ಕ್ರೀಡೆ, ವ್ಯಾಯಾಮ ಪ್ರತಿಯೊಬ್ಬರ ಜೀವನದ ಭಾಗವಾಗಲಿ: ಶಾಸಕ ಬಣಕಾರ

| Published : Sep 04 2025, 01:01 AM IST

ಸಾರಾಂಶ

ಕ್ರೀಡೆಯು ಆರೋಗ್ಯಯುತ ಜೀವನ ನಡೆಸಲು ಬೇಕಾಗಿರುವ ಅವಶ್ಯಕ ಚಟುವಟಿಕೆ. ಕ್ರೀಡೆ ಮತ್ತ ವ್ಯಾಯಾಮ ಪ್ರತಿಯೊಬ್ಬರ ಜೀವನದ ಭಾಗವಾಗಬೇಕು.

ರಟ್ಟೀಹಳ್ಳಿ: ಗ್ರಾಮೀಣ ಭಾಗದ ಕ್ರೀಡಾಪಟುಗಳು ದೇಶ- ವಿದೇಶಗಳಲ್ಲಿ ಉತ್ತಮ ಸಾಧನೆ ಮಾಡಿ ತಮ್ಮದೇ ಆದ ಛಾಪು ಮೂಡಿಸಿ ಸಾಧನೆ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ಪಟ್ಟಣದ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 2025- 26ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯು ಆರೋಗ್ಯಯುತ ಜೀವನ ನಡೆಸಲು ಬೇಕಾಗಿರುವ ಅವಶ್ಯಕ ಚಟುವಟಿಕೆ. ಕ್ರೀಡೆ ಮತ್ತ ವ್ಯಾಯಾಮ ಪ್ರತಿಯೊಬ್ಬರ ಜೀವನದ ಭಾಗವಾಗಬೇಕು ಎಂದರು.ವಿಶ್ವ ಪ್ರಸಿದ್ಧ ದಸರಾ ಹಬ್ಬದ ಪ್ರಯುಕ್ತ ರಾಜ್ಯದಲ್ಲಿ ಎಲ್ಲ ವಿಭಾಗದ ಕ್ರೀಡಾಕೂಟಗಳನ್ನು ಆಯೋಜನೆ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಗ್ರಾಮಾಂತರ ಪ್ರದೇಶದ ಯುವಕ- ಯುವತಿಯರು ತಮ್ಮ ಆಟದ ಮೂಲಕ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ಉತ್ತಮ, ಕೌಶಲ್ಯ ಪ್ರದರ್ಶನ ನೀಡಿದ ಕ್ರೀಡಾಪಟುಗಳು ಜಿಲ್ಲಾ, ವಿಭಾಗ ಮಟ್ಟ ನಂತರ ರಾಜ್ಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.ರಟ್ಟೀಹಳ್ಳಿ ಹೊಯ್ಸಳ ಕ್ರೀಡಾ ಸಂಘದ ಅಧ್ಯಕ್ಷರು ಹಾಗೂ ಅಮೇಚೂರ್ ಖೋ ಖೋ ಸಂಸ್ಥೆಯ ಅಧ್ಯಕ್ಷ ಸಿ.ಎಫ್. ಜಾಡರ ಮಾತನಾಡಿ, ನಮ್ಮ ತಾಲೂಕು ಹಾಗೂ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನುನೀಡಿದೆ. ಅತ್ಯುತ್ತಮ ಕ್ರೀಡಾಪಟುಗಳನ್ನು ತಯಾರು ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.ಜಿಲ್ಲಾ ಮಟ್ಟಕ್ಕೆ ಆಯ್ಕೆ:ಬಾಲಕರ ವಿಭಾಗ- ಖೋ ಖೋ ರಟ್ಟೀಹಳ್ಳಿ ಹೊಯ್ಸಳ ಸ್ಪೋಟ್ಸ್ ಕ್ಲಬ್ ಪ್ರಥಮ, ಕಬಡ್ಡಿ ವೀರಾಂಜನೇಯ ಸಣ್ಣಗುಬ್ಬಿ, ವಾಲಿಬಾಲ್ ಗುಡ್ಡದಮಲ್ಲಾಪುರ, ಥ್ರೋಬಾಲ್ ಕರಿಯಮ್ಮದೇವಿ ಕಡೂರ, ಪುಟ್‍ಬಾಲ್ ರಟ್ಟೀಹಳ್ಳಿ ಕದಂಬ ಸ್ಪೋಟ್ಸ್‌ ಕ್ಲಬ್, 100 ಮೀ. ಓಟ ಯಡಗೋಡಿಯ ಪ್ರಶಾಂತ ಹಾವೇರಿ, 200 ಮೀ. ಓಟ ಯಲಿವಾಳದ ಶಿವಕುಮಾರ ಯಲಿವಾಳ, 400 ಮೀ. ಕೋಡಿಹಾಳ ಗಿರೀಶ ಆರ್.ಎಂ., 800 ಮೀ. ವಿಭಾಗ ಯಡಗೊಡಿಯ ಶಂಕರ ಕನಕಣ್ಣನವರ, 1500 ಮೀ. ಚಿಕ್ಕಕಬ್ಬಾರ ಶಹವುದ್ದಿನ ಎಣ್ಣಿ, 3000 ಮೀ. ಮತ್ತು 5000 ಮೀ. ಯಡಗೋಡಿಯ ಶ್ರೀಕಾಂತ ಉಪ್ಪಾರ, 10000 ಮೀ. ಯಡಗೋಡಿಯ ವಿನಾಯಕ ಹಾವೇರಿ ಅವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ರಿಲೇಯಲ್ಲಿ ಯಡಗೋಡಿ ಗ್ರಾಮದ ಗಣೇಶ ತಂಡ, ಯುವರಾಜ ತಂಡ, ಗುಂಡು ಎಸೆತ ಪುರದಕೇರಿಯ ಕುಬೇರ ಓಲೇಕಾರ, ಚಕ್ರ ಎಸೆತ ಮೇಘರಾಜ್ ಕಲವೀರಕ್ಕನವರ, ಸಾಂಪ್ರದಾಯಕ ಯೋಗ ಕ್ರೀಡೆಯಲ್ಲಿ ವಿಶ್ವ ಕಡೆಮನಿ, ಕಲಾತ್ಮಕ ವಿಭಾಗದಲ್ಲಿ ಚೇತನ ಬಸವನಾಳ.ಮಹಿಳಾ ವಿಭಾಗ: ಖೋ ಖೋ ರಟ್ಟೀಹಳ್ಳಿ ತಂಡ ಪ್ರಥಮ, ವಾಲಿಬಾಲ್ ಅಣಜಿ ತಂಡ, ಕಬಡ್ಡಿ ಹುಲ್ಲತ್ತಿ, ಸಾಂಪ್ರದಾಯಿಕ ಯೋಗ ಕ್ರೀಡೆಯಲ್ಲಿ ಸೌಭಾಗ್ಯ ಕಾರಜೋಳ, 100 ಮೀ. ಹಾಗೂ 200 ಮೀ. ಓಟ ಸೀಮಾ ಎನ್.ಎಚ್., 400 ಮೀ. ಹಾಗೂ 800 ಮೀ. ಮಾಸೂರಿನ ದಿವ್ಯ ಮಡಿವಾಳರ, ಗುಂಡು ಹಾಗೂ ಚಕ್ರ ಎಸೆತ ಸುಪ್ರಿನಾ ಎಸ್‌.ಪಿ., 1500 ಮೀ. ಶೃತಿ ಆರ್.ಕೆ., 3000 ಮೀ. ದಿವ್ಯ ಮಡಿವಾಳರ, ರಿಲೇಯಲ್ಲಿ ಅಣಜಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ರಟ್ಟೀಹಳ್ಳಿ ಪಿಎಸ್‍ಐ ರಮೇಶ ಪಿ.ಎಸ್., ರವೀಂದ್ರ ಮುದಿಯಪ್ಪನರ, ಹನುಮಂತಗೌಡ ಭರಮಣ್ಣನವರ, ಪಿ.ಡಿ. ಬಸನಗೌಡ್ರ, ಮಖಬೂಲ್ ಮುಲ್ಲಾ, ಮಂಜು ಅಸ್ವಾಲಿ, ಅಬ್ಬಾಸ ಗೋಡಿಹಾಳ, ಶಂಕ್ರಪ್ಪ ತಳವಾರ, ಬಾಬುಸಾಬ ಜಡದಿ, ಸಿದ್ದಪ್ಪ ಜಾಧವ, ಮಾಲತೇಶ ಬೆಣ್ಣಿ, ಮಾರುತಿ ಸುಣಗಾರ, ವಿಜಯ ಅಂಗಡಿ, ಮುತ್ತು ಹರವಿಶೆಟ್ಟರ್, ಕಿಟ್ಟಪ್ಪ ಬಾಜಿರಾಯರ, ಶ್ರೀದೇವಿ ಬೈರೋಜಿಯರ, ಮಂಜುಳಾ ಅಗಡಿ ಮುಂತಾದವರು ಇದ್ದರು.