ಆಧ್ಯಾತ್ಮ, ಸಂಸ್ಕೃತಿ ಭಾರತ ದೇಶದ ಸಂಪತ್ತು: ರುದ್ರಮುನಿ ಶ್ರೀ

| Published : Jul 28 2025, 12:30 AM IST

ಆಧ್ಯಾತ್ಮ, ಸಂಸ್ಕೃತಿ ಭಾರತ ದೇಶದ ಸಂಪತ್ತು: ರುದ್ರಮುನಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ಆಧ್ಯಾತ್ಮದಡಿ ತನ್ನೆಲ್ಲ ಸಂಸ್ಕೃತಿ- ಸಂಪತ್ತನ್ನು ಇಟ್ಟುಕೊಂಡಿರುವ ಏಕೈಕ ದೇಶ ಎಂದರೆ ಅದು ಭಾರತ ಎಂದು ರಂಭಾಪುರಿ ಶಾಖಾ ಮಠ ಬೀರೂರಿನ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮಿ ಅಭಿಮತ ವ್ಯಕ್ತಪಡಿಸಿದರು.

ಬೀರೂರಿನ ಶ್ರೀಮರುಳಸಿದ್ದೇಶ್ವರ ಗದ್ದಿಗೆ ಆವರಣದಲ್ಲಿ ಆಯೋಜಿಸಿದ್ದ ‘ಶ್ರಾವಣಸಂಜೆ ಶರಣರ ಸಂದೇಶ’ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಬೀರೂರುಆಧ್ಯಾತ್ಮದಡಿ ತನ್ನೆಲ್ಲ ಸಂಸ್ಕೃತಿ- ಸಂಪತ್ತನ್ನು ಇಟ್ಟುಕೊಂಡಿರುವ ಏಕೈಕ ದೇಶ ಎಂದರೆ ಅದು ಭಾರತ ಎಂದು ರಂಭಾಪುರಿ ಶಾಖಾ ಮಠ ಬೀರೂರಿನ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮಿ ಅಭಿಮತ ವ್ಯಕ್ತಪಡಿಸಿದರು.ಬೀರೂರಿನ ಶ್ರೀಮರುಳಸಿದ್ದೇಶ್ವರ ಗದ್ದಿಗೆ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಹೋಬಳಿ ಘಟಕ ಆಯೋಜಿಸಿದ್ದ ‘ಶ್ರಾವಣಸಂಜೆ ಶರಣರ ಸಂದೇಶ’ ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಆಶೀರ್ವಚನ ನೀಡಿದರು. ಆಧ್ಯಾತ್ಮಿಕ ಹಾದಿ ತಪ್ಪಿದರೆ ನಮ್ಮ ಬದುಕು ಅಧೋಗತಿಗೆ ಹೋಗುತ್ತಿತ್ತು. ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಸನಾತನ, ಶರಣರ ಸಂಸ್ಕೃತಿ, ರೇಣುಕಾಚಾರ್ಯ, ಬಸವಣ್ಣನಂತಹ ಅನೇಕ ದಾರ್ಶನಿಕರ ಆದರ್ಶಗಳನ್ನು ಎತ್ತಿ ಹಿಡಿದಿರುವ ದೇಶ ಭಾರತ ಎಂದರು. ಕವಿಗಳ, ದಾರ್ಶನಿಕರ, ಶಿವಶರಣರ ವಚನ ಓದಿ ಮನನ ಮಾಡಿಕೊಳ್ಳಬೇಕು ಮರಕ್ಕಿಂತ ಮರ ದೊಡ್ಡದು ಎಂಬಂತೆ ಒಳ್ಳೆಯ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಜೀವನಕ್ಕೆ ಅಳವಡಿಸಿಕೊಂಡು ಶರಣರ ಆಶಯದಂತೆ, ಆಚಾರ್ಯರ ಮಾರ್ಗ ದರ್ಶನದಂತೆ ನಡೆಯಬೇಕು ಆಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಬೆಲೆ ಸಿಗುತ್ತದೆ ಎಂದರು. ಸಾವಿರಾರು ವರ್ಷಗಳ ಹಿಂದೆ ವೇದ, ಉಪನಿಷತ್ತು, ಪುರಾಣಗಳಲ್ಲಿನ ಸಾರ ಶರಣರ ವಚನಗಳಿಗೆ ಹೋಲಿಕೆ ಯಾಗುತ್ತದೆ. ಬಸವೇಶ್ವರರಿಗಿಂತ ಮುಂಚಿತವಾಗಿಯೆ 24 ಶರಣರು ನೀಡಿದ ಸಂದೇಶಗಳು ಬಸವೇಶ್ವರರ ಕಾಲದ ಶಿವ-ಶರಣರು ಮುಂದುವರಿಸಿಕೊಂಡು ಬಂದರು ಎಂದರೆ ತಪ್ಪಾಗದು. ಸಿದ್ದಾಂತ ಶಿಖಾಮಣಿಯನ್ನು ಓದಿ ಆಚರಣೆ ಮಾಡಿದರೆ ಎಲ್ಲವೂ ತಿಳಿಯುತ್ತದೆ ನಿಮ್ಮಲ್ಲಿರುವ ಅಜ್ಞಾನದ ಕತ್ತಲೆ ತೊಳೆಯುತ್ತದೆ ಎಂಬ ಸಂದೇಶವನ್ನು ಶ್ರೀಗಳು ನೀಡಿದರು. ಪ್ರಾಸ್ತಾವಿಕವಾಗಿ ಪರಿಷತ್ತಿನ ತಾಲೂಕು ಅಧ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿ, ಶ್ರಾವಣ ಮಾಸದಲ್ಲಿ ನಿತ್ಯ ಒಂದೊಂದು ಮನೆ ಯಲ್ಲಿ ಶರಣ ಸಂದೇಶ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಶರಣರ ವಿಚಾರಧಾರೆ ಮೆಲುಕು ಹಾಕುವ ಹಾಗೂ ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳ ಬಗ್ಗೆ ಚಿಂತಕರಿಂದ ಉಪನ್ಯಾಸ ನಡೆಯಲಿದೆ. ಸಮ ಸಮಾಜ ನಿರ್ಮಾಣಕ್ಕೆ, ಜನರಲ್ಲಿ ಶರಣರ ಚಿಂತನೆಗಳ ಬಗ್ಗೆ ಆಸಕ್ತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಜಾತಿ, ಮತ, ಪಂಥಗಳಿಲ್ಲದೆ ಸರ್ವ ಜನಾಂಗದ ಮನೆಗಳಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕ್ಯಾತನಬೀಡು ರವೀಶ್ಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೋಣ. ಬದುಕನ್ನು ಶುದ್ದೀಕರಿಸಿ ಕೊಳ್ಳೋಣ, ವಚನಗಳ ಸಾರ ನಮ್ಮ ಬದುಕನ್ನು ಕಟ್ಟಿ ಕೊಡುತ್ತದೆ ಎಂದರು. ಶರಣೆ ಪುಪ್ಪಾ ಕೆ.ಬಿಮಲ್ಲಿಕಾರ್ಜುನ್ ಮತ್ತು ಮಾರ್ಗದ ಮಧು ಉದ್ಘಾಟಿಸಿ, ಶರಣರ ಕುರಿತು ಮಾತನಾಡಿದರು. ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸಾಹಿತಿ ಚಟ್ನಹಳ್ಳಿ ಮಹೇಶ್ ಉಪನ್ಯಾಸದಲ್ಲಿ ವರ್ತಮಾನದ ಜಂಜಾಟ, ಮಾರ್ಗೋಪಾಯಗಳನ್ನು ವಚನ ಸಾಹಿತ್ಯದ ಮೂಲಕ ಅನಾವರಣ ಮಾಡಿದರು. ಪುರಸಭೆ ಮಾಜಿ ಅಧ್ಯಕ್ಷೆ ಸವಿತಾರಮೇಶ್ ಆಶಯ ನುಡಿಗಳನ್ನು ನುಡಿದರು,ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ ಪಡೆದ ಕಡೂರಿನ ಶಿಕ್ಷಕಿ ಪಿ.ಎಂ.ಉಷಾ, ಎ.ಜೆ. ಪ್ರಕಾಶ್ಮೂರ್ತಿ ಅವರ ಪುತ್ರ ಎ.ಪಿ.ಷಡ್ಜಯ್ ‘ಗುರುರಕ್ಷೆ’ ಸ್ವೀಕರಿಸಿದರು, ಗೌರಾಪುರ ಮಂಜುನಾಥ ಸ್ವಾಮಿ ಅರಳು ಮಲ್ಲಿಗೆ ಪುಸ್ತಕ ಬಿಡುಗಡೆ ಮಾಡಲಾಯಿತು. ಬೀರೂರು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ ಶರಣರ ಕುರಿತು ಮಾತನಾಡಿದರು. ಕೆ.ಎಸ್.ಸಂಪತ್‌ ಕುಮಾರ್, ಕೆ.ಬಿ.ಬಸವರಾಜಪ್ಪ, ಅರೆಕಲ್ಲು ಪ್ರಕಾಶ್, ಎಂ.ರಂಗಪ್ಪ, ಸುಜಾತ ಜಡೆಮಲ್ಲಪ್ಪ, ನಿರ್ಮಲ ಉಪಸ್ಥಿತರಿದ್ದರು. ಶ್ರೀ ರೇಣುಕಾ ಚಾರ್ಯ ಸಾಂಸ್ಕೃತಿಕ ಸಂಘ ಆತಿಥ್ಯ ವಹಿಸಿ ನಡೆಸಿಕೊಟ್ಟಿತು.ಕುಮಾರಿ ಶಾರ್ವರಿ ನೃತ್ಯ ಪ್ರದರ್ಶನ, ಅಕ್ಕಮಹಾದೇವಿ ಮಹಿಳಾ ಸಮಾಜದ ಮಹಿಳೆಯರ ವಚನ ಗಾಯನ, ಶ್ರೀ ವೀರ ಭದ್ರೇಶ್ವರ ಯುವಕ ಸಂಘ, ಭದ್ರಕಾಳಿ ಮಹಿಳಾ ಸಮಾಜ, ವೀರಶೈವ ಲಿಂಗಾಯತ ನೌಕರ ಕ್ಷೇಮಾಭಿವೃದ್ಧಿ ಸಂಘ ಬೀರೂರು ಅವರ ಸಹಕಾರದೊಂದಿಗೆ ಶ್ರಾವಣ ಸಂಜೆ ಯಶಸ್ವಿಯಾಗಿ ನಡೆಯಿತು. 27 ಬೀರೂರು 1ಬೀರೂರಿನ ಶ್ರೀ ಮರುಳಸಿದ್ದೇಶ್ವರ ಗದ್ದುಗೆಯ ಆವರಣದಲ್ಲಿ ಶರಣ ಸಾಹಿತ್ಯ ಪರಿಷತ್ತು ಶ್ರಾವಣ ಸಂಜೆ ಶರಣರ ಸಂದೇಶ ಕಾರ್ಯಕ್ರಮವನ್ನು ಶರಣೆ ಪುಷ್ಪ ಕೆ.ಬಿ.ಮಲ್ಲಿಕಾರ್ಜುನ್, ಮಾರ್ಗದ ಮಧು ಉದ್ಘಾಟಿಸಿದರು, ಬೀರೂರು, ಕಡೂರು ಶ್ರೀಗಳು, ವಿರೂಪಾಕ್ಷಪ್ಪ, ಬಸಪ್ಪ, ಚಟ್ನಹಳ್ಳಿ ಮಹೇಶ್ ಮತ್ತಿತರರು ಇದ್ದರು.