ಚಿಕ್ಕಮಗಳೂರು, ಸದಾ ಕಾಲ ನ್ಯಾಯಾಲಯದಲ್ಲಿ ವಾದ, ಪ್ರತಿವಾದದಲ್ಲಿ ನಿರತರಾಗುವ ವಕೀಲರಿಗೆ ಕ್ರೀಡಾಕೂಟ ಏರ್ಪಡಿಸಿ ಮಾನಸಿಕ ಒತ್ತಡವನ್ನು ಹತೋಟಿಗೆ ತರಲು ಮುಂದಾಗಿರುವುದು ಆರೋಗ್ಯಕಾರಿ ಬೆಳವಣಿಗೆ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
- ವಕೀಲರ ದಿನಾಚರಣೆ ಅಂಗವಾಗಿ ನಡೆದ ಕ್ರೀಡಾಕೂಟ ಉದ್ಘಾಟನೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸದಾ ಕಾಲ ನ್ಯಾಯಾಲಯದಲ್ಲಿ ವಾದ, ಪ್ರತಿವಾದದಲ್ಲಿ ನಿರತರಾಗುವ ವಕೀಲರಿಗೆ ಕ್ರೀಡಾಕೂಟ ಏರ್ಪಡಿಸಿ ಮಾನಸಿಕ ಒತ್ತಡವನ್ನು ಹತೋಟಿಗೆ ತರಲು ಮುಂದಾಗಿರುವುದು ಆರೋಗ್ಯಕಾರಿ ಬೆಳವಣಿಗೆ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ನಗರದ ಜಿಲ್ಲಾ ಆಟದ ಮೈದಾನದಲ್ಲಿ ಸೋಮವಾರ ಚಿಕ್ಕಮಗಳೂರು ವಕೀಲರ ಸಂಘದಿಂದ ವಕೀಲರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ಧ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಕ್ರೀಡಾ ಚಟುವಟಿಕೆ ಮನುಷ್ಯನಲ್ಲಿ ಪ್ರತಿದಿನ ಇರಬೇಕು. ನ್ಯಾಯಾಲಯದ ಪ್ರಕರಣಗಳಲ್ಲಿ ನಿರತರಾಗುವ ವಕೀಲರಿಗೆ ಬಹುಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಕನಿಷ್ಟ ಆರು ತಿಂಗಳಿಗೊಮ್ಮೆ ಈ ರೀತಿಯ ಕ್ರೀಡಾಕೂಟ ನಡೆಸಿದರೆ ಮಾನಸಿಕ, ದೈಹಿಕ ಸದೃಢವಾಗುವ ಜೊತೆಗೆ ಮೆದುಳು ಚುರುಕುತನದಿಂದ ಕೂಡಿರಲಿದೆ ಎಂದು ತಿಳಿಸಿದರು.ವಕೀಲ ಮಿತ್ರರು ಕೆಲ ದಿನ ವೃತ್ತಿಯ ಒತ್ತಡ ಬದಿಗಿರಿಸಿ, ಒಂದಾಗಿ ಉತ್ಸಾಹದಿಂದ ಕ್ರೀಡಾಕೂಟ ಚಟುವಟಿಕೆಗಳಲ್ಲಿ ಭಾಗಿ ಯಾಗಬೇಕು. ಕ್ರೀಡೆಯಿಂದ ಶಾರೀರಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎಂದ ಅವರು, ಗೆಲುವು ಸೋಲಿನ ಬಗ್ಗೆ ಚಿಂತೆಗೆ ಒಳಗಾಗದೇ ಭಾಗವಹಿಸುವಿಕೆಯೇ ದೊಡ್ಡ ಗೆಲುವೆಂದು ಪರಿಗಣಿಸಬೇಕು ಎಂದು ಹೇಳಿದರು.ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ಸ್ಪರ್ಧೆಗಳಲ್ಲಿ ವಕೀಲರು ಕ್ರೀಡಾ ಮನೋಭಾವದಿಂದ ಭಾಗವಹಿ ಸಬೇಕು. ತೀರ್ಪುಗಾರರ ಅಂತಿಮ ತೀರ್ಮಾನಕ್ಕೆ ಆಟಗಾರರು ಮರು ಮಾತನಾಡದೇ ಒಮ್ಮತ ಸೂಚಿಸಬೇಕು ಎಂದು ತಿಳಿಸಿದರು.ಆರೋಗ್ಯ ಪೂರ್ಣ ಶರೀರಕ್ಕೆ ವ್ಯಾಯಾಮ ಅತ್ಯಗತ್ಯ. ದಿನದ ಕೆಲವು ಗಂಟೆಗಳಲ್ಲಿ ಆಸಕ್ತಿ ಹೊಂದಿರುವ ಕ್ರೀಡಾ ಚಟುವಟಿಕೆ ಗಳಲ್ಲಿ ಖುದ್ದು ಭಾಗಿಯಾಗಬೇಕು. ಆ ನಿಟ್ಟಿನಲ್ಲಿ ವಕೀಲರಿಗೆ ಎರಡು ದಿನಗಳ ಕಾಲ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಶೇಷವಾಗಿ ನ್ಯಾಯಾಧೀಶರ ತಂಡಕ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವುದು ಹುರುಪು ತಂದಿದೆ ಎಂದರು.ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಅನಿಲ್‌ಕುಮಾರ್, ಖಜಾಂಚಿ ದೀಪಕ್, ಸಹ ಕಾರ್ಯದರ್ಶಿ ಪ್ರಿಯ ದರ್ಶಿನಿ, ಒಂದನೇ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶೆ ಭಾನುಮತಿ, ಎಫ್.ಟಿ.ಎಸ್.ಸಿ. ನ್ಯಾಯಾಧೀಶರಾದ ರಾಘವೇಂದ್ರ ಕುಲಕರ್ಣಿ, ಪ್ರಧಾನ ಮತ್ತು ಹಿರಿಯ ಸಿವಿಲ್ ನ್ಯಾಯಾಧಿಶೆ ಸುಜಾತಾ, ಒಂದನೇ ಹೆಚ್ಚುವರಿ ಸಿವಿಲ್ ಹಿರಿಯ ನ್ಯಾಯಾಧೀಶರಾದ ದ್ಯಾವಪ್ಪ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಲತಾ, ಒಂದನೇ ಹೆಚ್ಚುವರಿ ನ್ಯಾಯಾಧೀಶ ಶರತ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್ ಮತ್ತು ವಕೀಲರು ಉಪಸ್ಥಿತರಿದ್ದರು.1 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಆಟದ ಮೈದಾನದಲ್ಲಿ ಸೋಮವಾರ ಚಿಕ್ಕಮಗಳೂರು ವಕೀಲರ ಸಂಘದಿಂದ ವಕೀಲರ ದಿನಾ ಚರಣೆ ಪ್ರಯುಕ್ತ ಆಯೋಜಿಸಿದ್ಧ ಕ್ರೀಡಾಕೂಟವನ್ನು ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಉದ್ಘಾಟಿಸಿದರು.