ಉತ್ತಮ ಆರೋಗ್ಯವಿದ್ದರೆ ಎಲ್ಲವನ್ನು ಪಡೆಯಬಹುದು. ನಿತ್ಯದ ಜೀವನದಲ್ಲಿ ಕ್ರೀಡೆ ಆರೋಗ್ಯವೃದ್ಧಿಗೆ ಸಹಕಾರಿಯಾಗಿದೆ

ಯಲಬುರ್ಗಾ: ಪ್ರತಿಯೊಬ್ಬರಿಗೂ ಮಾನಸಿಕ ಮತ್ತು ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಸುಧೀರ ಕೊರ್ಲಹಳ್ಳಿ ಹೇಳಿದರು.

ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕು ಕ್ರೀಡಾಂಗಣದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ವಾರ್ಡ್ ವೈಸ್ ಕ್ರಿಕೆಟ್ ಲೀಗ್‌ನ ಸೀಸನ್-೧ರ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಉತ್ತಮ ಆರೋಗ್ಯವಿದ್ದರೆ ಎಲ್ಲವನ್ನು ಪಡೆಯಬಹುದು. ನಿತ್ಯದ ಜೀವನದಲ್ಲಿ ಕ್ರೀಡೆ ಆರೋಗ್ಯವೃದ್ಧಿಗೆ ಸಹಕಾರಿಯಾಗಿದೆ. ಕಠಿಣ ಮತ್ತು ಪರಿಶ್ರಮದಿಂದ ಕ್ರೀಡೆಯಲ್ಲಿ ಶ್ರಮವಹಿಸಿದರೆ ಯಶಸ್ಸು ಸಾಧ್ಯವಿದೆ. ಕ್ರೀಡೆಗಳಿಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದ್ದು, ಶ್ರದ್ಧೆಯಿಂದ ಕ್ರೀಡಾಪಟುಗಳು ಪಾಲ್ಗೊಳ್ಳಬೇಕು. ಸೋಲು ಗೆಲುವೆನ್ನದೆ ಕ್ರೀಡಾಸ್ಫೂರ್ತಿ ಮೆರೆಯಬೇಕು. ಜತೆಗೆ ಎಲ್ಲರಲ್ಲೂ ಕ್ರೀಡಾ ಮನೋಭಾವನೆ ವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಎಂ.ಎನ್.ಜನಾದ್ರಿ, ಸಂಗಣ್ಣ ತೆಂಗಿನಕಾಯಿ, ಕಲ್ಲಪ್ಪ ಕರಮುಡಿ ಮಾತನಾಡಿದರು.

ಭೂನ್ಯಾಯ ಮಂಡಳಿ ಸದಸ್ಯ ಮಲ್ಲಿಕಾರ್ಜುನ ಜಕ್ಕಲಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ತಹಸೀಲ್ದಾರ್ ಗುರುರಾಜ ಛಲವಾದಿ, ವಸಂತಕುಮಾರ ಭಾವಿಮನಿ, ಕಲ್ಲನಗೌಡ ಓಜನಹಳ್ಳಿ, ಮೌನೇಶ ಬಡಿಗೇರ, ಯಲ್ಲಪ್ಪ ಹಂದ್ರಾಳ, ರಮೇಶ ಛಲವಾದಿ, ಶಿವಲಿಂಗಪ್ಪ ಮಂಗಳೂರು, ಪ್ರಕಾಶ ಛಲವಾದಿ, ಗುರುರಾಜ ತುಮ್ಮರಗುದ್ದಿ, ವಿರೂಪಾಕ್ಷ ಪತ್ತಾರ, ಮಹಾಂತೇಶ ಛಲವಾದಿ, ಮುತ್ತು ಬಳಿಗಾರ, ಫರೀದ್ ಎಲಿಗಾರ,ವಿಕ್ರಮ್ ಛಲವಾದಿ, ಶ್ಯಾಮ ಪೂಜಾರ, ಶರಣಪ್ಪ, ಬಸವರಾಜ ಬಂಡಿಹಾಳ, ಶಿವರಾಜ ಭಾವಿಮನಿ, ಜಾನ್ ಬಣಕಾರ ಸೇರಿದಂತೆ ಕ್ರೀಡಾಪಟುಗಳು ಮತ್ತಿತರರು ಇದ್ದರು.