ಕ್ರೀಡಾ ದಿನಾಚರಣೆ: ಸಾಧಕ ಕ್ರೀಡಾಪಟುಗಳಿಗೆ ಸನ್ಮಾನ

| Published : Feb 05 2024, 01:45 AM IST

ಸಾರಾಂಶ

ಕ್ರೀಡಾ ಕ್ಷೇತ್ರಗಳಲ್ಲಿ ಸಾಧನಗೈದ ರಾಷ್ಟ್ರೀಯ ಕ್ರೀಡಾಪಟುಗಳಾದ ಕೇರಂಪಟು ಕೆ.ಎಸ್. ವಿಜಯಕುಮಾರ್, ಪವರ್‌ಲಿಫ್ಟಿಂಗ್ ರಾಷ್ಟ್ರೀಯ ತೀರ್ಪುಗಾರರಾದ ಲಕ್ಷ್ಮಿ ದೇವಿ, ರಾಜ್ಯಮಟ್ಟದ ಕೇರಂ ಚಾಂಪಿಯನ್ ಶಿವಕುಮಾರ್, ಪವರ್ ಲಿಫ್ಟರ್ ಜಿ.ಗೋಪಾಲ್ , ಸ್ಟ್ರಾಂಗ್‌ ಮ್ಯಾನ್ ಆಫ್ ಇಂಡಿಯಾ ಎ. ಚಂದ್ರಪ್ಪರನ್ನು ಎಸ್.ಎಸ್.ಕೇರ್ ಟ್ರಸ್ಟ್‌ನ ಟ್ರಸ್ಟೀ ಡಾ.ಪ್ರಭಾ ಮಲ್ಲಿಕಾರ್ಜುನ್ ಸನ್ಮಾನಿಸಿದರು.

ದಾವಣಗೆರೆ: ಜಿಲ್ಲಾ ಫುಟ್‌ಬಾಲ್ ಅಸೋಸಿಯೇಷನ್ ವತಿಯಿಂದ ಕ್ರೀಡೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಖೇಲೋ ಇಂಡಿಯಾ ಅಡಿಯಲ್ಲಿ ನಗರದ ಲೂಡ್ಸ್ ಬಾಯ್ಸ್ ಸ್ಕೂಲ್ ಆವರಣದಲ್ಲಿ ಜರುಗಿದ ಪ್ರಪ್ರಥಮ ರಾಜ್ಯಮಟ್ಟದ ಮಹಿಳಾ ಪುಟ್ಬಾಲ್ ಪಂದ್ಯಾವಳಿಗಳ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನಗೈದ ರಾಷ್ಟ್ರೀಯ ಕ್ರೀಡಾಪಟುಗಳಾದ ಕೇರಂಪಟು ಕೆ.ಎಸ್. ವಿಜಯಕುಮಾರ್, ಪವರ್‌ಲಿಫ್ಟಿಂಗ್ ರಾಷ್ಟ್ರೀಯ ತೀರ್ಪುಗಾರರಾದ ಲಕ್ಷ್ಮಿ ದೇವಿ, ರಾಜ್ಯಮಟ್ಟದ ಕೇರಂ ಚಾಂಪಿಯನ್ ಶಿವಕುಮಾರ್, ಪವರ್ ಲಿಫ್ಟರ್ ಜಿ.ಗೋಪಾಲ್ , ಸ್ಟ್ರಾಂಗ್‌ ಮ್ಯಾನ್ ಆಫ್ ಇಂಡಿಯಾ ಎ. ಚಂದ್ರಪ್ಪರನ್ನು ಎಸ್.ಎಸ್.ಕೇರ್ ಟ್ರಸ್ಟ್‌ನ ಟ್ರಸ್ಟೀ ಡಾ.ಪ್ರಭಾ ಮಲ್ಲಿಕಾರ್ಜುನ್ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಪುಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಲತಿಕಾ ದಿನೇಶ್ ಶೆಟ್ಟಿ, ಕೇರಂ ಗಣೇಶ್, ಪುಟ್ಭಾಲ್ ಸಂಸ್ಥೆಯ ಅಶೋಕ್, ಸೈಯದ್, ನವಜಿತ್ ಬಳೆಗಾರ, ಮೊಹಮ್ಮದ್, ಯುವರಾಜ್, ಸಾಧಿಕ್ ಮತ್ತಿತರರಿದ್ದರು.