ಸಾರಾಂಶ
ಕನಕಪುರ: ಕ್ರೀಡಾಪಟುಗಳು ಶ್ರದ್ಧೆ, ಗುರಿ, ಸಮಯಪ್ರಜ್ಞೆ ಅಳವಡಿಸಿಕೊಂಡರೆ ಸಾಧನೆ ಮಾಡಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟು ಹಾಗೂ ಏಷ್ಯನ್ ಗೇಮ್ಸ್ ಪದಕ ವಿಜೇತೆ ಉಷಾರಾಣಿ ತಿಳಿಸಿದರು. ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಅಡ್ವೆಂಚರ್ ಅಥ್ಲೆಟಿಕ್ಸ್ ಅಕಾಡೆಮಿ ಸಂಸ್ಥಾಪಕ ಮನೋಜ್ ಕುಮಾರ್ ಸ್ಮರಣಾರ್ಥ ಆಯೋಜಿಸಿದ್ದ ನಾಲ್ಕನೇ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಅಂತಾರಾಷ್ಟ್ರೀಯ ಅಥ್ಲೆಟಿಕ್ ತರಬೇತಿದಾರ ಬಾಬುಶೆಟ್ಟಿ, ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಉಷಾರಾಣಿ ಹಾಗೂ ಜಯಪ್ರಕಾಶ್ ಶೆಟ್ಟಿ ಅವರಿಗೆ ಕನಕರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪೋದಾರ್ ಅಂತಾರಾಷ್ಟ್ರೀಯ ಶಾಲೆಯ ಪ್ರಾಂಶುಪಾಲೆ ಗಾಯತ್ರಿ, ಜೈನ್ ಪಬ್ಲಿಕ್ ಶಾಲೆ ಪ್ರಾಂಶುಪಾಲೆ ರತ್ನಮ್ಮ, ಅಡ್ವೆಂಚರ್ ಅಥ್ಲೆಟಿಕ್ ಅಕಾಡೆಮಿ ಅಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ಸತೀಶ್, ಗೌರವಾಧ್ಯಕ್ಷ ಶಂಕರ್ ಗೌಡ, ಉಪಾಧ್ಯಕ್ಷರಾದ ಆನಂದ್ ಅರಸು, ಧನಂಜಯ್, ಸದಸ್ಯರಾದ ನಾಗರಾಜು,ಕುಮಾರ್, ರಾಜೇಶ್, ಸುಂದರ್ ಗೌಡ, ರಾಜಣ್ಣ, ಸರ್ವಮಂಗಳ, ಶಿಕ್ಷಕಿ ಶೃತಿ, ಪ್ರವೀಣ್, ಮನು, ತರಬೇತುದಾರರಾದ ಹರ್ಷ, ಅಕ್ಷತಾ ಇತರರಿದ್ದರು.
(ಫೋಟೋ ಕ್ಯಾಪ್ಷನ್)ಕನಕಪುರದಲ್ಲಿ ಅಡ್ವೆಂಚರ್ ಅಥ್ಲೆಟಿಕ್ ಅಕಾಡೆಮಿ ಆಯೋಜಿಸಿದ್ದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಜೈನ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು. ಅಡ್ವೆಂಚರ್ ಅಥ್ಲೆಟಿಕ್ ಅಕಾಡೆಮಿ ಅಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ಸತೀಶ್, ಗೌರವಾಧ್ಯಕ್ಷ ಶಂಕರ್ ಗೌಡ, ಉಪಾಧ್ಯಕ್ಷರಾದ ಆನಂದ್ ಅರಸು ಇತರರಿದ್ದರು.