ಸಾರಾಂಶ
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆಸಕ್ತಿದಾಯಕವಾಗಿ ಪ್ರತಿ ರಂಗದಲ್ಲಿ ಮುನ್ನಡಿ ಕಂಡುಕೊಳ್ಳಬಹುದು
ಕೊಟ್ಟೂರು: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದಾ ಸದೃಢರಾಗಿರಲು ಸಾಧ್ಯ ಎಂದು ಕೊಟ್ಟೂರೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರವಿಕುಮಾರ್ ಹೇಳಿದರು.
ಮಹಾವಿದ್ಯಾಲಯದ ಕ್ರೀಡಾ ವಿಭಾಗ ಆಯೋಜಿಸಿದ್ದ ವಿಶ್ವ ಆಥ್ಲೆಟಕ್ಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆಸಕ್ತಿದಾಯಕವಾಗಿ ಪ್ರತಿ ರಂಗದಲ್ಲಿ ಮುನ್ನಡಿ ಕಂಡುಕೊಳ್ಳಬಹುದು ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ.ಶಿವಕುಮಾರ್ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಬಳಕೆಯಾಗುತ್ತದೆ, ಇದರ ಜತೆಗೆ ವಿನಯ ಶಿಸ್ತು ಮೌಲ್ಯ ವಿದ್ಯಾರ್ಥಿಗಳು ರೂಢಿಸಿಕೊಂಡರೆ ಎಲ್ಲ ಹಂತದಲ್ಲಿ ಪ್ರಗತಿ ಕಾಣಬಹುದು ಎಂದರು. ಪ್ರೊ. ರಾಧಸ್ವಾಮಿ ಕೆ.ಪಿ.ಕೆ.ಉಮೇಶ ರಮೇಶ, ಎಚ್.ಚಂದ್ರಶೇಖರ್, ಜೆ.ಎಸ್, ರಶ್ಮಿ ಕೆ, ಚಂದ್ರಕಾಂತ ಇದ್ದರು. ಸಿಂಧೂ ಎ.ಎಂ, ರಮೇಶ್ ಎಚ್ ನಿರೂಪಿಸಿದರು