ಕ್ರೀಡೆ ಹೊಸ ಚೈತನ್ಯ ನೀಡುತ್ತದೆ

| Published : Sep 10 2024, 01:39 AM IST

ಸಾರಾಂಶ

ಕ್ರೀಡೆ ಪರಸ್ಪರರಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುವುದಲ್ಲದೆ,ಒತ್ತಡ ನಿಯಂತ್ರಣಕ್ಕೆ ಅವಕಾಶ ಮಾಡಿಕೊಡುತ್ತದೆ. ಪ್ರತಿ ದಿನವೂ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರು ಮಾನಸಿಕ ಒತ್ತಡದಿಂದ ಹೊರಬರಲು ಕ್ರೀಡೆ ಸಹಕಾರಿ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸದಾ ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಯೋಚಿಸುವ ಶಿಕ್ಷಕರಿಗೆ ಶಿಕ್ಷಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಿನ ಚೈತನ್ಯ ನೀಡುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ತಿಳಿಸಿದರು. ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲಿಶಿಕ್ಷಕರು ಶಾಲೆಯಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪೋತ್ಸಾಹಿಸುವುದಲ್ಲಿ ಹೆಚ್ಚಿನ ಗಮನವಿರಿಸುವುದರಿಂದ ಬಹುತೇಕ ಸಂದರ್ಭಗಳಲ್ಲಿ ತಮ್ಮ ಆಸಕ್ತಿಯ ಕ್ರೀಡೆ, ಹವ್ಯಾಸಗಳನ್ನು ಮರೆತು ಬಿಟ್ಟಿರುತ್ತಾರೆ. ಹೀಗಾಗಿ ಇಂತಹ ಕ್ರೀಡಾಕೂಟಗಳು ವೃತ್ತಿ ಜೀವನದಲ್ಲಿ ಚಿರಸ್ಮರಣಿಯವಾಗಿ ಉಳಿಯುತ್ತವೆ. ಕ್ರೀಡಾಕೂಟದಲ್ಲಿ ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡಿರುವುದು ಒಳ್ಳೆಯ ಬೆಳವಣಿಗೆ. ಇದು ಜಿಲ್ಲಾಮಟ್ಟಕ್ಕೆ ವಿಸ್ತಾರವಾಗಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕಾಂತರಾಜ್ ಮಾತನಾಡಿ, ಕ್ರೀಡೆ ಪರಸ್ಪರರಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುವುದಲ್ಲದೆ,ಒತ್ತಡ ನಿಯಂತ್ರಣಕ್ಕೆ ಅವಕಾಶ ಮಾಡಿಕೊಡುತ್ತದೆ. ಪ್ರತಿ ದಿನವೂ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರಿರು ಮಕ್ಕಳ ಹಾಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದರು.

ವಿವಿಧ ಕ್ರೀಡೆ ಆಯೋಜನೆತಾಲೂಕಿನ ವಿವಿಧೆಡೆಯಿಂದ ಬಂದಂತಹ ಶಿಕ್ಷಕರಿಗೆ ಹಗ್ಗಜಗ್ಗಾಟ, ಮತ್ತು ಮಡಿಕೆ ಹೊಡೆಯುವ ಸ್ಪರ್ಧೆಗಳು ನಡೆಸಿದರೆ, ಶಿಕ್ಷಕಿಯರಿಗೆ ಮ್ಯೂಸಿಕಲ್‌ ಛೇರ್‌ ಮತ್ತು ಹಗ್ಗ ಜಗ್ಗಾಟ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿಕ್ಷೇತ್ರ ಸಮನ್ವಯ ಅಧಿಕಾರಿ ಎಂ .ಕೆ .ಶಶಿಕಲಾ ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ .ಅಪ್ಪಯ್ಯ ಗೌಡ ಶಿಕ್ಷಕರ ಸಂಘದ ಅಧ್ಯಕ್ಷ ಎಂ ಆರ್ ಆಂಜನೇಯ ಗೌಡ ಕಾರ್ಯದರ್ಶಿ ಶ್ಯಾಮ ಮೂರ್ತಿ, ಜಿಲ್ಲಾ ಉಪಾಧ್ಯಕ್ಷ ನಾರಾಯಣಸ್ವಾಮಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್ ರಾಜಪ್ಪ ಮುಖಂಡರುಗಳಾದ ಬಿ ನಾರಾಯಣಸ್ವಾಮಿ, ಹೆಚ್ ಆರ್ ರವಿ, ರಮೇಶ್,ಶಂಕರಪ್ಪ ಶ್ರೀನಾಥ್, ಶ್ರೀನಿವಾಸ್ ಮೂರ್ತಿ, ನಾಗರಾಜ, ಗೋಪಿನಾಥ್ ಮುಕ್ತಿಯರ್ ಸುಜಾತ ಪ್ರೇಮಲತಾ ರುಕ್ಮಿಣಿ ಇತರರು ಇದ್ದರು.