ಸಂಸ್ಕಾರ ನೀಡಲು ಆಧ್ಯಾತ್ಮಿಕ ಚಿಂತನೆಗಳು ಮುಖ್ಯ

| Published : Dec 04 2024, 12:30 AM IST

ಸಾರಾಂಶ

ಮಾನವನ ಜೀವನದಲ್ಲಿ ಯಾವುದೂ ಶಾಶ್ವತವಲ್ಲ, ಬರುವಾಗಲೂ ಬೆತ್ತಲೆ, ಹೋಗುವಾಗಲೂ ಬೆತ್ತಲೆ, ಜೀವನದಲ್ಲಿ ನೆಮ್ಮದಿ, ಶಾಂತಿ ಮುಖ್ಯ

ಗದಗ: ವಿವೇಕಾನಂದ ನಗರದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ದರ್ಶನ ಕಾರ್ಯಕ್ರಮ ಈಚೆಗೆ ಜರುಗಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿವಶರಣೆ ಮುಕ್ತಾತಾಯಿ ಶಿವಾನಂದಮಠ ಮಾತನಾಡಿ, ಮಾನವನ ಜೀವನದಲ್ಲಿ ಯಾವುದೂ ಶಾಶ್ವತವಲ್ಲ, ಬರುವಾಗಲೂ ಬೆತ್ತಲೆ, ಹೋಗುವಾಗಲೂ ಬೆತ್ತಲೆ, ಜೀವನದಲ್ಲಿ ನೆಮ್ಮದಿ, ಶಾಂತಿ ಮುಖ್ಯ ಎಂದರು.

ಅಧ್ಯಕ್ಷತೆ ವಹಿಸಿ ಸಮಿತಿಯ ಅಧ್ಯಕ್ಷ ಎಂ.ಎಸ್. ಕಾಮನಹಳ್ಳಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಹಬ್ಬಗಳು, ಆಧ್ಯಾತ್ಮಿಕ ಚಿಂತನೆಗಳು ಮಾನವನ ಬದುಕಿನಲ್ಲಿ ಸಂಸ್ಕಾರ ನೀಡಲು ಅತಿ ಮುಖ್ಯ ಎಂದರು. ವಿಶ್ವನಾಥನ ಪಾಲಕಿಸೇವೆ ಆನಂತರ ಕಾರ್ತಿಕೋತ್ಸವ ನೆರವೇರಿತು. ಕಸ್ತೂರಿಬಾಯಿ ಕಮ್ಮಾರ ಸ್ವಾಗತ ಗೀತೆ ಹಾಡಿದರು. ಬಿ.ಎಚ್. ಗರಡಿಮನಿ ಸ್ವಾಗತಿಸಿದರು. ವೈ.ಬಿ. ದೇವರಕುಂದಿ, ಕೆ.ಪಿ. ಗುಳಿಗೌಡರ ಹಾಗೂ ಪುಷ್ಪಲತಾ ಚಿಕ್ಕಣ್ಣವರ ಅವರನ್ನು ಸನ್ಮಾನಿಸಲಾಯಿತು. ಸಮಿತಿಯ ಗೌರವಾಧ್ಯಕ್ಷ ಜಿ.ಜಿ. ಕುಲಕರ್ಣಿ ಉಪಸ್ಥಿತರಿದ್ದರು. ಕೆ.ಐ. ಕುರಗೋಡ ಕಾರ್ಯಕ್ರಮ ನಿರೂಪಿಸಿದರು. ಬಿ.ಎಚ್. ಗರಡಿಮನಿಯವರು ವಂದಿಸಿದರು.

ಸಮಿತಿಯ ಸಹ ಕೋಶಾಧ್ಯಕ್ಷ ಆರ್.ಬಿ. ಒಡೆಯರ, ಮಹಾದೇವಿ ಗೋಗೇರಿ, ರಾಧಿಕಾ ಬಂದಮ್ಮ, ಸದಸ್ಯರಾದ ಬಿ.ಎನ್. ಯರನಾಳ, ಶಂಕರ ಹಾನಗಲ್ಲ, ಎಸ್.ಎಸ್. ಪಾಟೀಲ, ಪುಷ್ಪಾ ಭಂಡಾರಿ, ಶ್ರೀದೇವಿ ಪಾಟೀಲ, ಲಲಿತಾ ಕಾಮನಹಳ್ಳಿ, ಶಾಂತಾ ತುಪ್ಪದ, ಬಸುರಾಜ, ಪ್ರಭುಸ್ವಾಮಿ, ಮೇದರಗಿ, ಕೊಟಗಿ, ಜಿ.ಬಿ. ಗಾರವಾಡ, ಯಾಳಗಿ, ಟಿ.ಎನ್. ಗೋಡಿ ಮುಂತಾದವರು ಪಾಲ್ಗೊಂಡಿದ್ದರು.