ಮಾನಸಿಕ, ದೈಹಿಕ ಸಾಮರ್ಥ್ಯಕ್ಕೆ ಕ್ರೀಡೆ ಸಹಕಾರಿ-ಎಸ್ಪಿ ಅಂಶುಕುಮಾರ್

| Published : Jun 02 2024, 01:47 AM IST

ಸಾರಾಂಶ

ಬಿಡುವಿಲ್ಲದ ಕಚೇರಿಯ ಒತ್ತಡದ ಕೆಲಸದಿಂದ ಮುಕ್ತವಾಗಿ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, ಕ್ರೀಡೆಯಿಂದ ಮಾನಸಿಕ ಉಲ್ಲಾಸ ಹಾಗೂ ದೈಹಿಕ ದೃಢತೆಯಿಂದ ಕೆಲಸದ ಸಾಮರ್ಥ್ಯ ಹೆಚ್ಚಳವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಹೇಳಿದರು.

ಹಾವೇರಿ: ಬಿಡುವಿಲ್ಲದ ಕಚೇರಿಯ ಒತ್ತಡದ ಕೆಲಸದಿಂದ ಮುಕ್ತವಾಗಿ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, ಕ್ರೀಡೆಯಿಂದ ಮಾನಸಿಕ ಉಲ್ಲಾಸ ಹಾಗೂ ದೈಹಿಕ ದೃಢತೆಯಿಂದ ಕೆಲಸದ ಸಾಮರ್ಥ್ಯ ಹೆಚ್ಚಳವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಹೇಳಿದರು.ನಗರದ ಜಿಲ್ಲಾ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ ಮಾತನಾಡಿ, ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ, ಕಚೇರಿಯ ದೈನಂದಿನ ಒತ್ತಡಗಳಿಂದ ಹೊರಬಂದು ಮನೋಲ್ಲಾಸದಿಂದ ಕ್ರೀಡೆಯಲ್ಲಿ ಭಾಗವಹಿಸಿ. ಎರಡು ದಿನಗಳ ಕಾಲ ನಡೆಯುವ ಈ ಕ್ರೀಡಾ ಸ್ಪರ್ಧೆ ಯಾರೂ ಉತ್ತಮ, ಯಾರೂ ಸಾಮಾನ್ಯ ಎಂದು ನಿರ್ಧರಿಸುವುದಿಲ್ಲ ಎಂದು ಹೇಳಿದರು.ಈವರೆಗೆ ಅಧಿಕಾರಿ, ಸಿಬ್ಬಂದಿಗಳು ಬರನಿರ್ವಹಣೆ, ಚುನಾವಣೆಯ ಬಿಡುವಿಲ್ಲದೆ ನಿರಂತರ ಕೆಲಸ ಮಾಡಿದ್ದೀರಿ. ಈಗ ಮಳೆಗಾಲ ಆರಂಭವಾಗಲಿದೆ. ಕೃಷಿ ಚಟುವಟಿಕೆಗಳು ಆರಂಭಗೊಳ್ಳಲಿವೆ, ಅಧಿಕಾರಿಗಳಿಗೆ ಬಿಡುವಿಲ್ಲದ ಕೆಲಸಗಳ ಮಧ್ಯ ಸಣ್ಣ ವಿರಾಮ ಈ ಕ್ರೀಡಾಕೂಟದಿಂದ ದೊರೆಯಲಿದೆ. ಮನಸ್ಸನ್ನು ಹಗುರಮಾಡಿಕೊಂಡು ಮುಂದಿನ ಕೆಲಸಗಳಿಗೆ ಸಂಘಟನಾತ್ಮಕವಾಗಿ ನಿರ್ವಹಣೆಗೆ ಈ ಕ್ರೀಡಾ ಕೂಟ ಸಹಕಾರಿಯಾಗಲಿ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರವನ್ನು ಸನ್ಮಾನಿಸಲಾಯಿತು. ಹಾಗೂ ವಾರ್ತಾಧಿಕಾರಿ ಡಾ.ಬಿ.ಆರ್. ರಂಗನಾಥ್, ಎಫ್‌ಡಿಎ ಶಿವಯೋಗ ಚಿಂದಿ, ಶೇಖಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ.ಉಪಕಾರ್ಯದರ್ಶಿ ಎಸ್.ಜಿ. ಮುಳ್ಳಳ್ಳಿ, ಜಿ.ಪಂ. ಕುಮಾರ ಮಣ್ಣವರ, ಎಚ್.ವೈ.ಮೀಶೆ, ಸಿ.ಎಸ್. ಹಾಲಪ್ಪನವರಮಠ, ಭರತ್ ಹೆಗಡೆ, ಮಲ್ಲಿಕಾರ್ಜುನ ಕೆ.ಎಂ., ಪಿ.ವಿಶ್ವನಾಥ್, ಎಸ್.ನಾರಾಯಣ, ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ, ಲತಾ ಸೇರಿದಂತೆ ಇತರರು ಭಾಗವಹಿಸಿದ್ದರು.