ಕ್ರೀಡಾ ಚಟುವಟಿಕೆ ಸಮಸ್ಯೆ ನಿಭಾಯಿಸುವ ಶಕ್ತಿ ನೀಡುತ್ತದೆ: ರಾಜೇಶ್ ಎ.ಆರ್.

| Published : Feb 26 2024, 01:35 AM IST

ಕ್ರೀಡಾ ಚಟುವಟಿಕೆ ಸಮಸ್ಯೆ ನಿಭಾಯಿಸುವ ಶಕ್ತಿ ನೀಡುತ್ತದೆ: ರಾಜೇಶ್ ಎ.ಆರ್.
Share this Article
  • FB
  • TW
  • Linkdin
  • Email

ಸಾರಾಂಶ

ಕುಂಜಿಬೆಟ್ಟಿನ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟ ನಡೆಯಿತು. ಉಡುಪಿ ವಕೀಲರ ಸಂಘ ಕಾರ್ಯದರ್ಶಿ ಹಾಗೂ ವಕೀಲ ರಾಜೇಶ್ ಎ. ಆರ್. ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸುವುದರಿಂದ ದೈನಂದಿನ ಪಾಠಪ್ರವಚನಗಳ ಒತ್ತಡವನ್ನು ನಿವಾರಿಸಿಕೊಳ್ಳಲು ಸಾಧ್ಯ. ಕ್ರೀಡೆಗಳು ಸೋಲು ಹಾಗೂ ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾ ಸ್ಫೂತಿ೯ಯನ್ನು ಕಲಿಸುತ್ತದೆ. ಇದು ಮುಂದೆ ಜೀವನದಲ್ಲಿ ಮತ್ತು ವೃತ್ತಿಯಲ್ಲಿ ಬರುವ ಸಮಸ್ಯೆಗಳನ್ನು ಕ್ರೀಡಾ ಸ್ಪೂರ್ತಿಯಿಂದ ಸ್ವೀಕರಿಸುವ ಮತ್ತು ಅವುಗಳನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯ ಬರುತ್ತದೆ ಎಂದು ಉಡುಪಿಯ ವಕೀಲರ ಸಂಘದ ಕಾರ್ಯದರ್ಶಿ ಮತ್ತು ವಕೀಲ ರಾಜೇಶ್ ಎ. ಆರ್. ಅವರು ಅಭಿಪ್ರಾಯಪಟ್ಟದರು.

ಅವರು ನಗರದ ಕುಂಜಿಬೆಟ್ಟಿನ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಆಯೋಜಿಸಿದ್ದ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ವಿದ್ಯೆ ಉದ್ಯೋಗವನ್ನು ನೀಡಿದರೆ ಕ್ರೀಡೆ ಆರೋಗ್ಯವನ್ನು ನೀಡುತ್ತದೆ ಎಂದು ಹೇಳಿದರು.ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಮತ್ತು ಕಾನೂನು ವಿಭಾಗದ ಮುಖ್ಯಸ್ಥೆಯಾದ ಸುರೇಖಾ ಕೆ., ಅವರು ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಾ, ವಿದ್ಯಾಥಿ೯ಗಳು ಕಲಿಕೆಯ ಜೊತೆಗೆ ಆರೋಗ್ಯವನ್ನು ಸುಸ್ಥಿರವಾಗಿ ಇಟ್ಟುಕೊಳ್ಳುವುದು ಅಗತ್ಯಗತ್ಯ. ಅದಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾಥಿ೯ಗಳಿಗೆ ಕರೆ ನೀಡಿದರು. ಕಾಯ೯ಕ್ರಮದಲ್ಲಿ ಕಾಲೇಜಿನ ಕ್ರೀಡಾ ವಿಭಾಗದ ಕಾಯ೯ದಶಿ೯ಯಾದ ವಿದ್ಯಾರ್ಥಿ ಲಕ್ಷ್ಮೀಕಾಂತ್, ಕ್ರೀಡಾ ಪಟುಗಳಿಗೆ ಪ್ರತಿಜ್ಞಾ ವಿಧಿ ನಡೆಸಿಕೊಟ್ಟರು. ಕಾಯ೯ಕ್ರಮದಲ್ಲಿ ಉಡುಪಿ ಜಿಲ್ಲಾ ವಕೀಲರ ಸಂಘದ ಕ್ರೀಡಾ ಕಾರ್ಯದರ್ಶಿಯಾದ ಹಾಗೂ ವಕೀಲರಾದ ಸುಮಿತ್ ಹೆಗ್ಡೆ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ರಾವ್ ಡಿ. ಮತ್ತು ವಿದ್ಯಾರ್ಥಿ ಕಾರ್ಯದರ್ಶಿ ಆದಿತ್ಯ ಹಾಜರಿದ್ದರು. ವಿದ್ಯಾರ್ಥಿಗಳಾದ ಶ್ವೇತಾ ಅತಿಥಿಗಳನ್ನು ಸ್ವಾಗತಿಸಿದರು. ವಿವೇಕ್ ವಂದನಾರ್ಪಣೆ ಸಲ್ಲಿಸಿದರು, ರಂಜಿತಾ ನಿರೂಪಿಸಿದರು.