ಶಿಕ್ಷಕರ ಮಾನಸಿಕ, ದೈಹಿಕ ಒತ್ತಡವನ್ನು ನಿವಾರಿಸಲು ಕ್ರೀಡೆ ಅತ್ಯಂತ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಶಿಕ್ಷಕರ ಮಾನಸಿಕ, ದೈಹಿಕ ಒತ್ತಡವನ್ನು ನಿವಾರಿಸಲು ಕ್ರೀಡೆ ಅತ್ಯಂತ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಹೇಳಿದರು.

ನಗರದ ಡಾ.ಬಿ.ಆ‌ರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಾಮರಾಜನಗರ ತಾಲೂಕು ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಧ್ವಜರೋಹಣ ನೆರವೇರಿಸಿ ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸದಾ ದೈನಂದಿನ ಬೋಧನಾ ಚಟುವಟಿಕೆಯಲ್ಲಿರುವ ಶಿಕ್ಷಕರಿಗೆ ಪರಿಶ್ರಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಶಿಕ್ಷಕರಿಗೆ ಪ್ರತಿ ಹಂತದಲ್ಲೂ ಇಲಾಖೆಯು ಸ್ಪಂದಿಸಿಕೊಂಡು ಬರುತ್ತಿದೆ. ಇಲಾಖೆಯು ಯೋಚನೆ ‌ ಮಾಡುವಂತಹದ್ದು ಸಂಬಂಧಪಟ್ಟ ಫಲಾನುಭವಿಗಳಿಗೆ ಸವಲತ್ತುಗಳನ್ನು ಕೊಡಬೇಕು. ಹೆಚ್ಚು ಹೆಚ್ಚು ಕಾರ್ಯಗಳನ್ನು ಅಯೋಜನೆ ಮಾಡುವುದು ಸರ್ಕಾರ ಒಂದು ಆಶಯ. ಅಲ್ಲದೆ ಹತ್ತಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತಿದ್ದಾರೆ. ಸಮವಸ್ತ್ರ,ಪಠ್ಯಪುಸ್ತಕ, ಬಿಸಿಯೂಟ ಇತರೆ ಜವಾಬ್ದಾರಿ ಮುಖ್ಯಶಿಕ್ಷಕರಿಗೆ ವಹಿಸಿದೆ ಇದು ಹೊರೆಯಾಗಿ ಪರಿಣಾಮಿಸಿದೆ. ಇದನ್ನು ಸರಿಪಡಿಸುವಂತೆ ಸಂಘದ ಇಲಾಖೆಗೆ ಮನವಿ ಸಲ್ಲಿಸಿತು ಅದನ್ನು ಪರಿಗಣಿಸಿ ಇಲಾಖೆ ಕಾರ್ಯದರ್ಶಿಸರಿಪಡಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ‌ ಮಾತನಾಡಿ, ಶಿಕ್ಷಕರು ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಒತ್ತಡ ಕಡಿಮೆ ಮಾಡಬೇಕಿದೆ. ಅದರಲ್ಲೂ ಮುಖ್ಯಶಿಕ್ಷಕರಿಗೆ ತುಂಬಾ ಒತ್ತಡ ಇದೆ. ನಮ್ಮ ಸಂಘವು ಸರ್ಕಾರದ ಮೇಲೆ ಹಲವು ಬೇಡಿಕೆಗಳ ಈಡೇರಿಸುವಂತೆ ಒತ್ತಡ ಹಾಕುತ್ತಿದೆ ಎಂದರು.

ಇತ್ತೀಚೆಗೆ ಇಲಾಖೆ ಬೋಧಕೇತರ ಚಟುವಟಿಕೆ ಮಾಡಬೇಕು ಎಂದು ಮಾಡುತಿದೆ. ಇದನ್ನು ನಿವಾರಣೆ ಮಾಡಲು ವಿಶೇಷ ಕಾಯ್ದೆ ತರಲು ಹೊರಟಿದೆ. ಕಾಯ್ದೆಯು ಸಿದ್ಧವಾಗಿದೆ. ಈ ಅಧಿವೇಶನದಲ್ಲಿ ಜಾರಿಯಾಗಬೇಕಿತು. ಮುಂದಿನ ಅಧಿವೇಶನದಲ್ಲಿ ಜಾರಿಯಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ ಮಾತನಾಡಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಾಮರಾಜನಗರ ತಾಲೂಕು ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕ್ರೀಡಾಕೂಟ ಶಿಕ್ಷಕರ ಒತ್ತಡ ನಿವಾರಣೆ ಸಹಕಾರಿಯಾಗಿದೆ. ಪ್ರತಿದಿನ ಬಿಡುವಿನ ವೇಳೆಯಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವಂತರಾಗಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಎಂ.ಡಿ.ಮಹದೇವಯ್ಯ, ಉಪಾಧ್ಯಕ್ಷ ಭವಾನಿ ದೇವಿ, ಖಜಾಂಚಿ ಶಿವಕುಮಾರಯ್ಯ, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಸುಧಾ, ಉಪಾಧ್ಯಕ್ಷ ಧನಂಜಯ, ಖಜಾಂಚಿ ಸಮೀವುಲ್ಲಾ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಕಾರ್ಯದರ್ಶಿ ನೇಮಿರಾಜ್, ಸಹ ಕಾರ್ಯದರ್ಶಿ ಕೃಷ್ಣಮೂರ್ತಿ, ಸಹ ಕಾರ್ಯದರ್ಶಿ ಬಿ.ಎಸ್.ಲತಾ, ಸಂಘಟನಾ ಕಾರ್ಯದರ್ಶಿ ಬಿ.ಎಸ್. ಶ್ವೇತ, ಗೌರವಾಧ್ಯಕ್ಷ ಸಿ.ಎಂ.ಮರುಗೇಶ್‌ ಕುಮಾರ್, ಸಾವಿತ್ರಿಭಾಫುಲೆ ಸಂಘದ ಅಧ್ಯಕ್ಷ ಎಸ್. ನೇತ್ರಾವತಿ, ಅಲ್‌ಫಲಾ ಸಂಘ ಅಧ್ಯಕ್ಷ ಸಬಾನ ಅಜುಂ ಸಂಘದ ಪದಾಧಿಕಾರಿಗಳು ನಿರ್ದೇಶಕರು, ಸದಸ್ಯರು ಭಾಗವಹಿಸಿದ್ದರು.