Sports are essential for improving physical and mental health.

ಕೆ.ಎನ್.ಗೋಪಾಲಕೃಷ್ಣ ಗುಪ್ತ ಮನವಿ । ಬೀರೂರು ಶೈಕ್ಷಣಿಕ ತಾಲೂಕು ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟ

--

ಕನ್ನಡಪ್ರಭವಾರ್ತೆ ಬೀರೂರು

ಪಠ್ಯ ಶಿಕ್ಷಣ ಜ್ಞಾನದ ಮಟ್ಟ ಅಧಿಕಗೊಳಿಸಿದರೇ ಕ್ರೀಡೆಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೊಗ್ಯವನ್ನು ವೃದ್ದಿಸುತ್ತವೆ. ಆದ್ದರಿಂದ ಶಾಲಾ ಹಂತದಲ್ಲೇ ಮಕ್ಕಳನ್ನು ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗುವಂತೆ ಶಿಕ್ಷಕರು, ಪೋಷಕರು ಪ್ರೋತ್ಸಾಹಿಸಬೇಕೆಂದು ವಾಸವಿ ಶಾಲೆಯ ಅಧ್ಯಕ್ಷ ಕೆ.ಎನ್.ಗೋಪಾಲಕೃಷ್ಣ ಗುಪ್ತ ಮನವಿ ಮಾಡಿದರು.

ಅವರು ಬೀರೂರಿನ ವಾಸವಿ ವಿದ್ಯಾ ಪೀಠ ಶಾಲೆಯ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತಾಲೂಕು ದೈಹಿಕ ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆದ ಬೀರೂರು ಶೈಕ್ಷಣಿಕ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಶಿಕ್ಷಣ ಕೇವಲ ಓದುವುದಕಷ್ಟೆ ಸೀಮಿತವಾಗದೇ ದೈಹಿಕ ಶಿಕ್ಷಣದ ಕಡೆ ವಿದ್ಯಾರ್ಥಿಗಳು ಒಲವು ತೋರಿದಾಗ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಪೋಷಕರು ಬರೀ ಓದಿನತ್ತ ಗಮನಮಹರಿಸುವಂತೆ ಮಕ್ಕಳನ್ನು ಒತ್ತಯಿಸುತ್ತಿದ್ದಾರೆ, ಇದರ ಜತೆ ಮಕ್ಕಳ ಆಸಕ್ತಿ ಕ್ಷೇತ್ರಗಳನ್ನು ಗುರುತಿಸಿ ಪ್ರೋತ್ಸಾಹಿಸುವುಸು ಅಗತ್ಯವಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಪಠ್ಯ ಚಟುವಟಿಕೆ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು.

ಸೋಲು ಗೆಲುವಿನ ಮೆಟ್ಟಿಲು ಎಂಬುದಾಗಿ ತಿಳಿದು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ಬಿಇಒ ರ‍್ಹನುದ್ದೀನ್ ಚೋಪ್ದಾರ್ ಮಾತನಾಡಿ, ಕ್ರೀಡೆ ಮನುಷ್ಯನನ್ನು ಹೆಚ್ಚು ಕ್ರೀಯಾಶೀಲಗೊಳಿಸುತ್ತದೆ. ಪ್ರತಿಯೊಬ್ಬರು ಕ್ರೀಡೆಯ ಬಗ್ಗೆ ಹೆಚ್ಚು ಒಲವು ತೋರಿಸಬೇಕು ಮತ್ತು ಕ್ರೀಡಾಪಟು ಕ್ರೀಡಾ ಅಭ್ಯಾಸದ ಬಗ್ಗೆ ಹೆಚ್ಚಿನ ಪರಿಶ್ರಮ ತೋರಿಸಿದಾಗ ಮಾತ್ರ ನಿಗದಿತ ಗುರಿ ಮುಟ್ಟಲು ಸಾಧ್ಯ, ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಸ್ಫೂರ್ತಿಯಿಂದ ಭಾಗವಹಿಸುವುದರೊಂದರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಯಶಸ್ಸು ಸಾಧಿಸುವುದು ಮುಖ್ಯ ಎಂದರು.

ಕಾಂಗ್ರೆಸ್ ಮುಖಂಡ ಆರೀಫ್ ಮಾತನಾಡಿ, ಕ್ರೀಡೆಯಿಂದ ಮನುಷ್ಯನಿಗೆ ಉತ್ತಮ ಆರೋಗ್ಯ ಲಭಿಸುವ ಜೊತೆಗೆ ದೇಹ ಸದೃಢಗೊಳ್ಳುತ್ತದೆ. ಪ್ರತಿಯೊಬ್ಬರು ಪ್ರತಿ ನಿತ್ಯ ಯಾವುದಾದರೂ ಒಂದು ಕ್ರೀಡೆಯಲ್ಲಿ ಭಾಗವಹಿಸಬೇಕು, ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದಾ ಸ್ಪರ್ದೆಗಳಲ್ಲಿ ಭಾಗವಹಿಸಿಬೇಕು ಮತ್ತು ಕ್ರೀಡಾ ಸಮಯದಲ್ಲಿ ಕ್ರೀಡಾಪಟುಗಳು ಅತ್ಯಂತ ಜಾಗೃತರಾಗಿ ಹಾಗೂ ಅತ್ಯಂತ ಚಾಣಾಕ್ಷ ತನದಿಂದಿರಬೇಕು ಎಂದರು.

ಪುರಸಭೆ ಆಶ್ರಯ ಸಮಿತಿ ಸದಸ್ಯ ಮುಬಾರಕ್ ಮಾತನಾಡಿದರು.ತಾಲೂಕಿನ ಎಲ್ಲಾ ವಲಯಗಳ 55 ಶಾಲೆಗಳಿಂದ 604 ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಮಟ್ಟಕ್ಕೆ ಆಯ್ಕೆ: ಗೊಣಗಲೆ ಕಟ್ಟೆ ಜಿ.ಹೆಚ್,ಎಸ್ ಬಾಲಕರ ವಿಭಾಗ ವಾಲಿಬಾಲ್, ಜೋಡಿಲಿಂಗದಹಳ್ಳಿ ಎಂ.ಡಿಆರ್.ಎಸ್ ನ ಬಾಲಕರು ಖೋಖೋ,ಬಾಲ್ ಬ್ಯಾಡ್ಮಿಟನ್, ಬಾಣೂರು ಬಾಲಕರು ಥ್ರೋ ಬಾಲ್, ಬೀರೂರಿನ ಉಪ್ಪಾರ ಕ್ಯಾಂಪ್ ಜಿ.ಹೆಚ್.ಪಿಎಸ್ ಬಾಲಕರು ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

ಬಾಲಕಿಯರ ವಿಭಾಗದಲ್ಲಿ ಜಿ.ಹೆಚ್.ಪಿಎಸ್, ಚಿಕ್ಕ ಬಾಣೂರು ವಾಲಿಬಾಲ್, ದೇವನೂರಿನ ಜಿ.ಹೆಚ್.ಪಿಎಸ್ ಖೋ ಖೋ, ಜಿ.ಹೆಚ್.ಪಿಎಸ್ ಬಾಣೂರು ಥ್ರೋ ಬಾಲ್, ಬೀರೂರಿನ ಬ್ರೈಟ್‌ ಫ್ಯೂಚರ್ ಬಾಲ್ ಬ್ಯಾಡ್ಮಿಂಟನ್‌ ಹಾಗೂ ಚಿಕ್ಕ ಬಾಣೂರಿನ ವಿದ್ಯಾ ಚೇತನ ಶಾಲೆಯ ಬಾಲಕಿಯರು ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

ವಾಸವಿ ಶಾಲೆಯ ರಾಘವೇಂದ್ರ, ದೈಹಿಕ ಶಿಕ್ಷಣಾಧಿಕಾರಿ ಜಯದೇವಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಮೈಲಾರಪ್ಪ, ರೇಖಾ, ಕವಿತಾ ಇದ್ದರು.

ಫೋಟೊ: 10ಬೀರೂರು 01

ಬೀರೂರಿನ ವಾಸವಿ ವಿದ್ಯಾ ಪೀಠ ಶಾಲೆಯ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತಾ. ದೈಹಿಕ ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆದ ತಾ. ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ವಾಸವಿ ಶಾಲೆಯ ಅಧ್ಯಕ್ಷ ಕೆ.ಎನ್.ಗೋಪಾಲಕೃಷ್ಣ ಗುಪ್ತ ಉದ್ಘಾಟಿಸಿದರು. ಬಿಇಒ ಚೋಪ್ದಾರ್ ಇದ್ದರು.