ಆಟದಲ್ಲಿ ಸೋತರೂ ಪರವಾಗಿಲ್ಲ. ಕಲಿಯುತ್ತಾ ಹೋಗಬೇಕು ಹಾಗೂ ತಪ್ಪುಗಳನ್ನು ತಿದ್ದಿಕೊಂಡು ಗೆಲುವಿನ ಕಡೆಗೆ ಸಾಗಬೇಕು.
ನರೇಗಲ್ಲ: ಕ್ರೀಡೆ ಕೇವಲ ಒಂದು ಆಟವಾಗಿರದೇ ಜಾತ್ಯತೀತವಾಗಿ ಸಮುದಾಯಗಳ ನಡುವೆ ಪ್ರೀತಿಯನ್ನು ಹುಟ್ಟುಹಾಕಿ ಸಮಾಯದ ಹಿತ ಕಾಪಾಡುವ ಶಕ್ತಿಯನ್ನು ಹೊಂದಿದೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.ಸ್ಥಳೀಯ 3ನೇ ವಾರ್ಡ್ ಆಶ್ರಯ ಕಾಲನಿ ಹಾಗೂ ಬುಲ್ಡೋಜರ್ ನಗರದ ಆಸ್ರಯದಲ್ಲಿ ಶಾಸಕ ಜಿ.ಎಸ್. ಪಾಟೀಲರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸಾವಿರ ಕೆರೆಗಳ ಸರದಾರ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಬುಧವಾರ ಸಂಜೆ ಚಾಲನೆ ನೀಡಿ ಮಾತನಾಡಿದರು.ನಾನು ಕ್ರಿಕೆಟ್ ಆಟಗಾರನಾಗಿದ್ದು, ಆಗ ಟೆಸ್ಟ್ ಪಂದ್ಯಾವಳಿಗೆ ಮಹತ್ವ ನೀಡಲಾಗುತ್ತಿತ್ತು. ನಂತರ 50 ಓವರ್‌ಗಳ ಪಂದ್ಯಾವಳಿ ಬಂದವು. ಈಗ ಟಿ- 20 ಎನ್ನುವುದು ಹೆಚ್ಚು ಪ್ರಚಲಿತವಾಗಿದೆ. ಅಂದರೆ ಕಾಲಕ್ಕೆ ತಕ್ಕಂತೆ ಆಟ, ನಿಯಮ, ಆಸಕ್ತಿ ಬದಲಾಗುತ್ತಾ ಹೋಗುತ್ತವೆ. ಬದಲಾವಣೆಗೆ ತಕ್ಕಂತೆ ಯುವಕರು ಕ್ರೀಡೆಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಮುಂದಾಗಬೇಕು ಎಂದರು.
ಆಟದಲ್ಲಿ ಸೋತರೂ ಪರವಾಗಿಲ್ಲ. ಕಲಿಯುತ್ತಾ ಹೋಗಬೇಕು ಹಾಗೂ ತಪ್ಪುಗಳನ್ನು ತಿದ್ದಿಕೊಂಡು ಗೆಲುವಿನ ಕಡೆಗೆ ಸಾಗಬೇಕು. ಆಯೋಜಕರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ದಾನಿಗಳು, ಆಟಗಾರರು ಹಾಗೂ ಜನರು ಖುಷಿ ಪಡುವಂತೆ ಯಶಸ್ವಿಗೊಳಿಸಬೇಕು. ಏ. 9, 10ರಂದು ರೋಣದಲ್ಲಿ ಯುವಕರಿಗಾಗಿ ಉದ್ಯೋಗ ಮೇಳ ಹಾಗೂ ಮಹಿಳೆಯರಿಗಾಗಿ ಮಹಿಳಾ ಸಬಲೀಕರಣದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.ಈ ವೇಳೆ ವಾರ್ಡ್ ಪರವಾಗಿ ಆಯೋಜಕರು ಶಾಸಕರನ್ನು ಸನ್ಮಾನಿಸಿದರು. ಮುಖಂಡರಾದ ನಿಂಗನಗೌಡ ಲಕ್ಕನಗೌಡ್ರ, ಡಾ. ಕೆ.ಬಿ. ಧನ್ನೂರ, ವೀರನಗೌಡ ಪಾಟೀಲ, ಅರುಣ ಕಾಮತ, ಯೂಸೂಫ್ ಇಟಗಿ, ಬಸವರಾಜ ನವಲಗುಂದ, ಎ.ಸಿ. ಪಾಟೀಲ, ಸಂತೋಷ ಹನುಮಸಾಗರ, ಕಳಕನಗೌಡ ಪೊಲೀಸಪಾಟೀಲ, ಶೇಖಪ್ಪ ಜುಟ್ಲ, ಆನಂದ ನಡುವಲಕೇರಿ, ಶೇಖಪ್ಪ ಕೆಂಗಾರ, ರೀಯಾಜ್ ಆಲೂರ, ದರ್ಶನ ಡುಮ್ಮನ್ನವರ, ಖಾದರಸಾಬ್ ಬೇಪಾರಿ, ಲಾಲಸಾಬ್ ಬೇಪಾರಿ, ಸದ್ದಾಂ ನಶೇಖಾನ್, ಶರಣಪ್ಪ ಹಂಚಿನಾಳ, ಬಿ.ಬಿ. ಮಲ್ಲನಗೌಡ್ರ ಇದ್ದರು.