ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ವೃದ್ಧಿ

| Published : Sep 01 2024, 01:55 AM IST

ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ವೃದ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳು ಮೊಬೈಲ್, ಟಿವಿ ಬಳಕೆ ಕಡಿಮೆ ಮಾಡಿ ಕ್ರೀಡೆಗಳತ್ತ ಹೆಚ್ಚು ಆಸಕ್ತಿ ವಹಿಸಿದರೆ ದೈಹಿಕವಾಗಿ ಮಾನಸಿಕವಾಗಿ ಆತ್ಮಸ್ಥೈರ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌ ಎನ್ ದೀಪ ಅಭಿಪ್ರಾಯಪಟ್ಟರು. ನುಗ್ಗೇಹಳ್ಳಿ ಹೋಬಳಿ ಕೇಂದ್ರ ವಾಲಿಬಾಲ್ ಆಟಕ್ಕೆ ಹೆಚ್ಚು ಪ್ರಸಿದ್ಧಿಯಾಗಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇಲ್ಲಿನ ವಾಲಿಬಾಲ್ ಕ್ರೀಡಾಪಟುಗಳು ಹೆಚ್ಚು ಹೆಸರು ಮಾಡಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲೂ ಹೆಚ್ಚು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಹೋಬಳಿ ಕ್ರೀಡಾಪಟುಗಳು ತಾಲೂಕು ಹಾಗೂ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೋಬಳಿ ಕೇಂದ್ರಕ್ಕೆ ಉತ್ತಮ ಹೆಸರು ತರುವಂತೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಮಕ್ಕಳು ಮೊಬೈಲ್, ಟಿವಿ ಬಳಕೆ ಕಡಿಮೆ ಮಾಡಿ ಕ್ರೀಡೆಗಳತ್ತ ಹೆಚ್ಚು ಆಸಕ್ತಿ ವಹಿಸಿದರೆ ದೈಹಿಕವಾಗಿ ಮಾನಸಿಕವಾಗಿ ಆತ್ಮಸ್ಥೈರ್ಯ ಹೊಂದಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌ ಎನ್ ದೀಪ ಅಭಿಪ್ರಾಯಪಟ್ಟರು.

ತಾಲೂಕು ಶಿಕ್ಷಣ ಇಲಾಖೆ ವತಿಯಿಂದ ನುಗ್ಗೇಹಳ್ಳಿ ಕರ್ನಾಟಕ ಪಬ್ಲಿಕ್ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ 2024-25ನೇ ಸಾಲಿನ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ನುಗ್ಗೇಹಳ್ಳಿ ಹೋಬಳಿ ಕೇಂದ್ರ ವಾಲಿಬಾಲ್ ಆಟಕ್ಕೆ ಹೆಚ್ಚು ಪ್ರಸಿದ್ಧಿಯಾಗಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇಲ್ಲಿನ ವಾಲಿಬಾಲ್ ಕ್ರೀಡಾಪಟುಗಳು ಹೆಚ್ಚು ಹೆಸರು ಮಾಡಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲೂ ಹೆಚ್ಚು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಹೋಬಳಿ ಕ್ರೀಡಾಪಟುಗಳು ತಾಲೂಕು ಹಾಗೂ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೋಬಳಿ ಕೇಂದ್ರಕ್ಕೆ ಉತ್ತಮ ಹೆಸರು ತರುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಪುರ ವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಮಾತನಾಡಿ, ಆಟದಲ್ಲಿ ಗೆಲುವು ಸೋಲು ಒಂದೇ ನಾಣ್ಯದ ಮುಖವಿದ್ದಂತೆ. ಮಕ್ಕಳು ಕೇವಲ ಗೆಲುವನ್ನೇ ಬಯಸದೆ ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿದ್ದು ಸರ್ಕಾರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ದೈಹಿಕ ಶಿಕ್ಷಕರನ್ನು ನೇಮಕ ಮಾಡಬೇಕು. ಇದರಿಂದ ಮಕ್ಕಳಿಗೆ ಹೆಚ್ಚು ಕ್ರೀಡಾ ತರಬೇತಿ ನೀಡಲು ಸಾಧ್ಯವಾಗುತ್ತದೆ ಎಂದರು.

ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್ ಮಾತನಾಡಿ, ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣರವರ ಪರಿಶ್ರಮದಿಂದ ಹೋಬಳಿ ಕೇಂದ್ರಕ್ಕೆ ಕರ್ನಾಟಕ ಪಬ್ಲಿಕ್ ಶಾಲೆ ದೊರೆತಿದೆ. ಮುಂಬರುವ ದಿನಗಳಲ್ಲಿ ಐಟಿಐ ಡಿಗ್ರಿ ಕಾಲೇಜುಗಳನ್ನು ಶಾಸಕರು ಹೋಬಳಿ ಕೇಂದ್ರಕ್ಕೆ ಮಂಜೂರು ಮಾಡಿಸಿದರೆ ಈ ಭಾಗದ ಸಾವಿರಾರು ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ ಆರ್ ದೊರೆಸ್ವಾಮಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಲಕ್ಷ್ಮಿ ಜಗದೀಶ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಜೆ. ಸೋಮನಾಥ್, ಗ್ರಾಮ ಪಂಚಾಯಿತಿ ಸದಸ್ಯ ಎನ್ ಆರ್ ಶಿವಕುಮಾರ್‌, ಮುಖಂಡರಾದ ಮಹಮ್ಮದ್ ಜಾವಿದ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ ಟಿ ಆನಂದ್, ಕೆಪಿಎಸ್ ಪ್ರಾಂಶುಪಾಲ ಟಿಆರ್ ಸ್ವಾಮಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಟಿ ಮಂಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಲೇಂದ್ರ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ ವಿ ಕಾಳೇಗೌಡ, ಶಿಕ್ಷಕರ ಸಂಘದ ಖಜಾಂಚಿ ಎಂಬಿ ಚಿಕ್ಕೇಗೌಡ, ಸಿಆರ್‌ಪಿ ಸಂಘದ ಅಧ್ಯಕ್ಷ ಎಚ್ ಟಿ ಮಂಜೇಗೌಡ, ಕ್ರೀಡಾಕೂಟದ ಗೌರವಾಧ್ಯಕ್ಷ ಕರಿಯಪ್ಪ ಗೌಡ, ಪಿಡಿಒ ಶಿವರಾಂ, ಹೋಬಳಿ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಎಸ್ ಸಿದ್ದರಾಜು, ಅಕ್ಕನಹಳ್ಳಿ ಕ್ಲಸ್ಟರ್ ಸಿಆರ್‌ಪಿ ಅಶೋಕ್ ಸುಧನ್, ಶಿಕ್ಷಣ ಇಲಾಖೆಯ ಸಿಎಂ ಶಿವಮೂರ್ತಿ, ಬಿಎಚ್ ಆನಂದ್, ದ್ಯಾವೇಗೌಡ, ಲೋಕೇಶ್, ಭಾರತಿ, ಕೆ ಟಿ ನಾಗರಾಜ್, ಎಂ ಜಿ ಶ್ರೀನಿವಾಸ್, ದಿನೇಶ್, ನಂಜೇಗೌಡ ಸೇರಿದಂತೆ ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಮಕ್ಕಳು ಹಾಜರಿದ್ದರು.