ಕ್ರೀಡೆಗಳು ನಾಯಕತ್ವ ಬೆಳೆಸಿಕೊಳ್ಳಲು ಸಹಕಾರಿ: ಸಂಸದ ಡಾ.ಕೆ.ಸುಧಾಕರ್

| Published : Jul 16 2024, 12:33 AM IST

ಕ್ರೀಡೆಗಳು ನಾಯಕತ್ವ ಬೆಳೆಸಿಕೊಳ್ಳಲು ಸಹಕಾರಿ: ಸಂಸದ ಡಾ.ಕೆ.ಸುಧಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡೆಗಳು ಯುವಕರಿಗೆ ಸಮಯಸ್ಫೂರ್ತಿ, ಹೊಣೆಗಾರಿಕೆ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು. ವಿಜಯಪುರದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಆಟಗಾರರನ್ನು ಅಭಿನಂದಿಸಿ ಮಾತನಾಡಿದರು.

ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಅಭಿಮತ

ಕನ್ನಡಪ್ರಭ ವಾರ್ತೆ ವಿಜಯಪುರ

ಕ್ರೀಡೆಗಳು ಯುವಕರಿಗೆ ಸಮಯಸ್ಫೂರ್ತಿ, ಹೊಣೆಗಾರಿಕೆ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಕೆಂಪೇಗೌಡ ಯುವಕರ ಬಳಗದಿಂದ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಆಟಗಾರರನ್ನು ಅಭಿನಂದಿಸಿ, ಪಂದ್ಯಶ್ರೇಷ್ಠ ಆಟಗಾರರಿಗೆ ನೆನಪಿನ ಕಾಣಿಕೆ ವಿತರಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಆಯೋಜಿಸಿರುವ ಕ್ರೀಡಾಕೂಟಗಳಿಂದ ಮತ್ತಷ್ಟು ಹೆಚ್ಚಾಗಬೇಕು. ಯುವಕರು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳ ವಿರುದ್ಧ ಸಂಘಟಿತರಾಗಿ ಹೋರಾಡಲು ಸಜ್ಜಾಗಬೇಕು ಎಂದರು.

ರಣಬೈರೇಗೌಡರ ತಂಡಕ್ಕೆ ಪ್ರಥಮ ಬಹುಮಾನ ೨೫ ಸಾವಿರ ನಗದು, ಬಾಲಗಂಗಾಧರನಾಥ ಸ್ವಾಮೀಜಿ ತಂಡ ದ್ವಿತೀಯ ಬಹುಮಾನ 15 ಸಾವಿರ ನಗದು, ಕೆಂಪೇಗೌಡ ತಂಡ ತೃತೀಯ ೧೦ ಸಾವಿರ ನಗದು ಬಹುಮಾನ ಪಡೆದುಕೊಂಡರು.

ಬಿಜೆಪಿ ಟೌನ್ ಅಧ್ಯಕ್ಷ ಆರ್.ಸಿ.ಮಂಜುನಾಥ್, ಮುಖಂಡರಾದ ಬಾಲೇಪುರ ಸುನೀಲ್, ಕೆ.ಆರ್.ಫೌಂಡೇಷನ್ ಸಂಸ್ಥಾಪಕ ಕುಶಾಲ್ ರಾಜ್ ಗೌಡ, ಚಂದೇನಹಳ್ಳಿ ಗೋವಿಂದರಾಜು, ಆರ್.ಎಂ.ಸಿಟಿ.ಮಂಜುನಾಥ್, ಮಹೇಶ್ ಕುಮಾರ್, ಕಿರಣ್, ಜಯಕರ್ನಾಟಕ ಸಂಘಟನೆ ರಾಜ್ಯ ಜಂಟಿ ಕಾರ್ಯದರ್ಶಿ ಅಶ್ವಥಗೌಡ, ವೆಂಕಟೇಶ್, ವಿಶ್ವನಾಥ್, ರವಿಕುಮಾರ್, ಸುಭಾಷ್, ಪುನೀತ್, ಸುಹಾಸ್, ಶ್ರೀಧರ್ ಹಾಗೂ ಕ್ರೀಡಾಪಟುಗಳು ಇದ್ದರು.