ಸಾರಾಂಶ
ಕ್ರೀಡೆಗಳಲ್ಲಿ ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಆದರೆ, ಕ್ರೀಡೆಗಳಲ್ಲಿ ಭಾಗವಹಿಸಲು ಸ್ಪರ್ಧಾ ಮನೋಭಾವ ಬಹಳ ಮುಖ್ಯ. ಗೆಲುವನ್ನು ಗುರಿಯಾಗಿಸಿಕೊಂಡು ಪಾಲ್ಗೊಳ್ಳಬೇಕು. ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡು ಯಶಸ್ಸು ಸಾಧಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಓದು ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ತೊಡಗಿರುವ ವೈದ್ಯ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದು ಅತ್ಯವಶ್ಯಕ. ಕ್ರೀಡೆ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ ಎಂದು ಮಿಮ್ಸ್ ನಿರ್ದೇಶಕ ಡಾ. ನರಸಿಂಹಸ್ವಾಮಿ ಹೇಳಿದರು.ನಗರದಲ್ಲಿರುವ ಪಿಇಟಿ ಕ್ರೀಡಾಂಗಣದಲ್ಲಿ ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಹಾಗೂ ಮಿಮ್ಸ್ ಸಹಯೋಗದಲ್ಲಿ ಮೈಸೂರು ವಲಯ ಅಂತರ ಕಾಲೇಜುಗಳ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳಲ್ಲಿ ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ಆದರೆ, ಕ್ರೀಡೆಗಳಲ್ಲಿ ಭಾಗವಹಿಸಲು ಸ್ಪರ್ಧಾ ಮನೋಭಾವ ಬಹಳ ಮುಖ್ಯ. ಗೆಲುವನ್ನು ಗುರಿಯಾಗಿಸಿಕೊಂಡು ಪಾಲ್ಗೊಳ್ಳಬೇಕು. ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡು ಯಶಸ್ಸು ಸಾಧಿಸುವಂತೆ ಸಲಹೆ ನೀಡಿದರು.ಕ್ರೀಡೆಯಲ್ಲಿ ಎಲ್ಲರಿಗೂ ಗೆಲ್ಲಲ್ಲೇಬೇಕು ಎನ್ನುವ ಆಸೆ ಇರುತ್ತದೆ. ಯಾರು ಉತ್ತಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಾರೋ ಅವರು ಗೆಲ್ಲುತ್ತಾರೆ, ಸೋತವರು ಏನೂ ಕಡಿಮೆ ಇರುವುದಿಲ್ಲ. ಸೋಲಿನಿಂದ ವಿಚಲಿತರಾಗುವ ಅವಶ್ಯಕತೆಯೂ ಇಲ್ಲ, ಕ್ರೀಡಾ ಕೌಶಲ್ಯತೆಯನ್ನು ಹೆಚ್ಚಿಸಿಕೊಂಡು ನಿರಂತರವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಿಮ್ಸ್ ಪ್ರಾಂಶುಪಾಲ ಡಾ.ಹನುಮಂತ ಪ್ರಸಾದ್, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸುರೇಶ್ ಹಾಜರಿದ್ದರು.ಹಿಂದಿ ಭಾಷೆಗೆ ಅವಕಾಶ ನೀಡಬಾರದು ಮನವಿ ಸಲ್ಲಿಕೆಮಳವಳ್ಳಿ: ಸೆ.14 ಮತ್ತು 15ರಂದು ನಡೆಯುವ ಗಗನಚುಕ್ಕಿ ಜಲಪಾತೋತ್ಸವದಲ್ಲಿ ಹಿಂದಿ ಭಾಷೆಯ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ನಾವು ದ್ರಾವಿಡ ಕನ್ನಡಿಗರು ಚಳವಳಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಪ್ರಭಾರ ತಹಸೀಲ್ದಾರ್ ಬಿ.ವಿ.ಕುಮಾರ್ ಅವರಿಗೆ ದ್ರಾವಿಡ ಕನ್ನಡಿಗರು ಚಳವಳಿಯ ಪದಾಧಿಕಾರಿಗಳಾದ ಅಭಿಗೌಡ, ಮುನಿಗೌಡ, ಬಸವರಾಜು ಮನವಿ ಸಲ್ಲಿಸಿ, ರಾಜ್ಯದಲ್ಲಿ ಹಿಂದಿ ಭಾಷೆ ಹೇರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಸೆ.14 ಹಾಗೂ 15ರಂದು ನಡೆಯುವ ಗಗನಚುಕ್ಕಿ ಜಲಪಾತೋತ್ಸವದಲ್ಲಿ ಹಿಂದಿ ನಾಮಫಲಕ, ಹಿಂದಿ ಗೀತೆಗಳು, ಹಿಂದಿ ಕಲಾವಿದರಿಗೆ ಹಾಗೂ ನೌಕರರ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು.ಕನ್ನಡ ನೆಲದಲ್ಲಿ ಕನ್ನಡ ಕಲಾವಿದರಿಗೆ, ಕೆಲಸಗಾರರಿಗೆ ಹಾಗೂ ಸ್ಥಳೀಯ ಅವಕಾಶ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.