ಮನುಷ್ಯನ ವ್ಯಕ್ತಿತ್ವ ವಿಕಸನ, ಮಾನಸಿಕ ನೆಮ್ಮದಿ ಹಾಗೂ ಸದೃಢ ದೇಹಕ್ಕಾಗಿ ಕ್ರೀಡೆ ಸಹಕಾರಿ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು. ಮಧುಗಿರಿಯಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಮನುಷ್ಯನ ವ್ಯಕ್ತಿತ್ವ ವಿಕಸನ, ಮಾನಸಿಕ ನೆಮ್ಮದಿ ಹಾಗೂ ಸದೃಢ ದೇಹಕ್ಕಾಗಿ ಕ್ರೀಡೆ ಸಹಕಾರಿ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.

ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ವಿದ್ಯೆ ಜೊತೆಗೆ ಆಟೋಟ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಎರಡನ್ನು ಸಮಾನಂತರವಾಗಿ ಸ್ವೀಕರಿಸಬೇಕು. ಸರ್ಕಾರ ಉನ್ನತ ಶಿಕ್ಷಣದಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನಿಗಿದಿಗೊಳಿಸಿದ್ದು ಇಂತಹ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ತಾವು ಓದಿದ ಶಾಲೆಗೆ , ಗುರು ಹಿರಿಯರಿಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮಧುಗಿರಿ ಏಕಶಿಲಾ ಬೆಟ್ಟ ಏಷ್ಯಾಖಂಡದಲ್ಲೇ ಅತ್ಯಂತ ದೊಡ್ಡ ಬೆಟ್ಟ ಎಂಬ ಹೆಸರು ಗಳಿಸಿದ್ದು ಇಲ್ಲಿನ ರಮಣಿಯ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಂಡು ಪ್ರೀತಿ, ವಿಶ್ವಾಸದಿಂದ , ಸೌಹಾರ್ದತೆಯಿಂದ ಆಟ ಆಡಿ ,ಓದುವ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಸಚಿವ ರಾಜಣ್ಣ ಭರವಸೆ ನೀಡಿದರು.

ಸಮಾರಂಭದಲ್ಲಿ ಎಂಎಲ್‌ಸಿ ಆರ್‌.ರಾಜೇಂದ್ರ ರಾಜಣ್ಣ,ಎಸಿ ಗೊಟೋರು ಶಿವಪ್ಪ, ತಹಸೀಲ್ದಾರ್‌ ಶರೀನ್‌ತಾಜ್‌, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌,ಉಪಾಧ್ಯಕ್ಷೆ ಸುಜಾತಶಂಕರನಾರಾಯಣ್‌, ಡಿಡಿಪಿಐ ಗಿರಜಾ,ಬಿಇಓ ಕೆ.ಎನ್‌.ಹನುಮಂತರಾಯಪ್ಪ,ಶಿಕ್ಷಣಾದಿಕಾರಿ ಎಂ.ವಿ.ರಾಜಣ್ಣ,ಟಿಪಿಓ ಯರಗಾಮಯ್ಯ,ಮುಖಂಡ ತುಂಗೋಟಿ ರಾಮಣ್ಣ, ಪುರಸಭೆ ಸದಸ್ಯರಾದ ಎಂ.ವಿ.ಗೋವಿಂದರಾಜು, ತಿಮ್ಮರಾಯಪ್ಪ,ಮಂಜುನಾಥ್‌ ಆಚಾರ್‌,ನಾಗಲತಾಲೋಕೇಶ್‌,ಶೋಭರಾಣಿ,ಶ್ರೀಧರ್‌ ಇತರರಿದ್ದರು.