ಸಾರಾಂಶ
ವಿಶೇಷಚೇತನರ ಕಾನೂನು ಹಕ್ಕುಗಳ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಹಾಸನ
ವಿಶೇಷಚೇತನರಿಗೆ ಕಾನೂನಿನಲ್ಲಿ ವಿವಿಧ ಹಕ್ಕುಗಳಿದ್ದು, ಸದುಪಯೋಗ ಪಡೆದುಕೊಂಡು ಎಲ್ಲರಂತೆ ಉತ್ತಮ ಜೀವನ ಸಾಗಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ರವಿಕಾಂತ್ ತಿಳಿಸಿದರು.ನಗರದ ಸಾಲಗಾಮೆ ರಸ್ತೆ ಬಳಿ ಇರುವ ಎಂ. ಕೃಷ್ಣ ಅಂಧ ಮಕ್ಕಳ ಶಾಲೆ ಆವರಣದಲ್ಲಿ ಕರ್ನಾಟಕ ಅಂಧರ ಒಕ್ಕೂಟದ ಆಶ್ರಯದಲ್ಲಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶೇಷಚೇತನರ ಕಾನೂನು ಹಕ್ಕುಗಳು ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಗವಿಕಲರು ತಮ್ಮ ಸಾಮಾರ್ಥ್ಯವನ್ನು ಬಳಸಿಕೊಳ್ಳಲು ಅನುಕೂಲಕರ ಪರಿಸರವನ್ನು ಕಲ್ಪಿಸಿಕೊಡಬೇಕು. ಸರ್ಕಾರಕ್ಕೆ ಕಾನೂನು ಮನದಟ್ಟು ಮಾಡುತ್ತದೆ. ಅಂಗವಿಕಲತೆ ಇದೆ ಎಂದು ತಾರತಮ್ಯಕ್ಕೆ ಒಳಪಡಿಸಬಾರದು ಎಂದು ಕಾನೂನು ಸ್ಪಷ್ಟವಾಗಿ ಹೇಳಿದೆ. ಅವರ ವೈಯಕ್ತಿಕ ಸ್ವಾತಂತ್ರ್ಯ ಕಸಿದುಕೊಳ್ಳುವಂತಿಲ್ಲ. ಅಂಗವಿಕಲತೆ ಇರುವ ಮಹಿಳೆಯರು ಮತ್ತು ಮಕ್ಕಳು ಇದ್ದರೆ ಇತರರಂತೆ ಸಮಾನ ಹಕ್ಕು ಇದ್ದರೂ ಪಡೆಯಲು ಸರ್ಕಾರಗಳು ಕ್ರಮವಹಿಸಬೇಕು ಎಂದು ಹೇಳಿದರು.
ವಿಲಚೇತನರನ್ನು ಪ್ರತ್ಯೇಕವಾಗಿ ಹೊರಗೆ ಇಡುವ ಕೆಲಸ ಮಾಡಬಾರದು. ಶುಲ್ಕವಿಲ್ಲದೇ ಕಾನೂನು ಪಡೆಯುವ ಹಕ್ಕುಗಳು ಇದ್ದು, ಉಚಿತವಾಗಿ ನಡೆಸಿಕೊಡಬೇಕು. ಅಂಗವಿಕಲತೆ ಇರುವ ೬ ರಿಂದ ೮ನೇ ತರಗತಿ ಶಾಲೆಗೆ ಹೋಗಲು ಹತ್ತಿರದ ಶಾಲೆಗೆ ಅವಕಾಶ ಕೊಡಲಾಗಿದೆ. ಉನ್ನತ ಶಿಕ್ಷಣಕ್ಕಾಗಿ ಕನಿಷ್ಠ ಐದು ಸ್ಥಾನವನ್ನು ನೀಡಬೇಕು. ಶೇಕಡ ನಾಲ್ಕರಷ್ಟು ಹುದ್ದೆ ಮೀಸಲಿಡಬೇಕು. ಅವರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ವಿಶೇಷ ನ್ಯಾಯಾಲಯ ಮಾಡಲಾಗಿದೆ ಎಂದರು.ಜಿಲ್ಲೆಯಲ್ಲಿ ೮೫ ಸಾವಿರ ಅಂಗವಿಕಲರ ಪ್ರಕರಣ ಬಾಕಿ ಇದ್ದು, ಅಂಗವಿಕಲರ ಕೇಸು ಶೀಘ್ರ ವಿಲೇವಾರಿ ಆಗಬೇಕಿದೆ. ಸರ್ಕಾರವು ಅಂಗವಿಕಲರಿಗೆ ಅನೇಕ ಯೋಜನೆ ಜಾರಿಗೆ ತಂದಿದೆ. ಅವರ ಸರ್ವೋತಮುಖ ಬೆಳವಣಿಗೆಗೆ ಮುಂದಾಗಿದೆ. ವಿಶೇಷಚೇತನರು ಐಡಿ ಕಾರ್ಡ್ ತೆಗೆದುಕೊಂಡರೆ ಸರ್ಕಾರದ ಹಲವಾರು ಯೋಜನೆ ಪಡೆದುಕೊಳ್ಳಬಹುದು. ಕಾನೂನು ಮತ್ತು ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳಬಹುದು. ಸಮಾಜದಲ್ಲಿ ಇತರರಂತೆ ಬದುಕು ನಡೆಸಲು ಅವಕಾಶ ಮಾಡಿಕೊಟ್ಟಿರುವುದರಿಂದ ಸಮಾಜದಲ್ಲಿ ಉತ್ತಮ ಬೆಳವಣಿಗೆ ಆಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಸದಾನಂದ ಶಾಸ್ತ್ರಿ, ವಕೀಲರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಹಿಮ್ಸ್ ನಿರ್ದೇಶಕ ಡಾ. ಸಂತೋಷ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ, ಹಿರಿಯ ಪತ್ರಕರ್ತರಾದ ವೆಂಕಟೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ಚಂದ್ರಕಾಂತ್ ಪಡೆಸೂರು, ಹಿರಿಯ ನಾಗರಿಕರ ವೇದಿಕೆಯ ವನಜಾಕ್ಷಿ, ಕರ್ನಾಟಕ ಅಂಧರ ಒಕ್ಕೂಟದ ಅಧ್ಯಕ್ಷ ಬಿ.ಕೆ. ಮಂಜುನಾಥ್, ಅಂಧ ಮಕ್ಕಳ ಸಂಸ್ಥಾಪಕ ಸದಸ್ಯ ತಮ್ಮಯ್ಯ, ವಕೀಲರಾದ ಪ್ರಸನ್ನ ಇದ್ದರು. ವನಜಾಕ್ಷಿ ನಿರೂಪಿಸಿದರು.ಹಾಸನದ ಎಂ.ಕೃಷ್ಣ ಅಂಧ ಮಕ್ಕಳ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಶೇಷಚೇತನರ ಕಾನೂನು ಹಕ್ಕುಗಳು ಕುರಿತು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ.ರವಿಕಾಂತ್ ಉದ್ಘಾಟಿಸಿದರು.