ಭಾಷಣ ಸ್ಪರ್ಧೆ: ಆಲತ್ತೂರಿನ ವಿದ್ಯಾರ್ಥಿನಿ ಸಿಂಚನ ಪ್ರಥಮ

| Published : Feb 17 2025, 12:30 AM IST

ಸಾರಾಂಶ

ಚಾಮರಾಜನಗರ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಿಲ್ಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ಗುಂಡ್ಲುಪೇಟೆ ತಾಲೂಕು ಆಲತ್ತೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿಂಚನ ಎಂ. ಪ್ರಥಮ ಬಹುಮಾನ ಪಡೆದರು.

ಚಾಮರಾಜನಗರ: ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಿಲ್ಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ಗುಂಡ್ಲುಪೇಟೆ ತಾಲೂಕು ಆಲತ್ತೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿಂಚನ ಎಂ. ಪ್ರಥಮ ಬಹುಮಾನ ಪಡೆದರು.

ಸ್ಪರ್ಧಿಗಳ ವಿವರ ಇಂತಿದೆ: ಗುಂಡ್ಲುಪೇಟೆ ತಾಲೂಕು ಆಲತ್ತೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿಂಚನ ಎಂ.ಪ್ರಥಮ ಬಹುಮಾನ, ಹನೂರು ತಾಲೂಕು ಕೆಂಪಯ್ಯನ ಹಟ್ಟಿ ಸರ್ಕಾರಿ ಪ್ರೌಢಶಾಲೆಯ ಶಬರಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಹೊಂಗನೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅನ್ನಪೂರ್ಣ, ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಐಶ್ವರ್ಯ, ಆದರ್ಶ ವಿದ್ಯಾಲಯದ ತೇಜಸ್ವಿನಿ, ನಂಜದೇವನಪುರ ಸರ್ಕಾರಿ ಪ್ರೌಢಶಾಲೆಯ ನಾಗರತ್ನ, ಕೊಳ್ಳೇಗಾಲ ತಾಲೂಕಿನ ನಿಸರ್ಗ ವಿದ್ಯಾನಿಕೇತನದ ದಿವ್ಯಶ್ರೀ, ಗುಂಡ್ಲುಪೇಟೆ ತಾಲೂಕು ಸೂರಾಪುರ ಸರ್ಕಾರಿ ಪ್ರೌಢಶಾಲೆಯ ಲಕ್ಷ್ಮೀ, ಚಿಕ್ಕಾಟೆ ಸರ್ಕಾರಿ ಪ್ರೌಢಶಾಲೆಯ ನಂದನ್, ಚಾಮರಾಜನಗರ ಜೆಎಸ್ಎಸ್ ಪ್ರೌಢಶಾಲೆಯ ಯೋಗೇಶ್, ಗುಂಡ್ಲುಪೇಟೆ ತಾಲೂಕು ಅಣ್ಣೂರು ಕೇರಿ ಸರ್ಕಾರಿ ಪ್ರೌಢಶಾಲೆಯ ನೇತ್ರಾವತಿ ಪ್ರಶಂಸನಾ ಬಹುಮಾನ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್ ತಿಳಿಸಿದ್ದಾರೆ.