ಸಾರಾಂಶ
ಶಿಕ್ಷಣದ ಜತೆಗೆ ಕ್ರೀಡೆಯು ಪ್ರತಿಯೊಬ್ಬ ಮಗುವಿನ ದೈಹಿಕ ಸಾಮರ್ಥ್ಯ ಭೌತಿಕ ಬೆಳವಣಿಗೆ ಮನೋವಿಜ್ಞಾನಿಕ ಅಂಶಗಳನ್ನು ಹೆಚ್ಚಿಸುತ್ತದೆ ಎಂದು ಪ್ರಾಂಶುಪಾಲ ನದೀಮ್ ಅಜ್ಮತ್ ಹೇಳಿದರು.
ಶಿರಾ: ಶಿಕ್ಷಣದ ಜತೆಗೆ ಕ್ರೀಡೆಯು ಪ್ರತಿಯೊಬ್ಬ ಮಗುವಿನ ದೈಹಿಕ ಸಾಮರ್ಥ್ಯ ಭೌತಿಕ ಬೆಳವಣಿಗೆ ಮನೋವಿಜ್ಞಾನಿಕ ಅಂಶಗಳನ್ನು ಹೆಚ್ಚಿಸುತ್ತದೆ ಎಂದು ಪ್ರಾಂಶುಪಾಲ ನದೀಮ್ ಅಜ್ಮತ್ ಹೇಳಿದರು.
ತಾಲೂಕಿನ ಹೂಯಿಲ್ ದೊರೆ ಗ್ರಾಮದ ಶ್ರೀ ಶಾರದಾ ಇಂಟರ್‌ನ್ಯಾಷನಲ್ ಕೇಂಬ್ರಿಡ್ಜ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮೇಜರ್ ಧ್ಯಾನ್‌ಚಂದ್ ದೇಶಕ್ಕಾಗಿ ಹಾಕಿಯಲ್ಲಿ ಅನೇಕ ಗೋಲುಗಳನ್ನು ಬಾರಿಸಿ ಪದಕ ಗೆದ್ದರು. ದೇಶದ ಕ್ರೀಡಾ ಜಗತ್ತಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಕೆಲಸ ಮಾಡಿದರು ಎಂದು ಹೇಳಿದರು.ಉಪ ಪ್ರಾಂಶುಪಾಲ ನವೀನ್ ಕುಮಾರ್, ಬಾಲೋಧ್ಯಾನ ಮುಖ್ಯ ಶಿಕ್ಷಕಿ ಕಾವ್ಯ ಮಹೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಕುಮಾರ್ ಎನ್.ಆರ್., ಕಿರಣ್ ಕುಮಾರ್, ನರಸಿಂಹಮೂರ್ತಿ ಹಾಜರಿದ್ದರು.