ಒತ್ತಡ ನಿವಾರಣೆಗೆ ಕ್ರೀಡೆ, ಸಂಗೀತ ಪೂರಕ

| Published : Apr 28 2024, 01:15 AM IST

ಸಾರಾಂಶ

ನೆಲಮಂಗಲ: ಕ್ರೀಡೆ ಮತ್ತು ಸಂಗೀತ ಮಾನಸಿಕ ಒತ್ತಡ ನೀಗಿಸುವ ಸಾಧನಗಳು. ಆದ್ದರಿಂದ ಪ್ರತಿನಿತ್ಯ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಕೇಶವಮೂರ್ತಿ ಹೇಳಿದರು.

ನೆಲಮಂಗಲ: ಕ್ರೀಡೆ ಮತ್ತು ಸಂಗೀತ ಮಾನಸಿಕ ಒತ್ತಡ ನೀಗಿಸುವ ಸಾಧನಗಳು. ಆದ್ದರಿಂದ ಪ್ರತಿನಿತ್ಯ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಕೇಶವಮೂರ್ತಿ ಹೇಳಿದರು.

ನಗರದ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ವಕೀಲರ ಸಂಘ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕು ವಕೀಲರ ಸಂಘದ ಚಟುವಟಿಕೆ ಮತ್ತು ವಕೀಲರ ಕುರಿತಾಗಿ ನ್ಯಾಯಾಧೀಶರು ಅತ್ಯುತ್ತಮ ಅಭಿಪ್ರಾಯ ಹೊಂದಿರುವುದು ನಮ್ಮೆಲ್ಲರಿಗೂ ಸಂತಸದ ವಿಚಾರ, ಹಲವು ವರ್ಷಗಳಿಂದ ವಾರ್ಷಿಕೋತ್ಸವ ಆಚರಿಸುತ್ತಿದ್ದೇವೆ.. ಆದರೆ ಈ ಬಾರಿ ಮೊದಲ ಬಾರಿಗೆ ಕ್ರೀಡೆಯನ್ನು ಆಯೋಜಿಸಿದ್ದರಿಂದ ಪರಸ್ಪರ ವಕೀಲರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗಿದೆ. ಕ್ರೀಡೆಯಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಾಲಯಗಳ ಸಿಬ್ಬಂದಿ ಭಾಗವಹಿಸಿರುವುದು ಉತ್ತಮ ಬೆಳವಣಿಗೆ. ಕ್ರೀಡೆ ಮತ್ತು ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು.

ಪ್ರದಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವರಾಜು ಭುಟ್ಟೆ ಮಾತನಾಡಿ, ತಾಲೂಕಿನ ವಕೀಲರ ಸಂಘ ಹಾಗೂ ನ್ಯಾಯಪೀಠ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ವಕೀಲರ ಸಂಘದ ಕ್ರೀಡಾಕೂಟದಲ್ಲಿ ನ್ಯಾಯಾಧೀಶರು ಮತ್ತು ಸಿಬ್ಬಂದಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದು ನಮ್ಮೆಲ್ಲರಿಗೂ ಸಂತವಾಗಿದೆ. ಸಂಘದಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಬೇಸಿಗೆ ಬಿಸಿಲು ಹೆಚ್ಚಾಗಿದ್ದು ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಬಿ.ಟಿ.ಮೋಹನ್‌ಕುಮಾರ್‌ ಮಾತನಾಡಿ, ಸಂಘದ ನೂತನ ಆಡಳಿತ ಮಂಡಳಿಯ ಸಹಕಾರದಿಂದಾಗಿ ಈ ಬಾರಿ ಕ್ರೀಡಾಕೂಟ ಪ್ರಾರಂಭಿಸಿದ್ದು, ವಕೀಲ ಮಿತ್ರರಲ್ಲಿ ಸಂತಸವನ್ನುಂಟು ಮಾಡಿದೆ. ಸಂಘದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸಮಿತಿ ರಚಿಸಲಾಗಿದೆ. ತಾಲೂಕಿನ ಪ್ರತಿಯೊಬ್ಬ ವಕೀಲರು ಸಂಘದ ಬೆಳವಣಿಗೆಗೆ ತಮ್ಮ ಸಲಹೆ ಮತ್ತು ಸಹಕಾರ ನೀಡುವ ಮೂಲಕ ವಕೀಲರ ಹಿತ ಕಾಪಾಡಲು ಸಂಘದೊಂದಿಗೆನಿರಂತರವಾಗಿ ಸಂಪರ್ಕದಲ್ಲಿರಬೇಕೆಂದು ಮನವಿ ಮಾಡಿದರು.

ಬಹುಮಾನ ವಿತರಣೆ: ತಾಲೂಕು ವಕೀಲರ ಸಂಘ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾರ್ಥಿಗಳಿಗೆ ನ್ಯಾಯಾಧೀಶರು ಮತ್ತು ವಕೀಲರ ಸಂಘದ ಅಧ್ಯಕ್ಷ ಕೆ.ಕೇಶವಮೂರ್ತಿ ಬಹುಮಾನ ವಿತರಿಸಿದರು.

ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನಿಲ್‌ಪ್ರಕಾಶ್, ಟಿ.ಎಲ್.ಸಂದೇಶ್, ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಎಂ.ಟಿ.ದೀಪು, ಸಿವಿಲ್ ನ್ಯಾಯಾಧೀಶರಾದ ಚಾಂದಿನಿ, ಚೈತ್ರಾ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಟಿ.ಮೋಹನ್‌ಕುಮಾರ್, ಪ್ರ.ಕಾರ್ಯದರ್ಶಿ ಎನ್.ಆರ್.ನಾಗೇಂದ್ರ, ಖಜಾಂಚಿ ಕೆ.ಎಸ್.ಲೊಕೇಶ್, ಕಾರ್ಯದರ್ಶಿ ಕೆ.ಎನ್.ರಾಮೇಗೌಡ್ರು, ಸದಸ್ಯರಾದ ಎಸ್.ಜಿ.ಮನುಗೌಡ, ತೇಜರಾಜು, ರವಿಕುಮಾರ್, ಆನಂದ್‌ಕುಮಾರ್, ಹೊನ್ನರಾಜು, ಬೈರೇಶ್, ಕೆ.ಡಿ.ಮಂಜುನಾಥ್‌ನಾಯ್ಕ, ಸಿದ್ದಗಂಗಮ್ಮ, ವೆಂಕಟೇಗೌಡ, ವಸಂತಕುಮಾರ್ ಇತರರು ಉಪಸ್ಥಿತರಿದ್ದರು.

ಪೊಟೊ27ಕೆಎನ್‌ಎಲ್‌ಎಮ್‌1 :

ನೆಲಮಂಗಲ ತಾಲೂಕು ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ವಕೀಲರ ಸಂಘ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧೀಶ ದೇವರಾಜುಭುಟ್ಟೆ, ವಕೀಲರ ಸಂಘದ ಅಧ್ಯಕ್ಷ ಕೆ.ಕೇಶವಮೂರ್ತಿ ಇತರರು ಉದ್ಘಾಟಿಸಿದರು.