ಸಾರಾಂಶ
ಶಿಡ್ಲಘಟ್ಟ: ಗ್ರಾಮೀಣ ಭಾಗದಲ್ಲಿ ಒಟ್ಟಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಜಾತಿ, ಭೇದ, ಮೇಲು ಕೀಳು ಎಂಬ ಭಾವನೆಗಳು ದೂರವಾಗಿ ಸ್ನೇಹ ಸೌಹಾರ್ದತೆ ಏರ್ಪಡುತ್ತದೆ ಎಂದು ಕಾಂಗ್ರೆಸ್ ಮುಖಂಡ ಪುಟ್ಟು ಆಂಜಿನಪ್ಪ ಹೇಳಿದರು. ತಾಲೂಕಿನ ಸಾದಲಿ ಹೋಬಳಿಯ ಎಸ್. ದೇವಗಾನಹಳ್ಳಿ ಗ್ರಾಮ ಪಂಚಾಯಿತಿಯ ನಿಲವರಾತಹಳ್ಳಿ ಗ್ರಾಮದಲ್ಲಿ ಗಡಿ ಭಾಗದ ಮೂರು ಪಂಚಾಯಿತಿಗಳ ಮಟ್ಟಕ್ಕೆ ಮಾತ್ರ ಆಯೋಜಿಸಿದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಕಾರ್ಯಕ್ರಮವನ್ನು ಪ್ರಶಸ್ತಿ ವಿಜೇತರಿಗೆ ನಗದು ಮತ್ತು ಆಕರ್ಷಕ ಟ್ರೋಪಿ ವಿತರಿಸಿ ಶುಭ ಹಾರೈಸಿ ಮಾತನಾಡಿದರು. ನಿಲವರಾತಹಳ್ಳಿ ಗ್ರಾಮದಲ್ಲಿ ಗಡಿ ಭಾಗದ ಮೂರು ಪಂಚಾಯಿತಿಗಳ ಮಟ್ಟಕ್ಕೆ ಮಾತ್ರ ಆಯೋಜಿಸಿದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಪ್ರಥಮ ಬಹುಮಾನವಾಗಿ 20 ಸಾವಿರ ಹಾಗೂ ಆಕರ್ಷಕ ಟ್ರೋಪಿಯನ್ನು ಎಸ್. ಕುರುಬರಹಳ್ಳಿಯ ಯಂಗ್ ಟೈಗರ್ಸ್ ಪಡೆದುಕೊಂಡರೆ, ದ್ವಿತೀಯ ಬಹುಮಾನವಾಗಿ 10 ಸಾವಿರ ಹಾಗೂ ಆಕರ್ಷಕ ಟ್ರೋಪಿಯನ್ನು ನಿಲವರಾತಹಳ್ಳಿ ಪವರ್ ಹಿಟ್ಟರ್ ಪಡೆದುಕೊಂಡಿತು. ಇನ್ನು ಐದು ಸಾವಿರ ಹಾಗೂ ಆಕರ್ಷಕ ಟ್ರೋಪಿಯನ್ನು ತೃತೀಯ ಬಹುಮಾನವಾಗಿ ಸಾದಲಿ ತಂಡದ ಸೂಪರ್ ಸ್ಟಾರ್ ಆಟಗಾರರು ಪಡೆದುಕೊಂಡರು. ಮುಖಂಡರಾದ ಎನ್. ಕೃಷ್ಣ (ಗುಂಡಣ್ಣ), ಪೆದ್ದಪ್ಪಯ್ಯ ,ಮುನಿವೆಂಕಟಪ್ಪ, ಸತೀಶ ಎನ್, ಗೋವರ್ಧನ, ಗೋವಿಂದಣ್ಣ, ವೆಂಕಟಸ್ವಾಮಿ, ಅಶ್ವಥ್ ರೆಡ್ಡಿ ,ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ರಮೇಶ್, ಚಿಲಕಲನೆರ್ಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರವಿಚಂದ್ರ, ಡಿ.ಎನ್, ಎಸ್ ದೇವಗಾನಹಳ್ಳಿ ರಮೇಶ್, ಹನುಮಂತ್, ಸಾದಲಿ ನಾರಾಯಣಪ್ಪ ಸೇರಿ ಮತ್ತಿತರು ಪಾಲ್ಗೊಂಡಿದ್ದರು.