ಕ್ರೀಡೆಗಳು ಸಮುದಾಯದಲ್ಲಿ ಸೌಹಾರ್ದತೆ ರೂಪಿಸಲಿವೆ: ನ್ಯಾಯಾಧೀಶ ಅಮುಲ್ ಜೆ. ಹಿರೇಕುಡಿ

| Published : Jan 06 2025, 01:03 AM IST

ಕ್ರೀಡೆಗಳು ಸಮುದಾಯದಲ್ಲಿ ಸೌಹಾರ್ದತೆ ರೂಪಿಸಲಿವೆ: ನ್ಯಾಯಾಧೀಶ ಅಮುಲ್ ಜೆ. ಹಿರೇಕುಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡೆಗಳಲ್ಲಿ ವ್ಯಕ್ತಿಗೆ ಬೇಕಾದ ದೈಹಿಕ ಮತ್ತು ಭಾವನಾತ್ಮಕ ಪ್ರಯೋಜನಗಳಿದ್ದು , ಶಿಸ್ತು ಮತ್ತು ಸಮಯಪ್ರಜ್ಞೆಯನ್ನು ಬೆಳೆಸುವುದರ ಜೊತೆಗೆ ಸಮುದಾಯದಲ್ಲಿ ಸೌಹಾರ್ದತೆ ರೂಪಿಸಲಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮುಲ್ ಜೆ. ಹಿರೇಕುಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಕ್ರೀಡೆಗಳಲ್ಲಿ ವ್ಯಕ್ತಿಗೆ ಬೇಕಾದ ದೈಹಿಕ ಮತ್ತು ಭಾವನಾತ್ಮಕ ಪ್ರಯೋಜನಗಳಿದ್ದು , ಶಿಸ್ತು ಮತ್ತು ಸಮಯಪ್ರಜ್ಞೆಯನ್ನು ಬೆಳೆಸುವುದರ ಜೊತೆಗೆ ಸಮುದಾಯದಲ್ಲಿ ಸೌಹಾರ್ದತೆ ರೂಪಿಸಲಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮುಲ್ ಜೆ. ಹಿರೇಕುಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಎಸ್ ಜೆ ಜೆ ಎಂ ಕ್ರೀಡಾಂಗಣದಲ್ಲಿ ಸ್ಥಳೀಯ ನ್ಯಾಯವಾದಿಗಳ ಸಂಘದ ವತಿಯಿಂದ ವಕೀಲರಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ (ಹಾರ್ಡ್ ಟೆನ್ನಿಸ್ ಬಾಲ್) ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಯು ಏಕಾಗ್ರತೆ ಸುಧಾರಿಸಲು ಸಹಾಯ ಮಾಡುತ್ತದೆ, ಒತ್ತಡ ಮತ್ತು ಖಿನ್ನತೆ ಕಡಿಮೆ ಮಾಡುತ್ತದೆ, ಆಲೋಚನಾ ಸಾಮರ್ಥ್ಯ ಮತ್ತು ಜೀವನದ ಗುಣಮಟ್ಟ ಸುಧಾರಿಸಲಿದ್ದು, ಸ್ನೇಹಿತರೊಂದಿಗೆ ಆಟವಾಡುವುದರಿಂದ ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಹಾಯ ಮಾಡಲಿದೆ, ಕ್ರೀಡೆಗಳು ಆರೋಗ್ಯಕರ ಜೀವನದ ಪ್ರಮುಖ ಭಾಗವಾಗಿದ್ದು ದೇಹ ಮತ್ತು ಮನಸ್ಸಿಗೆ ಅನೇಕ ಪ್ರಯೋಜನ ನೀಡಲಿವೆ ಎಂದರು.

ದೈಹಿಕ ಆರೋಗ್ಯ:ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶರಾದ ಸುರೇಶ ವಗ್ಗನವರ ಮಾತನಾಡಿ, ಕ್ರೀಡೆಗಳು ಸ್ನಾಯುವಿನ ಬಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಆರಂಭಿಕ ಸಾವಿನ ಅಪಾಯವನ್ನೂ ಸಹ ಕಡಿಮೆ ಮಾಡಬಹುದು, ಸಾಂಕ್ರಾಮಿಕವಲ್ಲದ ಬಹಳಷ್ಟು ಕಾಯಿಲೆಗಳನ್ನು ತಡೆಗಟ್ಟಲು ಕ್ರೀಡೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ. ಜನರು ಪರಸ್ಪರ ಬೆರೆಯಲು ಕ್ರೀಡೆ ಒಂದು ಮಾರ್ಗವಾಗಿ ಕೆಲಸ ನಿರ್ವಹಿಸುತ್ತದೆ. ಅಷ್ಟಕ್ಕೂ ಜನರಲ್ಲಿ ನಾಯಕತ್ವ ಗುಣಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲಿದೆ ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್. ಎನ್. ಬಾರ್ಕಿ, ಉಪಾಧ್ಯಕ್ಷ ಬಿ.ಜಿ. ಹಿರೇಮಠ, ಕಾರ್ಯದರ್ಶಿ ಎಂ.ಪಿ. ಹಂಜಗಿ ಸಹ ಕಾರ್ಯದರ್ಶಿ ಎನ್. ಬಿ. ಬಳಿಗಾರ, ಹಿರಿಯ ವಕೀಲರಾದ ಎಫ್.ಎಂ. ಮುಳಗುಂದ, ಪಿ.ಆರ್.ಮಠದ, ಪ್ರಭು ಶೀಗಿಹಳ್ಳಿ, ಎಂ.ಜೆ. ಮುಲ್ಲಾ. ಆರ್‌.ಸಿ. ಶಿಡೇನೂರ, ಪ್ರಕಾಶ ಬನ್ನಿಹಟ್ಟಿ, ಎನ್. .ಎಸ್. ಬಟ್ಟಲಕಟ್ಟಿ, ಲಿಂಗರಾಜ ಬನ್ನಿಹಟ್ಟಿ, ಸುರೇಶ ಕಾಟೇನಹಳ್ಳಿ, ಮಂಜುನಾಥ ಕುಮ್ಮೂರ, ಜಿಲ್ಲೆಯ ವಿವಿಧ ತಾಲೂಕಗಳಿಂದ ಆಗಮಿಸಿದ್ದ ವಕೀಲರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.