ಚಿಕ್ಕಮಗಳೂರುವಿಶೇಷ ಚೇತನರಿಗೆ ಧೈರ್ಯ, ಆತ್ಮವಿಶ್ವಾಸ, ಸಂಕಲ್ಪ ಸಾಧನೆಗೆ ಉತ್ತೇಜನ ನೀಡಲು ಸರ್ಕಾರ ಅಥ್ಲೆಟಿಕ್‌ ಕ್ರೀಡಾಕೂಟ ಏರ್ಪಡಿಸಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

- ಜಿಲ್ಲಾ ಮಟ್ಟದ ವಿಶೇಷಚೇತನ ಮಕ್ಕಳ ಅಥ್ಲೆಟಿಕ್‌ ಕ್ರೀಡಾಕೂಟ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿಶೇಷ ಚೇತನರಿಗೆ ಧೈರ್ಯ, ಆತ್ಮವಿಶ್ವಾಸ, ಸಂಕಲ್ಪ ಸಾಧನೆಗೆ ಉತ್ತೇಜನ ನೀಡಲು ಸರ್ಕಾರ ಅಥ್ಲೆಟಿಕ್‌ ಕ್ರೀಡಾಕೂಟ ಏರ್ಪಡಿಸಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜನೆ ಮಾಡಲಾಗಿದ್ದ ಜಿಲ್ಲಾ ಮಟ್ಟದ ವಿಶೇಷಚೇತನ ಮಕ್ಕಳ 14- 17 ವಯೋಮಾನದ ಅಥ್ಲೆಟಿಕ್‌ ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿಶೇಷ ಚೇತನರು ದೇವರ ಮಕ್ಕಳು, ಪ್ರಪಂಚಕ್ಕೆ ಬರುವಾಗ ಹೀಗೇ ಇರಬೇಕೆಂದು ಭಾವಿಸಿ ಯಾರೂ ಬರುವುದಿಲ್ಲ. ಸಮಾಜದ ಎಲ್ಲರೊಂದಿಗೆ ಸಮಾನವಾಗಿ ಬದುಕಬೇಕೆಂಬ ಆಸೆ ಇರುತ್ತದೆ. ಸರ್ವರೂ ಇವರನ್ನು ಪ್ರೀತಿಯಿಂದ ಕಂಡಾಗ ಮಾತ್ರ ಸಮಾನತೆ ಬೆಳೆಯುತ್ತದೆ ಎಂದರು.ವಿಶೇಷಚೇತನರ ಜೀವನವೇ ಒಂದು ಸಂದೇಶ. ಶಾರೀರಿಕ ಸಮಸ್ಯೆ ಇರಬಹುದು. ಆದರೆ, ಕನಸು ಕಾಣಲು ಮತ್ತು ಗುರಿ ಸಾಧನೆಗೆ ಯಾವುದೇ ಮಿತಿ ಇಲ್ಲ. ಭವಿಷ್ಯ ರೂಪಿಸಿಕೊಳ್ಳಲು ಈ ಕ್ರೀಡಾಕೂಟದ ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.ಕ್ರೀಡಾಕೂಟದಲ್ಲಿ ಭಾಗವಹಿಸಿದಾಗ ಹಲವು ಹೋರಾಟ ಮಾಡಬೇಕಾಗುತ್ತದೆ. ಇದು ನಿಮ್ಮ ಭವಿಷ್ಯದ ಬದುಕಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.ಪ್ಯಾರಾ ಒಲಂಪಿಕ್‌ನಲ್ಲಿ ಜಿಲ್ಲೆಯವರಾದ ಶವಾದ್, ಗಿರೀಶ್ ಮತ್ತಿತರರು ಸಾಧನೆ ಮಾಡಿದ್ದಾರೆ. ಇದು ನಿಮಗೆಲ್ಲರಿಗೂ ಸ್ಪೂರ್ತಿಯಾಗಲಿ, ಸಾಧನೆ ಹಿಂದೆ ಇರುವ ಪೋಷಕರು ಮತ್ತು ಶಿಕ್ಷಕರನ್ನು ಮರೆಯಬೇಡಿ ಎಂದು ಕಿವಿಮಾತು ಹೇಳಿದರು.ಕ್ರೀಡಾಕೂಟ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ವಿಶೇಷ ಚೇತನರಿಗೆ ಅನುಕಂಪ ಬೇಡ ಅವಕಾಶ ಕೊಡಿ ಎಂಬಂತೆ ಇವರಿಗೆ ಅವಕಾಶ ಕೊಟ್ಟಾಗ ಬೇರೆಯವರಿಗಿಂತ ಉತ್ತಮವಾಗಿ ಆಟವಾಡು ತ್ತೇವೆ ಎಂಬುದನ್ನುರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿರುವ ವಿಶೇಷಚೇತನರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರತಿಭೆಯಾರೊಬ್ಬರ ಸ್ವತ್ತಲ್ಲ, ಹುಟ್ಟಿದಂದಿನಿಂದಲೇ ಬರುತ್ತದೆ. ಎಲ್ಲಾ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಕೆಲಸವನ್ನು ಮೊದಲು ಪೋಷಕರು ಮನೆಯಲ್ಲೇ ಮಾಡಬೇಕು. ನಂತರ ಶಾಲೆಯಲ್ಲಿ ಶಿಕ್ಷಕರು ವಿಶೇಷಚೇತನರ ಆಸಕ್ತಿಗೆ ತಕ್ಕಂತೆ ಗುರುತಿಸಿ ಪ್ರೋತ್ಸಾಹಿಸುತ್ತಾರೆಂದು ಹೇಳಿದರು.ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಮಾತನಾಡಿ, ಸಾಮಾನ್ಯರಂತೆ ವಿಶೇಷಚೇತನರು ಸಮಾನವಾಗಿ ಕ್ರೀಡೆ ಯಲ್ಲಿ ಭಾಗವಹಿಸಿದಾಗ ಉತ್ಸಾಹ ಹೆಚ್ಚಾಗಿ, ಪ್ರತಿಭೆ ಹೊರಬರಲು ಸಾಧ್ಯ. ಈ ನಿಟ್ಟಿನಲ್ಲಿ ವಿಶೇಷಚೇತನ ಮಕ್ಕಳ ಆತ್ಮ ವಿಶ್ವಾಸ ಹೆಚ್ಚಿಸಲು ಅವರಿಗಾಗಿ ಸರ್ಕಾರ ಕ್ರೀಡಾಕೂಟ ಆಯೋಜನೆ ಮಾಡುತ್ತಿದೆ ಎಂದರು.ವೇದಿಕೆಯಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕಿರಣ್, ಅಕ್ಷರ ದಾಸೋಹ ನಿರ್ದೇಶಕ ನೀಲಕಂಠಪ್ಪ, ಪ್ರೌಢಶಾಲಾ ಶಿಕ್ಷಕರ ಜಿಲ್ಲಾ ಸಂಘದ ಅಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ರಾಜ್‌ಕುಮಾರ್, ಶಂಕರೇಗೌಡ, ಕುಮಾರಸ್ವಾಮಿ, ಪರಮೇಶ್, ಉಮೇಶ್, ಪ್ರವೀಣ್ ಪಿಂಟೋ ಹಾಗೂ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರ ಸಂಘದ ಸಂಯೋಜಕ ಪಾಲಾಕ್ಷ ಸ್ವಾಗತಿಸಿ ವಂದಿಸಿದರು. 2 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ವಿಶೇಷ ಚೇತನ ಮಕ್ಕಳ ಅಥ್ಲೆಟಿಕ್‌ ಕ್ರೀಡಾಕೂಟವನ್ನು ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಉದ್ಘಾಟಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ಡಾ. ಮಂಜುಳಾ ಹುಲ್ಲಳ್ಳಿ, ರುದ್ರಪ್ಪ ಇದ್ದರು.