ಉತ್ತಮ ಆರೋಗ್ಯಕ್ಕೆ ಕ್ರೀಡೆ ಮುಖ್ಯ

| Published : Aug 31 2025, 02:00 AM IST

ಸಾರಾಂಶ

ಆಟದಲ್ಲಿ ಸೋಲು- ಗೆಲುವು ಸಾಮಾನ್ಯ. ಸೋತವರು ಮುಂದಿನ ಬಾರಿ ಪ್ರಯತ್ನಿಸಿ

ಹಾವೇರಿ: ಉತ್ತಮ ಆರೋಗ್ಯಕ್ಕೆ ಕ್ರೀಡೆ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಆಟ-ಪಾಠದ ಕಡೆಗೆ ಲಕ್ಷ್ಯ ವಹಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.

ತಾಲೂಕಿನ ಅಗಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಆಟದಲ್ಲಿ ಸೋಲು- ಗೆಲುವು ಸಾಮಾನ್ಯ. ಸೋತವರು ಮುಂದಿನ ಬಾರಿ ಪ್ರಯತ್ನಿಸಿ. ಗೆದ್ದವರು ವಲಯ ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ಕಡೆಗೆ ಗಮನ ಹರಿಸಿ. ದೈಹಿಕ ಶಿಕ್ಷಣ ಶಿಕ್ಷಕರು ನಿಯಮಾನುಸಾರ ಆಟಕ್ಕೆ ಒತ್ತು ನೀಡಿ ಎಂದರು.

ಮುಖಂಡ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಆರೋಗ್ಯವಿದೆ. ಆಟ ಮತ್ತು ಪಾಠ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಂತಸದಿಂದ ಪಾಲ್ಗೊಳ್ಳಿ ಎಂದರು.

ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ, ಹನುಮಂತರಾವ್ ಕುಲಕರ್ಣಿ, ಶಿವಪುತ್ರಪ್ಪ ಶಿವಣ್ಣನವರ, ಚನ್ನಬಸಪ್ಪ ಅಂಗರಕಟ್ಟಿ, ಡಾ. ಸತೀಶ ಈಳಗೇರ, ಗ್ರಾಪಂ ಅಧ್ಯಕ್ಷೆ ರತ್ನಮ್ಮ ಮಣೇಗಾರ, ಎಸ್‌ಡಿಎಂಸಿ ಅಧ್ಯಕ್ಷ ಕುಮಾರ ರಾಮಾಪುರ, ಉಪಾಧ್ಯಕ್ಷ ಅಶೋಕ ಶಿವಣ್ಣನವರ, ಕ್ಷೇತ್ರ ಸಮನ್ವಯಾಧಿಕಾರಿ ಮಹಾದೇವಪ್ಪ ಮಾದರ, ಸಿಆರ್‌ಪಿ ರೇಖಾ ತೋಟಗೇರ, ಮುಖ್ಯ ಶಿಕ್ಷಕಿ ರೇಣುಕಾ ಸ್ವಾಗಿಹಾಳ, ಅಗಡಿ, ಕಳ್ಳಿಹಾಳ ಹಾಗೂ ಭೂ ವೀರಾಪುರ ಶಾಲೆಗಳ ಕ್ರೀಡಾಪಟುಗಳು ಹಾಗೂ ಶಿಕ್ಷಕ ಸಿಬ್ಬಂದಿ ಇದ್ದರು.