ರಾಮಮಂದಿರ ದೇವಸ್ಥಾನದಲ್ಲಿ 9 ದಿನಗಳ ಕಾಲ ವಿಶೇಷ ಪೂಜೆ

| Published : Apr 07 2025, 12:37 AM IST

ಸಾರಾಂಶ

ರಾಮ ಮಂದಿರ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ಭಾನುವಾರದಿಂದ 9 ದಿನಗಳ ಕಾಲ ವಿಶೇಷವಾಗಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾಮ ನಾಮ ಜಪಿಸುವುದರಿಂದ ನಮಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ.

ಕನ್ನಡಪ್ರಭ ವಾರ್ತೆ ಹಲಗೂರು

ರಾಮ ಮಂದಿರ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ಭಾನುವಾರದಿಂದ 9 ದಿನಗಳ ಕಾಲ ವಿಶೇಷವಾಗಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ರಾಮಮಂದಿರ ದೇವಸ್ಥಾನ ಟ್ರಸ್ಟ್ ಸದಸ್ಯ ಗೋವಿಂದರಾಜ್ ತಿಳಿಸಿದರು.

ದೇವಸ್ಥಾನದಲ್ಲಿ ರಾಮದೇವರ ಮೂರ್ತಿಗೆ ಅಭಿಷೇಕ ನಡೆಸಿ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜಾ ಪುನಸ್ಕಾರಗಳ ನಡೆಸಿ ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.

ನಂತರ ಗೋವಿಂದರಾಜು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಭಕ್ತಿ ಪೂರ್ವಕವಾಗಿ ಶ್ರೀರಾಮನವಮಿ ಆಚರಿಸಲಾಗುತ್ತಿದೆ. ದೇವಸ್ಥಾನದಲ್ಲಿ 9 ದಿನಗಳ ಕಾಲ ವಿಶೇಷ ಪೂಜೆ ನಡೆಸಲಾಗುತ್ತದೆ ಎಂದರು.

ಲಲಿತಾಂಬ ಸೋಮಶೇಖರ್ ಮಾತನಾಡಿ, ರಾಮ ನಾಮ ಜಪಿಸುವುದರಿಂದ ನಮಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ. ನಾವುಗಳು ಜೀವನದಲ್ಲಿ ರಾಮನ ಗುಣಗಳನ್ನು ಸೀತೆಯ ಆದರ್ಶವನ್ನು ಅಳವಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ನಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

ಮುತ್ತತ್ತಿಯಲ್ಲೂ ಭಕ್ತರಿಂದ ಶ್ರೀರಾಮನವಮಿ ಆಚರಣೆ

ಹಲಗೂರು:

ಮುತ್ತತ್ತಿ ರಸ್ತೆಯ ತಾಳವಾಡಿ ಆಂಜನೇಯ ದೇವಸ್ಥಾನ ಹಾಗೂ ಪ್ರಸಿದ್ಧ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳ ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಶ್ರೀರಾಮನವಮಿ ಅಂಗವಾಗಿ ದೇವರ ಮೂರ್ತಿಗೆ ಅಭಿಷೇಕ ನಡೆಯಿತು.

ಪ್ರವಾಸಕ್ಕೆ ಬಂದ ಭಕ್ತರಿಗೆ ಪ್ರಸಾದ ನೀಡಲಾಯಿತು. ಈ ವೇಳೆ ರಾಮದೇವರ ಭಕ್ತಾರಾದ ಎನ್. ಕೆ.ಕುಮಾರ್, ಎ. ಎಸ್. ದೇವರಾಜ್, ಮನೋಹರ, ಡಿ.ಎಲ್.ಮಾದೇಗೌಡ, ಎಂ.ಕೆ.ಮಹಾದೇವ, ಕೃಷ್ಣೇಗೌಡ, ಜೈ.ದೇವರಾಜು, ಬಿ.ಕೆ.ಸತೀಶ್, ಯತೆಂದ್ರ, ಸದಾಶಿವ, ಸೇರಿದಂತೆ ಇತರರು ಇದ್ದರು.

ಚನ್ನಪಟ್ಟಣ ರಸ್ತೆ ಸರ್ಕಾರಿ ಆಸ್ಪತ್ರೆ ಮುಂಭಾಗ ರಾಮದೇವರ ಭಕ್ತರಿಂದ ರಾಮನವಮಿ ಅಂಗವಾಗಿ ರಾಮದೇವರ ಭಾವಚಿತ್ರಕ್ಕೆವಿಶೇಷವಾಗಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗಿಸಲಾಯಿತು.