೀರೆ ಹಾಗೂ ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಮೇ 22ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಅವಿವಾ ಉಡುಪು ಸಂಸ್ಥೆ ಮಾಲೀಕರು, ಚಿತ್ರನಟಿ ಕಾರುಣ್ಯ ಗೌಡ ತಿಳಿಸಿದ್ದಾರೆ.
- ಚಿತ್ರನಟಿ ಕಾರುಣ್ಯ ಗೌಡ ನೇತೃತ್ವದ ಅವಿವಾ ಸ್ಯಾರೀಸ್ ಸಂಸ್ಥೆ ಆಯೋಜನೆ - - -
- ಶುದ್ಧ ಮೈಸೂರು ಕ್ರೇಪ್, ಬನಾರಸಿ, ಟಿಶ್ಯೂ, ಹ್ಯಾಂಡ್ ಲೂಮ್, ಕಾಟನ್ ವರ್ಕ್ ಸೀರೆಗಳು ಲಭ್ಯ- ಉತ್ತಮ ಗುಣಮಟ್ಟದ, ವಿಶಿಷ್ಟ ವಿನ್ಯಾಸಗಳು ವಿಶೇಷ
- 3 ದಿನಗಳ ಕಾಲ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಮೇಳ- - -
ಕನ್ನಡಪ್ರಭ ವಾರ್ತೆ ದಾವಣಗೆರೆಸ್ತ್ರೀ ವೈಭವ ಮಹಿಳಾ ಸಬಲೀಕರಣದ ವಿಶೇಷ ಸೀರೆ ಹಾಗೂ ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಮೇ 22ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಅವಿವಾ ಉಡುಪು ಸಂಸ್ಥೆ ಮಾಲೀಕರು, ಚಿತ್ರನಟಿ ಕಾರುಣ್ಯ ಗೌಡ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಮೇಳದಲ್ಲಿ ಮಹಿಳೆಯರಿಗಾಗಿ ಉತ್ತಮ ಗುಣಮಟ್ಟದ ಹಾಗೂ ವಿಶಿಷ್ಟ ವಿನ್ಯಾಸಗಳ ಸೀರೆಗಳು ಮತ್ತು ಬೆಳ್ಳಿ ಆಭರಣಗಳು ರಿಯಾಯಿತಿ ದರದಲ್ಲಿ ಲಭ್ಯವಿರಲಿವೆ. ಗ್ರಾಹಕರಿಗೆ ನೇರವಾಗಿ ಉತ್ತಮ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವುದು ಈ ಮೇಳದ ಮುಖ್ಯ ಉದ್ದೇಶ ಎಂದರು.ಅವಿವಾ ಉಡುಪು ಸೀರೆ ಬ್ರ್ಯಾಂಡ್ ಹಾಗೂ ರಾಸ ಸಿಲ್ವರ್ ಜ್ಯುವೆಲ್ಲರಿಯಿಂದ ಮಾರಾಟ ಮೇಳ ಆಯೋಜಿಸಿದ್ದು, ಮೇ 22ರಿಂದ ಮೂರು ದಿನಗಳ ಕಾಲ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಮೇಳ ನಡೆಯಲಿದೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಗಣ್ಯರು, ಅತಿಥಿಗಳನ್ನು ಮೂರು ದಿನದ ಮೇಳಕ್ಕೆ ಆಹ್ವಾನಿಸಲಿದ್ದೇವೆ. ಶುದ್ಧ ಮೈಸೂರು ಕ್ರೇಪ್ ಸೀರೆಗಳು, ಬನಾರಸಿ ಸೀರೆಗಳು, ಟಿಶ್ಯೂ ಸೀರೆಗಳು, ಹ್ಯಾಂಡ್ ಲೂಮ್ ಸೀರೆಗಳು, ಕಾಟನ್ ವರ್ಕ್ ಸೀರೆಗಳು ಸೇರಿದಂತೆ ಅನೇಕ ಹೊಸ ವಿನ್ಯಾಸದ ಸೀರೆ ಮೇಳದಲ್ಲಿ ಲಭ್ಯವಿರಲಿವೆ ಎಂದು ಹೇಳಿದರು.
ರಾಸ ಸಿಲ್ವರ್ ಜ್ಯುವೆಲ್ಲರಿಯಿಂದ ವಿಶ್ವಾಸಾರ್ಹ ಗುಣಮಟ್ಟದ ಹಾಗೂ ಆಧುನಿಕ ಮತ್ತು ಸಾಂಪ್ರಾದಾಯಿಕ ಶೈಲಿಯ ವಿಶಿಷ್ಟ ವಿನ್ಯಾಸದ ಬೆಳ್ಳಿ ಆಭರಣಗಳ ವಿಶೇಷ ಸಂಗ್ರಹದ ಪ್ರದರ್ಶನ ಹಾಗೂ ಮಾರಾಟವಿರುತ್ತದೆ. ಚಿತ್ರನಟಿಯರು ಸಹ ತಮ್ಮ ಬಳಿ ಖರೀದಿ ಮಾಡುತ್ತಾರೆ. ದಾವಣಗೆರೆ ನಗರ, ಜಿಲ್ಲೆಯ ಎಲ್ಲರೂ ಕುಟುಂಬ ಸಮೇತರಾಗಿ ಮಾರಾಟ ಮೇಳಕ್ಕೆ ಬಂದು, ಸೀರೆಗಳು, ಬೆಳ್ಳಿ ಉತ್ಪನ್ನಗಳ ಮೇಳ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಈಗ್ಗೆ ಆರೇಳು ವರ್ಷಗಳ ಹಿಂದೆ ತಾವು ಅವಿವಾ ಸ್ಯಾರೀಸ್ ಸಂಸ್ಥೆ ಆರಂಭಿಸಿದ್ದು, ಮಹಿಳೆಯರು ಸ್ವಾವಲಂಬಿ ಬದುಕನ್ನು ಬಾಳಲು ತಮ್ಮ ಸಂಸ್ಥೆ ಸಹಕಾರಿಯಾಗಿದೆ. ಈಗಾಗಲೇ 5 ಜಿಲ್ಲೆಗಳಲ್ಲಿ ಮಾರಾಟ ಮೇಳ, ಪ್ರದರ್ಶನ ನಡೆಸಿದ್ದು, ಇದೀಗ ದಾವಣಗೆರೆಯಲ್ಲಿ ಆಯೋಜಿಸಿದ್ದೇವೆ ಎಂದು ಅವರು ತಿಳಿಸಿದರು.
ಆಗಸ್ಟ್ ತಿಂಗಳಲ್ಲಿ ತಾವು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, 2015ರಲ್ಲಿ ವಜ್ರಕಾಯ ಸಿನಿಮಾದಲ್ಲಿ ನಟಿಸುವುದರೊಂದಿಗೆ ಸಿನಿಮಾ ಪಯಣ ಆರಂಭಿಸಿದ್ದೇವೆ. ಚಿತ್ರ ನಟನೆಯೊಂದಿಗೆ ನನ್ನಿಂದ ನಾಲ್ಕು ಜನರಿಗೆ ಒಳ್ಳೆಯದಾಗಲೆಂಬ ಸದುದ್ದೇಶದಿಂದ ಸೀರೆಗಳು ಮತ್ತು ಬೆಳ್ಳಿ ವಸ್ತುಗಳ ಪ್ರದರ್ಶನ, ಮಾರಾಟ ಮೇಳ ಆಯೋಜಿಸುವ ಮೂಲಕ ಮಹಿಳಾ ಸ್ವಾವಲಂಬನೆಗೂ ಮುಂದಾಗಿದ್ದೇನೆ ಎಂದು ಕಾರುಣ್ಯ ಗೌಡ ಈ ಸಂದರ್ಭದಲ್ಲಿ ತಿಳಿಸಿದರು.- - -
-20ಕೆಡಿವಿಜಿ3: ಕಾರುಣ್ಯ ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.