ಯಾರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಾರೋ ಅವರು ಹೆಚ್ಚು ಆರೋಗ್ಯವಂತ, ದೀರ್ಘಾಯುಷಿಗಳಾಗಿರುತ್ತಾರೆ. ಕ್ರೀಡೆಗಳು ಮನುಷ್ಯನ ಒತ್ತಡ ನಿವಾರಣೆ ಮಾಡಿ ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಆರೋಗ್ಯಕರ ಜೀವನ ಶೈಲಿಗೆ ಅಡಿಪಾಯ ಹಾಕುತ್ತವೆ. ಯುವಕರು ತಮ್ಮ ಇಷ್ಟದ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕ್ರೀಡೆಗಳು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ಪಟ್ಟಣದ ಶಂಕರ್ ಸ್ಪೋರ್ಟ್ಸ್ ಅಕಾಡೆಮಿಯ ಒಳಾಂಗಣ ಕ್ರೀಡಾಂಗಣದಲ್ಲಿ ಕಿಕ್ಕೇರಮ್ಮ ರೂರಲ್ ಸ್ಪೋಟ್ಸ್ ಕ್ಲಬ್ ಮತ್ತು ಕಿಕ್ಕೇರಿ ಸುರೇಶ್ ಪ್ರೀಮಿಯರ್ ಲೀಗ್ ಆಶ್ರಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ತಾಲೂಕು ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ, ನಂತರ 8 ತಂಡಗಳ ಆಟಗಾರರನ್ನು ಪರಿಚಯಿಸಿಕೊಂಡು, ಷಟಲ್ ಬ್ಯಾಟ್ ಹಿಡಿದು ಆಟ ಆಡುವ ಮೂಲಕ ಕ್ರೀಡಾಪಟುಗಳ ಗಮನ ಸೆಳೆದರು.

ಯಾರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಾರೋ ಅವರು ಹೆಚ್ಚು ಆರೋಗ್ಯವಂತ, ದೀರ್ಘಾಯುಷಿಗಳಾಗಿರುತ್ತಾರೆ. ಕ್ರೀಡೆಗಳು ಮನುಷ್ಯನ ಒತ್ತಡ ನಿವಾರಣೆ ಮಾಡಿ ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಆರೋಗ್ಯಕರ ಜೀವನ ಶೈಲಿಗೆ ಅಡಿಪಾಯ ಹಾಕುತ್ತವೆ.

ಯುವಕರು ತಮ್ಮ ಇಷ್ಟದ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಕ್ರೀಡೆ ವಿಜೇತ ತಂಡಗಳಿಗೆ ಪ್ರಥಮ 40 ಸಾವಿರ ರು., ದ್ವಿತೀಯ 30 ಸಾವಿರ ರು., 3ನೇ ಬಹುಮಾನ 20 ಸಾವಿರ ರು, 4ನೇ ಬಹುಮಾನ 10 ಸಾವಿರ ಜೊತೆಗೆ ಪಾರಿತೋಷಕ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಶಂಕರ್ ಸ್ಪೋಟ್ಸ್ ಅಕಾಡೆಮಿ ಅಧ್ಯಕ್ಷ ಕೆ.ಟಿ.ಶಂಕರ್, ಕಾರ್ಯದರ್ಶಿ ದೀಪಶ್ರೀ ಶಂಕರ್, ಕೆಪಿಎಸ್ ಶಾಲೆ ಎಸ್ ಡಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಕಿಕ್ಕೇರಿ ಮಧು, ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶೇಖರ್, ಉದ್ಯಮಿ ಪುರ ವಿಶ್ವನಾಥ್, ಪುರಸಭಾ ಮಾಜಿ ಸದಸ್ಯ ನಂದೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್. ಪೂರ್ಣಚಂದ್ರತೇಜಸ್ವಿ, ಮುಖ್ಯ ಶಿಕ್ಷಕ ಕಿಕ್ಕೇರಿ ಮಂಜುನಾಥ್ ಹಾಗೂ ವಿವಿಧ ತಂಡಗಳ ಕ್ರೀಡಾಪಟಗಳು, ನೂರಾರು ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.