ಸಾರಾಂಶ
ಕ್ರೀಡೆಗಳು ಆರೋಗ್ಯವನ್ನು ವೃದ್ಧಿಸುವ ಮೂಲಕ ಕ್ರಿಯಾಶೀಲ ವ್ಯಕ್ತಿಗಳನ್ನಾಗಿ ರೂಪಿಸುತ್ತವೆ.
ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ಕೆ. ನೇಮರಾಜ್ ನಾಯ್ಕ
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿಕ್ರೀಡೆಗಳು ಆರೋಗ್ಯವನ್ನು ವೃದ್ಧಿಸುವ ಮೂಲಕ ಕ್ರಿಯಾಶೀಲ ವ್ಯಕ್ತಿಗಳನ್ನಾಗಿ ರೂಪಿಸುತ್ತವೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.
ಇಲ್ಲಿಗೆ ಸಮೀಪದ ಜಿ. ನಾಗಲಾಪುರ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೊಗದಲ್ಲಿ, ಬಿ.ಎಂ.ಎಂ. ಇಸ್ಪಾತ್ ಲಿ. ಕಂಪನಿಯ ಪ್ರಾಯೋಕತ್ವದಲ್ಲಿ ಮರಿಯಮ್ಮನಹಳ್ಳಿ ವಲಯ ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಹಗರಿಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಯ 201 ಶಾಲೆಗಳಿಗೆ ಕ್ರೀಡಾ ಸಾಮಗ್ರಿ, 81 ಶಾಲೆಗಳಿಗೆ ವಿಜ್ಞಾನದ ಪ್ರಯೋಗಾಲಯಗಳ ಸಾಮಗ್ರಿ ವಿತರಿಸಿ, ಎರಡೂವರೆ ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ₹30 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಹೊಸಪೇಟೆ, ಹಾಲಕೆರೆ ಕೊಟ್ಟೂರುಸ್ವಾಮಿಮಠದ ಮುಪ್ಪಿನಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಕ್ರೀಡೆಯೊಂದಿಗೆ ಪಠ್ಯೇತರ ಚಟುವಟಿಕೆ ಅಗತ್ಯ, ದೈಹಿಕ ಚಟುವಟಿಕೆಯೊಂದಿಗೆ ಪಠ್ಯವೂ ಮುಖ್ಯವಾಗಿದೆ. ದೈಹಿಕ ಚಟಯವಟಿಕೆ ಇದ್ದರೆ, ದೇಹದಲ್ಲಿ ಚೈತನ್ಯ ಇರುತ್ತದೆ, ದೇಹಕ್ಕೆ ಚೈತನ್ಯ ಬರಬೇಕಾದರೆ ದೈಹಿಕ ಚಟುವಟಿಕೆಗಳು ಮುಖ್ಯವಾಗಿವೆ ಎಂದು ಹೇಳಿದರು.ಜಿ. ನಾಗಲಾಪುರ ಶ್ರೀಗುರು ಒಪ್ಪತ್ತೇಶ್ವರಮಠದ ನಿರಂಜನಪ್ರಭು ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ವಿಜಯನಗರ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪ್ಯಾಟಿ ಸಭೆಯಲ್ಲಿ ಮಾತನಾಡಿದರು.ಸ್ಥಳೀಯ ಮುಖಂಡರಾದ ಗಂಡಿ ಬಸವರಾಜ, ಗರಗ ಪ್ರಕಾಶ್ ಪೂಜಾರ್, ನಾರಾಯಣನಾಯ್ಕ, ಪಿ. ಓಬಪ್ಪ, ಬಾದಾಮಿ ಮೃತ್ಯುಂಜಯ, ಬಿಎಂಎಂ ಕಂಪನಿಯ ಅಧಿಕಾರಿಗಳಾದ ಗಿರೀಶ್ ಕಾಕನೂರು, ಜಹಾಂಗೀರ್ ಸಾಹೇಬ್ ಸೇರಿದಂತೆ ಸ್ಥಳೀಯ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.