ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್ ಟೂರ್ನಿಯನ್ನು ಶ್ರೀ ಮಾದಾರ ಚನ್ನಯ್ಯ ಬಸವಮೂರ್ತಿ ಶ್ರೀ ಉದ್ಘಾಟಿಸಿದರು.
ಚಿತ್ರದುರ್ಗ: ದುರ್ಗಾ ಸ್ಪೈಕರ್ಸ್ ವಾಲಿಬಾಲ್ ಕ್ಲಬ್ ಮತ್ತು ವಾಲಿಬಾಲ್ ಅಸೋಸಿಯೇಷನ್ ಅಫ್ ಚಿತ್ರದುರ್ಗ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯೋತ್ಸವ ಕಪ್ 2025ನ್ನು ನಗರದ ಒನಕೆ ಓಬವ್ವ ಕ್ರೀಡಾಂಗಣದ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಚಿತ್ರದುರ್ಗ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್ ಟೂರ್ನಿಯನ್ನು ಶ್ರೀ ಮಾದಾರ ಚನ್ನಯ್ಯ ಬಸವಮೂರ್ತಿ ಶ್ರೀಗಳು ಉದ್ಘಾಟಿಸಿ ಮಾತನಾಡಿ, ಚಿತ್ರದುರ್ಗದಲ್ಲಿ ಕ್ರೀಡೆಗಳು ಕ್ರೀಡಾ ಚಟುವಟಿಕೆಗಳು ಹೆಚ್ಚಬೇಕು. ನಗರದಲ್ಲಿ ವಿವಿಧ ರೀತಿಯ ಕ್ರೀಡೆಗಳು ವರ್ಷ ಪೂರ್ತಿಯಾಗಿ ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪಾಠದ ಜೊತೆಗೆ ಆಟವನ್ನು ಸಹ ಆಡುವುದರ ಮೂಲಕ ಮಾನಸಿಕ ಹಾಗೂ ದೈಹಿಕವಾಗಿ ಸದೃಡರಾಗಬೇಕಿದೆ ಎಂದರು.ಅಂತಾರಾಷ್ಟ್ರೀಯ ಕ್ರೀಡಾಪಟು ಎನ್.ಡಿ.ಕುಮಾರ್ ಮಾತನಾಡಿ, ಕ್ರೀಡೆಗೆ ಯಾವುದೇ ಜಾತಿ ಧರ್ಮ ಭೇದವಿಲ್ಲ. ಕಠಿಣ ಪರಿಶ್ರಮವಿದ್ದಲ್ಲಿ ಕ್ರೀಡೆಯಲ್ಲಿ ಉನ್ನತ ಸ್ಥಾನಕ್ಕೇರಬಹುದು ಎಂದರು.
ಈ ವೇಳೆ ಚಿತ್ರದುರ್ಗ ಜಿಲ್ಲಾ ವಾಲಿಬಾಲ್ ಕೋಚ್ ಮಹಿಬುಲ, ಡಿವೈಎಸ್‌ಪಿ ರೆಹಮಾನ್, ಸೋಮಶೇಖರ್, ತಿಮ್ಮಣ್ಣ, ಸಾಧಿಕ್, ನಿಶ್ಚಿತ್, ವೈಶಾಕ್, ತಿಪ್ಪೇಸ್ವಾಮಿ, ಸಿದ್ದೇಶ್, ಮಿಲ್ಟ್ರಿ ಶಿವು ಮುಂತಾದವರು ಹಾಜರಿದ್ದರು.