ಏಕಾಗ್ರತೆ ಹೆಚ್ಚಿಸುವಲ್ಲಿ ಕ್ರೀಡೆ ಸಹಕಾರಿ

| Published : Dec 17 2024, 01:01 AM IST

ಸಾರಾಂಶ

ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುತ್ತವೆ.

ಕುರುಗೋಡು; ತಾಲೂಕಿನ ಸಮೀಪದ ಬಾದನಹಟ್ಟಿಯ ಶ್ರೀನಂದಿ ಶಾಲೆ ಕ್ರೀಡಾಂಗಣದಲ್ಲಿ ಕುಸ್ಮ ಸಂಸ್ಥೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ತಾಲೂಕು ಮಟ್ಟದ ಕ್ರೀಡಾಕೂಡ ಆಯೋಜಿಸಿತು.

ಬಾಲಕಿಯರ ವಿಭಾಗದ ೨೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಕುಡತಿನಿ ನೇತಾಜಿ ಶಾಲೆಯ ವಿದ್ಯಾರ್ಥಿನಿ ಖೈರುಮ್ ಬಿ, ಬಾಲಕರ ವಿಭಾಗದಲ್ಲಿ ಕುಡತಿನಿ ಗುರುದೇವ ಶಾಲೆಯ ವಿದ್ಯಾರ್ಥಿ ಕೆ.ವೀರೇಶ್ ಪ್ರಥಮ ಸ್ಥಾನ ಪಡೆದರು.

ಮದರ್ ತೆರೆಸಾ ಶಾಲೆಯ ದಿವ್ಯ ಮತ್ತು ಗುರುದೇವ ಶಾಲೆಯ ದೀಕ್ಷ ಮತ್ತು ಬಾಲಕರ ವಿಭಾಗದಲ್ಲಿ ನೇತಾಜಿ ಶಾಲೆಯ ಸೋಹೆಲ್ ಮತ್ತು ವಿವೇಕಾನಂದ ಶಾಲೆಯ ಜೀವನ್ ಇವರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.

ಕ್ರೀಡಾಕೂಟ ಉದ್ಘಾಟಿಸಿದ ಬಿಇಒ ಸಿದ್ದಲಿಂಗಮೂರ್ತಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುತ್ತವೆ. ಎಲ್ಲ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿ೦ದ ಆಸಕ್ತಿ ಇರುವ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದರು.

ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓಕಾಗ್ರತೆ ಹೆಚ್ಚಿಸುವಲ್ಲಿ ಕ್ರೀಡೆಗಳು ಸಹಕಾರಿ. ಸ್ಪರ್ಧಾತ್ಮಕ ಯುಗದಲ್ಲಿ ಜೀವಿಸುತ್ತಿರುವ ನಾವು ಚಟುವಟಿಕೆಗಳಲ್ಲಿ ಭಾಗವಹಿಸಿ ಕ್ರಿಯಾಶೀಲರಾಗಿರಬೇಕು ಕ್ರೀಡೆಗಳಲ್ಲಿ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ಸಂಸ್ಥೆ ಅಧ್ಯಕ್ಷ ಜೆ.ರವಿ ರೆಡ್ಡಿ ಮಾತನಾಡಿದರು. ಕ್ರೀಡಾ ಕಾರ್ಯದರ್ಶಿ ಬಾಗ್ಲಿ, ಬಿ.ಸಿದ್ದಪ್ಪ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಕುಸ್ಮ ಸಂಸ್ಥೆ ಅಧ್ಯಕ್ಷ ಜೆ.ರವಿ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪದ್ಮಾರೆಡ್ಡಿ, ಕೆ.ಎಂ. ಪಂಚಾಕ್ಷರಯ್ಯ ಸ್ವಾಮಿ, ಗುರುಮೂರ್ತಿ, ಎಚ್.ಶಾಂತನಗೌಡ, ಶ್ರೀನಿವಾಸ್, ಕೆ.ಶಂಕರ್, ಶಿವಾನಂದ ಪಾಟೀಲ್, ವಿ.ಎಸ್.ಚಕ್ರವರ್ತಿ ಬಿ.ಬಿ. ಜಡೇಶ್, ಕೆ.ಗಾಯತ್ರಿ, ಬಿ.ಕೃಷ್ಣ ಇದ್ದರು. ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ಹಳ್ಳಿಗಳ ೩೨ ಶಾಲೆಂಯ ೮೫೦ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಕುರುಗೋಡು ತಾಲೂಕಿನ ಸಮೀಪದ ಬಾದನಹಟ್ಟಿಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದ ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ ಮಾತನಾಡಿದರು.