ಸಾರಾಂಶ
ಸದೃಢವಾದ ದೇಹ ಸದೃಢವಾದ ಮನಸ್ಸನ್ನು ಹೊಂದಲು ಸಾಧ್ಯ ಎಂಬ ಮಾತನ್ನು ಕ್ರೀಡೆಗಳು ದೃಢಪಡಿಸಿವೆ; ಪ್ರಾಚಾರ್ಯ ಡಾ. ಎಸ್ .ಪಿ. ಗೌಡರ
ಕನ್ನಡಪ್ರಭ ವಾರ್ತೆ ಹಿರೇಕೆರೂರು
ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಲಿವೆ ಎಂದು ಪ್ರಾಚಾರ್ಯ ಡಾ. ಎಸ್ .ಪಿ. ಗೌಡರ ಹೇಳಿದರು.ಅವರು ಬುಧವಾರ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ಧ ಪ್ರಸಕ್ತ ಸಾಲಿನ ಹಾವೇರಿ ವಿಶ್ವವಿದ್ಯಾನಿಲಯ ಅಂತರ್ ಮಹಾವಿದ್ಯಾಲಯಗಳ ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟು ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸದೃಢವಾದ ದೇಹ ಸದೃಢವಾದ ಮನಸ್ಸನ್ನು ಹೊಂದಲು ಸಾಧ್ಯ ಎಂಬ ಮಾತನ್ನು ಕ್ರೀಡೆಗಳು ದೃಢಪಡಿಸಿವೆ ಎಂದರು.ನೂತನ ಹಾವೇರಿ ವಿಶ್ವವಿದ್ಯಾಲಯವು ನಮ್ಮ ಕಾಲೇಜಿಗೆ ವಹಿಸಿದ್ದ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನೆರವೇರಿಸುವ ಮೂಲಕ ವಿಶ್ವವಿದ್ಯಾಲಯದ ತಂಡದ ಆಯ್ಕೆಗೆ ವಿದ್ಯಾರ್ಥಿಗಳನ್ನು ಕಳಿಸಿಕೊಡುತ್ತಿದ್ದೇವೆ ಎಂದರು.
ಅದೇ ದಿನ ಬೆಳಗ್ಗೆ ೭ಗಂಟೆಗೆ ಹಿರೆಕೆರೂರ್ ಜಿ.ಬಿ. ಶಂಕರರಾವ್ ವೃತ್ತದಿಂದ ಆರಂಭವಾದ ೧೦ಕಿಮೀ ಗುಡ್ಡಗಾಡ ಓಟದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಪ್ರಾಚಾರ್ಯರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ವಸತಿ ನಿಲಯದ ಮೇಲ್ವಿಚಾರಕ ಜಯಪ್ಪ ಮಾವಿನತೋಪ, ಕ್ರೀಡಾ ಸಂಚಾಲಕ ಪ್ರಸನ್ ಕುಮಾರ. ಜೆ, ಸ್ಕೌಟ್ ಅಂಡ್ ಗೈಡ್ಸ್ ಸಂಚಾಲಕ ರಾಮಚಂದ್ರಪ್ಪ . ಬಿ.ಎಂ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಹರೀಶ್ ಡಿ., ದೈಹಿಕ ಶಿಕ್ಷಣ ನಿರ್ದೇಶಕ ಸಿ.ಎನ್. ಸೊರಟೂರ, ಪೂಜಾ.ಎಂ., ಡಾ ಗಂಗವ್ವ ದಾನಪ್ಪನವರ, ಐಕ್ಯೂಎಸಿ ಸಂಚಾಲಕ ನವೀನ ಎಂ, ಎಂ.ಬಿ. ಬದನಿಕಾಯಿ, ಗ್ರಂಥಪಾಲಕ ಶಿವಾನಂದ ಸಂಗಾಪುರ, ದೈಹಿಕ ಶಿಕ್ಷಣ ಉಪನ್ಯಾಸಕ ಬಸವರಾಜ ಮಾಗಳದ, ಜಯಪ್ಪ ಲಮಾಣಿ, ವಿ.ಜಿ. ಪಾಟೀಲ, ಬಸನಗೌಡ ಗೌಡರ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಪ್ರಾಧ್ಯಾಪಕ ಪಿ.ಐ.ಸಿದ್ದನಗೌಡರ ನಿರೂಪಿಸಿ, ಹೇಮಲತಾ.ಕೆ ಸ್ವಾಗತಿಸಿದರು. ಹೇಮಾ ಯರಗುಂಟಿ ವಂದಿಸಿದರು.