ಸಾರಾಂಶ
ದಾಬಸ್‌ಪೇಟೆ: ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಪ್ರಯತ್ನಗಳು ನಡೆಯಬೇಕು. ಇದರಿಂದ ದೈಹಿಕ ಸದೃಢತೆಯನ್ನು ಹಾಗೂ ಸಮುದಾಯದ ಬದುಕನ್ನು ಯುವ ಪೀಳಿಗೆಗೆ ಪರಿಚಯಿಸುವಂತಾಗುತ್ತದೆ ಎಂದು ವಿ.ಬಿ. ಇಂಡಸ್ಟ್ರೀಸ್ ಮಾಲೀಕ ರುದ್ರೇಶ್ ತಿಳಿಸಿದರು.
ತ್ಯಾಮಗೊಂಡ್ಲು ಹೋಬಳಿಯ ಬಿದಲೂರು ಗ್ರಾಮದಲ್ಲಿ ರುದ್ರೇಶ್ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.ಗ್ರಾಮದ ಯುವಕರನ್ನು ಒಗ್ಗೂಡಿಸಿ ಅವರಲ್ಲಿನ ಕ್ರೀಡಾಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಹಾಗೂ ರಾಜ್ಯ, ರಾಷ್ಟ್ರಮಟ್ಟದಲ್ಲಿ ನಮ್ಮ ಹೋಬಳಿಯ ಕ್ರೀಡಾಪಟುಗಳು ಭಾಗವಹಿಸುವಂತಾಗಲಿ ಎಂದು ಪ್ರತಿ ವರ್ಷವೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ ಎಂದರು.
ಎರಡು ದಿನಗಳ ಟೂರ್ನಿಯಲ್ಲಿ ಒಟ್ಟು 22 ತಂಡಗಳು ಭಾಗವಹಿಸಿದ್ದು, ತಲಾ 4 ಓವರ್‌ಗಳ ಆಟವನ್ನು ಆಡಿಸಲಾಗುತ್ತಿದೆ. ಭಾನುವಾರ ಪೈನಲ್ ಪಂದ್ಯಾವಳಿ ನಡೆಯಲಿದ ಎಂದು ಕೋಡಿಪಾಳ್ಯದ ಕ್ರೀಡಾಪಟು ಉಮೇಶ್ ಮಾಹಿತಿ ನೀಡಿದರು.ರಕ್ತದಾನ ಶಿಬಿರ: ಸಮಾಜದಲ್ಲಿ ಇತ್ತೀಚಿಗೆ ಅಪಘಾತ ಪ್ರಕರಣಗಳಲ್ಲಿ ರಕ್ತದ ಕೊರತೆಯಿಂದ ಸಾವು ಹೆಚ್ಚಾಗುತ್ತಿದೆ. ಆದ್ದರಿಂದ ರುದ್ರೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಲಯನ್ಸ್ ಕ್ಲಬ್ ಸಹಕಾರದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಸುಮಾರು ೫೦ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು ಎಂದು ಕಳಲುಘಟ್ಟ ಗ್ರಾಪಂ ಉಪಾಧ್ಯಕ್ಷ ಗಿರೀಶ್ ಹೇಳಿದರು.
ಕೋಡಿಪಾಳ್ಯ ಉಮೇಶ್, ಪ್ರಕಾಶ್, ತೋಟನಹಳ್ಳಿ ಪ್ರದೀಪ್, ಲೋಕೇಶ್, ಅವಿನಾಶ್, ಮಂಜು ಗೋಲ್ಡ್, ಉಮೇಶ್, ವಿನೋದ್, ಚೇತನ್, ಸದಾಶಿವ, ಪವನ್, ಶಿವರಾಜು, ಮುಖಂಡರಾದ ಬಿದಲೂರು ಗಿರೀಶ್, ಲೋಕೇಶ್, ಗಂಗಪ್ಪ ಸೇರಿ ನೂರಾರು ಕ್ರೀಡಾಸಕ್ತರು ಉಪಸ್ಥಿತರಿದ್ದರು.ಪೋಟೋ 8:ತ್ಯಾಮಗೊಂಡ್ಲು ಹೋಬಳಿಯ ಬಿದಲೂರು ಗ್ರಾಮದಲ್ಲಿ ರುದ್ರೇಶ್ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ಗೆ ವಿ.ಬಿ ಇಂಡಸ್ಟ್ರೀಸ್ ಮಾಲೀಕ ರುದ್ರೇಶ್ ಚಾಲನೆ ನೀಡಿದರು.