ಸಾರಾಂಶ
ಸೃಷ್ಟಿಯಲ್ಲಿ ಭಗವಂತನು ಎಲ್ಲರಿಗೂ ಸಮಾನ ಆವಕಾಶ ನೀಡಿರುತ್ತಾನೆ. ಅನೇಕ ಕಾರಣಗಳಿಂದ ಭೌದ್ಧಿಕ, ಸಮಾಜಿಕವಾಗಿ, ಅನಾರೋಗ್ಯದಿಂದ ಅಂಗವಿಕರಾಗುತ್ತಾರೆ. ಸರ್ಕಾರದಿಂದ ವಿಶೇಷಚೇತನ ಮಕ್ಕಳಿಗಾಗಿ ನೀಡುವ ಸವಲತ್ತುಗಳ ಬಗ್ಗೆ ತಿಳಿಸುವ ಕೆಲಸವಾಗಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ವಿಶೇಷಚೇತನ ಮಕ್ಕಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯರಂತೆ ಸಾಧನೆ ಮಾಡುತ್ತಿದ್ದಾರೆ ಆವರನ್ನು ಸಮಾಜದಲ್ಲಿ ಸಮಾನವಾಗಿ ಕಾಣಬೇಕು ಎಂದು ನೃತ್ಯಾಲಯ ಟ್ರಸ್ಟ್ ನಿರ್ದೇಶಕಿ ಡಾ. ತುಳಸಿ ರಾಮಚಂದ್ರ ಹೇಳಿದರು.ಕುವೆಂಪುನಗರದ ಗಾನಭಾರತಿಯ ರಮಾ ಗೋವಿಂದ ಕಲಾವೇದಿಕೆಯಲ್ಲಿ ಸಮದೃಷ್ಟಿ, ಕ್ಷಮತಾ ವಿಕಾಸ ಮತ್ತು ಅನುಸಂಧಾನ ಮಂಡಲ ಕರ್ನಾಟಕ ಮೈಸೂರು ಘಟಕದ ವತಿಯಿಂದ ನಡೆದ ರಾಷ್ಟ್ರೀಯ ದಿವ್ಯಾಂಗ ಸಬಲೀಕರಣ ದಿನ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷಚೇತನ ಮಕ್ಕಳನ್ನು ಪಾಲಿಸಿ ಪೊಷಿಸುತ್ತಿರುವ ಪೋಷಕರಿಗೆ ಕೈ ಮುಗಿಯಬೇಕು. ಎಲ್ಲರಂತೆ ಎಲ್ಲಾ ಕ್ಷೇತ್ರದಲ್ಲಿ ಆ ಮಕ್ಕಳಿಗೆ ಸಮಾನ ಅವಕಾಶ ಸಿಗುವಂತೆ ಮಾಡಬೇಕು. ಇತಂಹ ಮಕ್ಕಳನ್ನು ಶಾಲೆಗಳಲ್ಲಿ ನೋಡಿಕೊಂಡು ವಿದ್ಯಾಭ್ಯಾಸ ಕಲಿಸುತ್ತಿರುವ ಶಿಕ್ಷಕರ ತಾಳ್ಮೆಯನ್ನು ಮೆಚ್ಚ ಬೇಕು, ವಿದ್ಯಾರ್ಥಿಗಳು ಕಲಾ ಕ್ಷೇತ್ರದಲ್ಲಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಉತ್ಸಾಹದಿಂದ ಸತೋಷದಿಂದ ಪ್ರಾಮಾಣಿಕವಾಗಿ ತೊಡಗಿಕೊಳ್ಳತ್ತಿದ್ದಾರೆ ಎಂದು ಅವರು ಹೇಳಿದರು.ಸೃಷ್ಟಿಯಲ್ಲಿ ಭಗವಂತನು ಎಲ್ಲರಿಗೂ ಸಮಾನ ಆವಕಾಶ ನೀಡಿರುತ್ತಾನೆ. ಅನೇಕ ಕಾರಣಗಳಿಂದ ಭೌದ್ಧಿಕ, ಸಮಾಜಿಕವಾಗಿ, ಅನಾರೋಗ್ಯದಿಂದ ಅಂಗವಿಕರಾಗುತ್ತಾರೆ. ಸರ್ಕಾರದಿಂದ ವಿಶೇಷಚೇತನ ಮಕ್ಕಳಿಗಾಗಿ ನೀಡುವ ಸವಲತ್ತುಗಳ ಬಗ್ಗೆ ತಿಳಿಸುವ ಕೆಲಸವಾಗಬೇಕು ಎಂದರು.
ಮೈಸೂರು ವಿಭಾಗದ ಸಕ್ಷಮ ಸಂಯೋಜಕ ಅರುಣಾಚಲ ಶರ್ಮ ಮಾತನಾಡಿ, ಸಮಾಜದಲ್ಲಿ ಎಲ್ಲರಿಗೂ ಸಮಾನ ಆವಕಾಶ ಸಿಗಬೇಕು. ವಿಶೇಷಚೇತನ ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೋಳ್ಳಬೇಕಿದೆ ಎಂದು ಹೇಳಿದರು.ವಿವಿಧ ಶಾಲೆಗಳ ವಿಶೇಷಚೇತನ ಮಕ್ಕಳು ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿ ಗಮನ ಸೆಳೆದರು. ಅಧ್ಯಕ್ಷತೆ ವಹಿಸಿದ್ದ ಸಕ್ಷಮ ಮೈಸೂರು ಘಟಕದ ಆಧ್ಯಕ್ಷ ಬಿ.ಎನ್. ಜಯರಾಮ್, ಕಾರ್ಯದರ್ಶಿ ಗಣೇಶ್ ಇದ್ದರು.