ವಿಶೇಷ ಚೇತನ ಮಕ್ಕಳಿಗೆ ವಿಶೇಷ ಆರೈಕೆಯೊಂದಿಗೆ ಶಿಕ್ಷಣವು ಬೇಕು-ಡಿಡಿಪಿಐ ಬುರಡಿ

| Published : Mar 19 2025, 12:33 AM IST

ವಿಶೇಷ ಚೇತನ ಮಕ್ಕಳಿಗೆ ವಿಶೇಷ ಆರೈಕೆಯೊಂದಿಗೆ ಶಿಕ್ಷಣವು ಬೇಕು-ಡಿಡಿಪಿಐ ಬುರಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬೌದ್ಧಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ಅಸಾಮರ್ಥ್ಯವನ್ನು ಹೊಂದಿರುವ ವಿಶೇಷ ಚೇತನ ಮಕ್ಕಳಿಗೆ ವಿಶೇಷ ಆರೈಕೆಯೊಂದಿಗೆ ಶಿಕ್ಷಣವು ಬೇಕು. ಆ ನಿಟ್ಟಿನಲ್ಲಿ ಪೋಷಕರು ವಿಶೇಷ ಕಾಳಜಿ ವಹಿಸಬೇಕು ಎಂದು ಡಿಡಿಪಿಐ ಆರ್.ಎಸ್. ಬುರುಡಿ ಹೇಳಿದರು.

ಗದಗ: ಬೌದ್ಧಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ಅಸಾಮರ್ಥ್ಯವನ್ನು ಹೊಂದಿರುವ ವಿಶೇಷ ಚೇತನ ಮಕ್ಕಳಿಗೆ ವಿಶೇಷ ಆರೈಕೆಯೊಂದಿಗೆ ಶಿಕ್ಷಣವು ಬೇಕು. ಆ ನಿಟ್ಟಿನಲ್ಲಿ ಪೋಷಕರು ವಿಶೇಷ ಕಾಳಜಿ ವಹಿಸಬೇಕು ಎಂದು ಡಿಡಿಪಿಐ ಆರ್.ಎಸ್. ಬುರುಡಿ ಹೇಳಿದರು.

ಅವರು ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ, ಗದಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಹರ ವಲಯ, ಬೆಂಗಳೂರಿನ ಫೋರ್ಥ್‌ವೇವ್ ಫೌಂಡೇಶನ್ ಮತ್ತು ಮಿಲ್ಲರ್‌ನೋಲ್ ಫೌಂಡೇಶನ್ ಸಹಯೋಗದಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ನಂ. 10ನೇ ಶಾಲೆಯಲ್ಲಿ ಸಮುದಾಯ ಮತ್ತು ಪಾಲಕರಿಗೆ ವಿಶೇಷ ಚೇತನರ 2016ರ ಹಕ್ಕುಗಳು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗದಗದಲ್ಲಿ ನನಗೂ ಶಾಲೆ ಎಂಬ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಮತ್ತು ಫೋರ್ಥ್‌ವೇವ್ ಫೌಂಡೇಶನ್ ಹಾಗೂ ಮಿಲ್ಲರ್‌ನೋಲ್ ಫೌಂಡೇಸನ್ ಸಹಯೋಗದೊಂದಿಗೆ ಉತ್ತಮವಾದ ರೀತಿಯಲ್ಲಿ ಕಾರ್ಯಮಾಡುತ್ತಿದ್ದು ಗದಗ ಶಹರದ ಮಕ್ಕಳಿಗೆ ಸಮನ್ವಯ ಶಿಕ್ಷಣ ಕೊಡಿಸುವದರಲ್ಲಿ ಮತ್ತು ಮಕ್ಕಳನ್ನು ಮುಖ್ಯ ವಾಹಿನಿಗೆ ತರುವದರಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಜಿಲ್ಲಾ ಹಂತದಲ್ಲಿ ಫಿಜಿಯೋಥೆರಪಿ ಕೇಂದ್ರವನ್ನು ಪ್ರಾರಂಭಿಸಿದರೆ, ಇಲಾಖೆಯಿಂದ ಸಹಕಾರ ಮತ್ತು ಸ್ಥಳದ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದರು. ಫೋರ್ಥ್‌ವೇವ್ ಫೌಂಡೇಶನ್ ಮುಖ್ಯಸ್ಥೆ ರಂಜನಾ ರಿಷಿ, ಫೋರ್ಥ್‌ವೇವ್ ಫೌಂಡೇಶನ್ನಿನ ವಿಕಲಚೇತನರ ವಿಭಾಗದ ಮುಖ್ಯಸ್ಥ ಜಿ.ರವಿ, ಸುಜಾತ ಗಣೇಶ ಮುಂತಾದವರು ಮಾತನಾಡಿದರು. ಎಂ.ಎಚ್. ಕಂಬಳಿ, ಆರ್.ವ್ಹಿ. ಶೆಟ್ಟೆಪ್ಪನ್ನವರ, ರವಿಪ್ರಕಾಶ, ಶಿವಕುಮಾರ ಕುರಿ, ಡಾ. ಶರಣು ಗೋಗೇರಿ, ಎಸ್.ಡಿ. ಕನವಳ್ಳಿ, ಎಸ್.ಪಿ. ಪ್ರಭಯ್ಯನಮಠ, ಎಸ್.ಎ.ನಮಾಜಿ, ಕೆ.ಎಸ್. ಬೇಲೇರಿ, ಇ.ಡಿ. ಹುಗ್ಗೆನ್ನವರ, ಶಶಿಧರ ಚಳಗೇರಿ, ಸುನಿತಾ ತಿಮ್ಮನಗೌಡರ ಮುಂತಾದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ 200 ಪಾಲಕರು ಮತ್ತು ಮಕ್ಕಳು ಭಾಗವಹಿಸಿದ್ದರು. ಪ್ರತಿಯೊಂದು ಮಗುವಿಗೂ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಬಸವರಾಜ ಮ್ಯಾಗೇರಿ, ನಿರೂಪಿಸಿದರು, ಶಶಿದರ ಚಳಗೇರಿ ವಂದಿಸಿದರು.