ಪ್ರಯಾಣಿಕರ ಬೇಡಿಕೆ ಮತ್ತು ಹೆಚ್ಚುವರಿ ದಟ್ಟಣೆ ನಿಭಾಯಿಸುವ ಸಲುವಾಗಿ ರೈಲ್ವೆಯು ಸೋಲಾಪುರ ವಿಭಾಗದ ನಿಲ್ದಾಣಗಳ ಮೂಲಕ ಬೆಂಗಳೂರು ಕಾಂಟ್ ಮತ್ತು ಬೀದರ್ ನಡುವೆ 4 ದಸರಾ ವಿಶೇಷ ರೈಲು ಸಂಚಾರ ನಡೆಸಲಿದೆ ಎಂದು ಸೇಂಟ್ರಲ್ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

-------

ಕನ್ನಡಪ್ರಭ ವಾರ್ತೆ ಸೋಲಾಪುರ ಪ್ರಯಾಣಿಕರ ಬೇಡಿಕೆ ಮತ್ತು ಹೆಚ್ಚುವರಿ ದಟ್ಟಣೆ ನಿಭಾಯಿಸುವ ಸಲುವಾಗಿ ರೈಲ್ವೆಯು ಸೋಲಾಪುರ ವಿಭಾಗದ ನಿಲ್ದಾಣಗಳ ಮೂಲಕ ಬೆಂಗಳೂರು ಕಾಂಟ್ ಮತ್ತು ಬೀದರ್ ನಡುವೆ 4 ದಸರಾ ವಿಶೇಷ ರೈಲು ಸಂಚಾರ ನಡೆಸಲಿದೆ ಎಂದು ಸೇಂಟ್ರಲ್ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ರೈಲು ಸಂಖ್ಯೆ 06589 ಬೆಂಗಳೂರು ಕಾಂಟ್-ಬೀದರ್ ವಿಶೇಷ ರೈಲು ಬೆಂಗಳೂರು ಕಾಂಟ್‌ನಿಂದ ಅ.16ರಂದು ರಾತ್ರಿ 11ಕ್ಕೆ ಹೊರಟು, ಮರುದಿನ ಮಧ್ಯಾಹ್ನ 02:15ಕ್ಕೆ ಬೀದರ್ ತಲುಪಲಿದೆ.

ರೈಲು ಸಂಖ್ಯೆ 06590 ಬೀದರ್-ಬೆಂಗಳೂರು ಕಾಂಟ್ ವಿಶೇಷ ರೈಲು ಬೀದರ್‌ನಿಂದ ಅ.10ರಂದು ಹಾಗೂ ಅ.17ರಂದು ಸಂಜೆ 04ಕ್ಕೆ ಹೊರಟು, ಮರುದಿನ ಬೆಳಗ್ಗೆ 09:45ಕ್ಕೆ ಬೆಂಗಳೂರು ಕಾಂಟ್ ತಲುಪಲಿದೆ. *ನಿಲುಗಡೆಗಳು: ಹುಮ್ನಾಬಾದ್, ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯಂ ರೋಡ್, ಆದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಮತ್ತು ಯಲಹಂಕಗಳಲ್ಲಿ ರೈಲು ನಿಲುಗಡೆಯಾಗಲಿವೆ.*ರೈಲಿನ ಸಂಯೋಜನೆ: 1 ಎಸಿ-II ಟೈರ್, 3 ಎಸಿ-III ಟೈರ್, 10 ಸ್ಲೀಪರ್‌ ಕ್ಲಾಸ್, 3 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳ ಸಹಿತ ಒಟ್ಟು 19 ಐಸಿಎಫ್ ಕೋಚ್‌ಗಳು ಇರಲಿವೆ. ವಿಶೇಷ ದರದಲ್ಲಿ ಸಂಚರಿಸುವ ಈ ವಿಶೇಷ ರೈಲುಗಳಿಗೆ ಮೀಸಲಾತಿಯನ್ನು ಎಲ್ಲ ಗಣಕೀಕೃತ ಮೀಸಲಾತಿ ಕೇಂದ್ರಗಳಲ್ಲಿ ಮತ್ತು www.irctc.co.in ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಮೀಸಲಾತಿ ರಹಿತ ಕೋಚ್‌ಗಳ ಬುಕಿಂಗನ್ನು ನಿಲ್ದಾಣಗಳ ಬುಕಿಂಗ್ ಕೌಂಟರ್‌ಗಳು ಮತ್ತು ''''''''RailOne'''''''' ಆ್ಯಪ್ ಮೂಲಕವೂ ಮಾಡಬಹುದು. ಈ ವಿಶೇಷ ರೈಲುಗಳು ನಿಲುಗಡೆಗೊಳ್ಳುವ ಸ್ಥಳಗಳು ಮತ್ತು ಸಮಯದ ವಿವರಗಳಿಗಾಗಿ www.enquiry.indianrail.gov.in ಜಾಲತಾಣಕ್ಕೆ ಭೇಟಿ ನೀಡಬಹುದು ಅಥವಾ RailOne ಆ್ಯಪ್, NTES ಆ್ಯಪನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.