ಸಾರಾಂಶ
ನಿಜವಾದ ಕ್ರೀಡಾಪಟು ಎಂದೂ ಕೆಟ್ಟ ನಾಗರಿಕ ಅಲ್ಲ. ಸದೃಢವಾದ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಆದಕಾರಣ ಎಲ್ಲಾ ವಿದ್ಯಾರ್ಥಿಗಳು ಪ್ರತಿದಿನ ದೈಹಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು ಎಂದು ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ ಹೇಳಿದರು.
ಲಕ್ಷ್ಮೇಶ್ವರ: ನಿಜವಾದ ಕ್ರೀಡಾಪಟು ಎಂದೂ ಕೆಟ್ಟ ನಾಗರಿಕ ಅಲ್ಲ. ಸದೃಢವಾದ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಆದಕಾರಣ ಎಲ್ಲಾ ವಿದ್ಯಾರ್ಥಿಗಳು ಪ್ರತಿದಿನ ದೈಹಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು ಎಂದು ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ ಹೇಳಿದರು.
ಇಲ್ಲಿಯ ಉಮಾ ವಿದ್ಯಾಲಯದ ಕ್ರೀಡಾಂಗಣದಲ್ಲಿ ಶುಕ್ರವಾರ ಸಹಿಪ್ರಾಶಾಲೆ ನಂ 3 ಆಶ್ರಯದಲ್ಲಿ ನಡೆದ 2025-26 ನೇ ಸಾಲಿನ ಲಕ್ಷ್ಮೇಶ್ವರ ಗ್ರೂಪ್ ನಂ 2ರ ಗ್ರೂಪ್ ಮಟ್ಟದ ಕ್ರೀಡಾಕೂಟದ ನಿಮಿತ್ತ ಒಲಿಂಪಿಕ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಕ್ರೀಡೆಗಳು ವಿದ್ಯಾರ್ಥಿಗಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕರಿಸುತ್ತವೆ. ಕ್ರೀಡೆಗಳಲ್ಲಿ ಸೋಲು ಗೆಲವು ಮುಖ್ಯವಲ್ಲ, ಕ್ರೀಡಾ ಮನೋಭಾವವು ವ್ಯಕ್ತಿಯನ್ನು ಸೋಲಿನ ಹತಾಶೆಯನ್ನು ಧೈರ್ಯದಿಂದ ಎದುರಿಸಬೇಕು ಎನ್ನುವುದನ್ನು ಕಲಿಸುತ್ತದೆ ಎಂದು ಅವರು ಹೇಳಿದರು.
ಕರಾಪ್ರಾಶಾಶಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರು ನೇಕಾರ ಅವರು ಗುಂಡು ಎಸೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಮೊಬೈಲ್ ಫೋನ್‌ಗಳನ್ನು ಬಿಟ್ಟು ಎಲ್ಲ ಮಕ್ಕಳೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.ಕ್ರೀಡಾ ಜ್ಯೋತಿಯನ್ನು ಈಶ್ವರ ಮೆಡ್ಲೇರಿ ಮತ್ತು ದಿಗಂಬರ ಪೂಜಾರ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಸೋಮಣ್ಣ ಮಾಗಡಿ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದಲ್ಲಿ ಒಟ್ಟು 8 ಶಾಲೆ ಕ್ರೀಡಾಪಟುಗಳು ಭಾಗವಹಿಸಿದ್ದರು.ಕ್ರೀಡಾಕೂಟದಲ್ಲಿ ಎಲ್.ಎ.ನಡುವಿನಮನಿ, ಬಿ.ಎಮ್.ಕುಂಬಾರ, ಸತೀಶ್ ಬೋಮಲೆ, ಉಮೇಶ್ ನೇಕಾರ, ಡಿ.ಡಿ. ಲಮಾಣಿ, ಎಸ್.ಕೆ. ಹವಾಲ್ದಾರ, ಎನ್.ಪಿ.ಪ್ಯಾಟಿಗೌಡರ, ಆರ್.ಎಂ. ಶಿರಹಟ್ಟಿ, ಆರ್.ಬಿ. ಮಾಂಡ್ರೆ ಮತ್ತು ವಿವಿಧ ಶಾಲೆಗಳ ದೈಹಿಕ ಶಿಕ್ಷಕರು, ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು. ಬಿ.ಎಂ. ಕುಂಬಾರ ಸ್ವಾಗತಿಸಿದರು. ಎಚ್.ಡಿ. ನಿಂಗರೆಡ್ಡಿ ನಿರೂಪಿಸಿದರು. ಎಮ್.ಎಮ್. ಕಳಸೂರ ವಂದಿಸಿದರು.