ಸಾರಾಂಶ
ಕನ್ನಡಪ್ರಭ ವಾರ್ತೆ ನ್ಯಾಮತಿ
ಆತ್ಮ, ಮಹಾತ್ಮ, ದೇವಾತ್ಮರೆಲ್ಲರಿಗೂ ಪರಮಪಿತ ಒಬ್ಬನೇ ಆಗಿದ್ದಾನೆ ಎಂದು ಹಲಗೇರಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಕಸ್ತೂರಿ ಅಕ್ಕ ತಿಳಿಸಿದರು.ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದಲ್ಲಿ ಆಯೋಜಿಸಿದ್ದ ಮಹಾ ಶಿವರಾತ್ರಿ ಶಾಂತಿ ಧರ್ಮ ಸಂದೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಯಾವುದೇ ಜಾತಿ, ಪಂತ, ಧರ್ಮ ಭೇದವಿಲ್ಲದ ಸಂಸ್ಥೆ ಇದು ಇತರೆ ಸಂಸ್ಥೆಗಳಿಗಿಂತ ಭಿನ್ನ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸನಾತನ ಧರ್ಮ ಉಳಿಸಿ ಬೆಳೆಸುವ ಕೆಲಸ ಮಾಡುತ್ತಾ ವಿಶ್ವದ 140 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ 45 ಸಾವಿರ ಪಾಠ ಶಾಲೆಗಳಲ್ಲಿ 45 ಸಾವಿರ ಅಕ್ಕಂದಿರು ವಿಶ್ವಾದ್ಯಂತ ಪುಣ್ಯ ಕಾರ್ಯದಲ್ಲಿ ನಿರತರಾಗಿ ನಾವೆಲ್ಲರೂ ಒಂದೇ ಈಶ್ವರನ ಮಕ್ಕಳು, ಒಂದು ಪರಿವಾರ ಎನ್ನುವ ಸಂದೇಶ ಸಾರುತ್ತಾ ಸಂಸ್ಥೆ ಯಾವುದೇ ಫಲಾಫಲಗಳ ನಿರೀಕ್ಷಿಸದೇ ಆಧ್ಯಾತ್ಮಿಕ ಚಿಂತನೆಯ ಜ್ಞಾನ ಉಚಿತವಾಗಿ ನೀಡುತ್ತಿದೆ ಎಂದರು.
ಈಶ್ವರಿ ವಿಶ್ವವಿದ್ಯಾಲಯದ ವಂದನಕ್ಕ ಮಾತನಾಡಿ ಮನಸ್ಸು ಹೇಗೇ ಯೋಚಿಸುತ್ತದೋ ಹಾಗೆ ಇರುತ್ತೇವೆ. ನಾವು ಸ್ವಸ್ಥನಾಗಿದ್ದೇನೆ ಎಂದು ಭಾವಿಸಬೇಕು ಆಗ ನಮ್ಮ ಕಷ್ಟಗಳು ದೂರವಾಗಿ ಉತ್ತಮ ಜೀವನ ನಡೆಸಲು ಅನುಕೂಲವಾಗುತ್ತದೆ ಎಂದು ಹೇಳಿದರು.ಬೇಡ ಜಂಗಮ ಸೇವಾ ಸಮಾಜದ ಮಾಧ್ಯಮ ವಕ್ತಾರ ಎಂ.ಎಸ್.ಶಾಸ್ತ್ರಿ ಹೊಳೆಮಠ ಮಾತನಾಡಿ ಮನುಷ್ಯ ತನಗೆ ಬೇಕಾದ ಶಾಂತಿ, ನೆಮ್ಮದಿಯ ಮಾರುಕಟ್ಟೆಯಲ್ಲಿ ಖರೀದಿಸಲು ಸಾಧ್ಯವಿಲ್ಲ. ಅಲ್ಲಿ ವಸ್ತುಗಳು ಮಾತ್ರ ಖರೀದಿಸಲು ಸಾಧ್ಯ ಆದರೆ ಮನಸ್ಸಿಗೆ ಬೇಕಾದ ಶಾಂತಿ ನೆಮ್ಮದಿಯ ದೇವರ ದರ್ಶನ ಹಾಗೂ ಪ್ರವಚನಗಳ ಕೇಳುವುದರಿಂದ ಪಡೆಯಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸದಾಶಿವಯ್ಯ ಮರಿದೇವರ ಮಠ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖಂಡರು ಸೇರಿ ಮತ್ತಿತರರಿದ್ದರು.