.ದುಶ್ಚಟಗಳಿಂದ ದೂರವಿರಲು ಕ್ರೀಡೆ ಸಹಕಾರಿ

| Published : Apr 02 2025, 01:02 AM IST

ಸಾರಾಂಶ

ಗ್ರಾಮೀಣರು ಯುಗಾದಿ ಎಂದರೆ ಇಸ್ಪೀಟು, ಕೋಳಿ ಪಂದ್ಯ ಜೂಜಾಟ ಇನ್ನಿತರೆ ಅನ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ದಿನ ಕಳೆಯುತ್ತಿದ್ದರು. ಆದರೆ ಈ ಬಾರಿ ಆ ರೀತಿ ಆಗಬಾರದು ಎಂಬ ಉದ್ದೇಶದಿಂದ ಹಳೆಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಆರೋಗ್ಯಕ್ಕೆ ಹಾನಿ ಉಂಟು ಮಾಡುವ ದುಶ್ಚಟಗಳಿಂದ ಯುವಕರನ್ನು ದೂರ ಮಾಡಲು ಕ್ರೀಡೆಗಳು ಹೆಚ್ಚು ಸಹಕಾರಿ ಎಂದು ಜೆಡಿಎಸ್ ಮುಖಂಡ ಸಂದೀಪ್ ರೆಡ್ಡಿ ತಿಳಿಸಿದರು.

ತಾಲೂಕಿನ ಈ ತಿಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಹಳ್ಳಿ ಗ್ರಾಮದಲ್ಲಿ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ವತಿಯಿಂದ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿ ಕಬಡ್ಡಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೂಜಾಟ ತಪ್ಪಿಯುವ ಉದ್ದೇಶ

ಗ್ರಾಮೀಣರು ಯುಗಾದಿ ಎಂದರೆ ಇಸ್ಪೀಟು, ಕೋಳಿ ಪಂದ್ಯ ಜೂಜಾಟ ಇನ್ನಿತರೆ ಅನ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ದಿನ ಕಳೆಯುತ್ತಿದ್ದರು. ಆದರೆ ಈ ಬಾರಿ ಆ ರೀತಿ ಆಗಬಾರದು ಎಂಬ ಉದ್ದೇಶದಿಂದ ಹಳೆಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದೇವೆಂದರು. ಬಹುಮಾನ ವಿತರಣೆ

ಫೈನಲ್ ಪಂದ್ಯದಲ್ಲಿ ಹಳೆಹಳ್ಳಿ ಹಾಗೂ ದೇವರ ಮಳ್ಳೂರು ಗ್ರಾಮಗಳ ನಡುವೆ ಜಿದ್ದಾಜಿದ್ದಿನ ಆಟ ನಡೆದು ಅಂತಿಮವಾಗಿ ಹಳೆಹಳ್ಳಿ ಜಯಗಳಿಸುವ ಮೂಲಕ ಮೊದಲನೇ ಬಹುಮಾನವಾಗಿ 15 ಸಾವಿರ ಹಾಗೂ ಆಕರ್ಷಕ ಟ್ರೋಫಿ ಪಡೆದರೆ, ಫೈನಲ್ ನಲ್ಲಿ ಸೋಲನುಭವಿಸಿದ ದೇವರಮಳ್ಳೂರು ಗ್ರಾಮದ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟು ಎರಡನೇ ಬಹುಮಾನವಾಗಿ 10 ಸಾವಿರ ಪಡೆದುಕೊಂಡರು. ಸಾಯಿರಾಮ್ ಬಳಗ ಮೂರನೇ ಬಹುಮಾನವಾಗಿ 5 ಸಾವಿರ ದೊಂದಿಗೆ ಟ್ರೋಫಿ ಪಡೆದುಕೊಂಡರು. ಸಮಾಜಸೇವಕ ಸಂದೀಪ್ ರೆಡ್ಡಿ ಬಹುಮಾನ ವಿತರಿಸಿದರು.