ಸಾರಾಂಶ
ಚಿಕ್ಕಮಗಳೂರು, ಆಟೋ ಚಾಲಕರು ದೈನಂದಿನ ವೃತ್ತಿ ಬದುಕಿನ ಒತ್ತಡ ನಿಯಂತ್ರಿಸಲು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಂಡು ಬದುಕನ್ನು ಸುಲಲಿತವಾಗಿಸಲು ಸಾಧ್ಯ ಎಂದು ಬಸವನಹಳ್ಳಿ ಠಾಣೆ ಪೊಲೀಸ್ ಉಪ ನಿರೀಕ್ಷಕ ಬಾಬುದ್ದೀನ್ ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಟೋ ಕಪ್- 2024 ಕ್ರಿಕೆಟ್ ಪಂದ್ಯಾವಳಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಆಟೋ ಚಾಲಕರು ದೈನಂದಿನ ವೃತ್ತಿ ಬದುಕಿನ ಒತ್ತಡ ನಿಯಂತ್ರಿಸಲು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಂಡು ಬದುಕನ್ನು ಸುಲಲಿತವಾಗಿಸಲು ಸಾಧ್ಯ ಎಂದು ಬಸವನಹಳ್ಳಿ ಠಾಣೆ ಪೊಲೀಸ್ ಉಪ ನಿರೀಕ್ಷಕ ಬಾಬುದ್ದೀನ್ ಹೇಳಿದರು.
ನಗರದ ದೀಪಾ ನರ್ಸಿಂಗ್ ಹೋಂ ರಸ್ತೆ ಪಟಾಕಿ ಮೈದಾನದಲ್ಲಿ ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ 69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ಧ ಆಟೋ ಕಪ್ -2024 ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಹಗಲು, ರಾತ್ರಿ ಸನ್ನದೇ ಸಾರ್ವಜನಿಕವಾಗಿ ದುಡಿಯುವ ಆಟೋ ಚಾಲಕರಿಗೆ ಸಂಘ ದಿಂದ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ , ಪರಸ್ಪರ ವೈಮನಸ್ಸನ್ನು ದೂರವಿರಿಸಿ ಸ್ನೇಹದಿಂದ ಪಂದ್ಯಾವಳಿಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.ದೈಹಿಕ ಚಟುವಟಿಕೆ ಮುಂದುವರಿದ ಭಾಗವೇ ಕ್ರೀಡೆ, ಪ್ರತಿಯೊಬ್ಬರೂ ಕ್ರೀಡೆ ಬಗ್ಗೆ ಆಸಕ್ತಿ ಹಾಗೂ ಮಹತ್ವ ಅರಿತು ಕೊಳ್ಳಬೇಕಾದ ಅಗತ್ಯವಿದೆ. ಇಂದಿನ ಯುವ ಜನತೆ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಶಕ್ತರಾಗಬೇಕು ಎಂದರು.
ಕನ್ನಡಪರ ಹೋರಾಟಗಾರ ಕೃಷ್ಣಮೂರ್ತಿ ಮಾತನಾಡಿ, ಕ್ರೀಡೆ ಹಾಗೂ ದೈಹಿಕ ವ್ಯಾಯಾಮ ಪ್ರತಿಯೊಬ್ಬರ ಅವಿಭಾಜ್ಯ ಅಂಗವಾಗಬೇಕು. ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ದೈನಂದಿನ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಅನಾರೋಗ್ಯವು ಸಮೀಪವು ಸುಳಿಯುವುದಿಲ್ಲ ಎಂದು ಹೇಳಿದರು.ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ, ಪ್ರಸ್ತುತ ಕ್ರಿಕೇಟ್ ಪಂದ್ಯಾವಳಿಯಲ್ಲಿ ಆರು ಆಟೋ ಚಾಲಕರ ತಂಡವು ನೊಂದಾಯಿಸಿದೆ. 6 ಓವರ್‌ನ ಪಂದ್ಯಾವಳಿ ಇದಾಗಿದ್ದು ವಿಜೇತರಾದ ಪ್ರಥಮ ಹಾಗೂ ದ್ವಿತೀಯ ತಂಡಕ್ಕೆ ನಗದು ಹಾಗೂ ಪಾರಿತೋಷಕ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕ ಧನಂಜಯ್, ನಗರಸಭಾ ಸದಸ್ಯ ಅರುಣ್, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಉದಯ್‍ಕುಮಾರ್, ನಗರಾಧ್ಯಕ್ಷ ರಾಮೇಗೌಡ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಮಾಜಿ ಅಧ್ಯಕ್ಷರಾದ ನಟರಾಜ್ ಕೋಟೆ, ಮಂಜುನಾಥ್ ಮಿಲ್ಟ್ರಿ, ಮುಖಂಡರಾದ ದಂಟರಮಕ್ಕಿ ಮಂಜುನಾಥ್, ಆಟೋ ಚಾಲಕರಾದ ಯಶ್ವಂತ್, ಈಶ್ವರ್, ಅಶ್ವಥ್, ರಾಜು ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 22 ಕೆಸಿಕೆಎಂ 4ಚಿಕ್ಕಮಗಳೂರಿನ ದೀಪಾ ನರ್ಸಿಂಗ್ ಹೋಂ ರಸ್ತೆಯ ಪಟಾಕಿ ಮೈದಾನದಲ್ಲಿ ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಆಟೋ ಕಪ್ -2024 ಕ್ರಿಕೇಟ್ ಪಂದ್ಯಾವಳಿಗೆ ಉಪ ನಿರೀಕ್ಷಕ ಬಾಬುದ್ದೀನ್ ಚಾಲನೆ ನೀಡಿದರು. ಸಬ್ ಇನ್ಸ್‌ಸ್ಪೆಕ್ಟರ್ ಧನಂಜಯ್, ಕೃಷ್ಣಮೂರ್ತಿ, ಜಗದೀಶ್ ಕೋಟೆ ಇದ್ದರು.