ಕ್ರೀಡಾ ಪಟುಗಳಿಗೆ ಇನ್ನಷ್ಟು ಪ್ರೋತ್ಸಾಹ ಅಗತ್ಯ: ಹಿರಿಯ ಕ್ರೀಡಾಪಟು ಪಿ.ಆರ್.ಸದಾಶಿವ

| Published : Oct 30 2023, 12:30 AM IST

ಕ್ರೀಡಾ ಪಟುಗಳಿಗೆ ಇನ್ನಷ್ಟು ಪ್ರೋತ್ಸಾಹ ಅಗತ್ಯ: ಹಿರಿಯ ಕ್ರೀಡಾಪಟು ಪಿ.ಆರ್.ಸದಾಶಿವ
Share this Article
  • FB
  • TW
  • Linkdin
  • Email

ಸಾರಾಂಶ

ಕ್ರೀಡಾ ಪಟುಗಳಿಗೆ ಇನ್ನಷ್ಟು ಪ್ರೋತ್ಸಾಹ ಅಗತ್ಯ: ಹಿರಿಯ ಕ್ರೀಡಾಪಟು ಪಿ.ಆರ್.ಸದಾಶಿವ
ಸಿಂಸೆಯಲ್ಲಿ ನಡೆದ ತಾಲೂಕು ಮಟ್ಟದ ಆಹ್ವಾನಿತ ತಂಡಗಳ ವಾಲೀಬಾಲ್ ಪಂದ್ಯಾವಳಿ ಉದ್ಘಾಟನೆ ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಕ್ರೀಡಾ ಪಟುಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಹಿರಿಯ ಕ್ರೀಡಾಪಟು ಪಿ.ಆರ್.ಸದಾಶಿವ ತಿಳಿಸಿದರು. ಸಿಂಸೆಯ ಮಿತ್ರ ಯುವಕ ಸಂಘದ ವಾಲೀಬಾಲ್‌ ಕ್ರೀಡಾಂಗಣದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಜೇಸಿ ಸಪ್ತಾಹದ ಅಂಗವಾಗಿ ನಡೆದ ತಾಲೂಕು ಮಟ್ಟದ ಆಹ್ವಾನಿತ ತಂಡಗಳ ವಾಲೀಬಾಲ್‌ ಪಂದ್ಯಾ‍ವಳಿ ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಿದರೆ ಅವರು ಕ್ರೀಡೆಯಲ್ಲಿ ಮುಂದೆ ಬರಲು ಸಹಕಾರಿ ಎಂದರು. ಮುಖ್ಯ ಅತಿಥಿಯಾಗಿದ್ದ ಜೇಸಿ ಸಂಸ್ಥೆ ಪೂರ್ವಾಧ್ಯಕ್ಷ ಎನ್‌.ಎಂ.ಕಾಂತರಾಜ್ ಮಾತನಾಡಿ, ಈ ವರ್ಷದ ಜೇಸಿ ಸಪ್ತಾಹ ವಿಶೇಷವಾಗಿ ನಡೆದಿದೆ. ಹಿರಿಯ ಕ್ರೀಡಾ ಪಟು ಪಿ.ಆರ್‌.ಸದಾಶಿವ ವಾಲೀಬಾಲ್ ಪಂದ್ಯಾ ವಳಿಯಲ್ಲಿ ಸಾಧನೆ ಮಾಡಿದವರು. ಕ್ರೀಡೆಗಳಿಗೆ ಅವರು ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು. ಸಭೆ ಅಧ್ಯಕ್ಷತೆಯನ್ನು ಜೇಸಿ ಸಂಸ್ಥೆ ಅಧ್ಯಕ್ಷ ಕೆ.ಗಂಗಾಧರ್‌ ವಹಿಸಿದ್ದರು. ಅತಿಥಿಗಳಾಗಿ ಗುಬ್ಬಿಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸಂಪತ್‌, ಉಪಾಧ್ಯಕ್ಷ ಡಿ.ಶಂಕರ್‌, ಜೇಸಿ ಕಾರ್ಯದರ್ಶಿ ಮಿಥುನ್‌, ಪೂರ್ವಾಧ್ಯಕ್ಷ ಪೂರ್ಣೇಶ್, ಸಪ್ತಾಹದ ನಿರ್ದೇಶಕ ನಾಗರಾಜ್ ದೊಡ್ಡಮನಿ, ಸಪ್ತಾಹದ ನಿರ್ದೇಶಕರಾದ ಸುಬ್ರಮಣ್ಯ, ರಿಜೇಶ್‌, ಸುಬೀತ್ ಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ಕರಾಟೆಯಲ್ಲಿ ರಾಜ್ಯ ಮಟ್ಟದ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದ ಸಿಂಸೆಯ ಗ್ರೀಷ್ಮಾ ಗಿರಿರಾಜ್ ಹಾಗೂ ಹಿರಿಯ ಕ್ರೀಡಾಪಟು ಪಿ.ಆರ್‌.ಸದಾಶಿವ ಅವರನ್ನು ಸನ್ಮಾನಿಸಲಾಯಿತು. ವಾಲೀಬಾಲ್‌ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದವು. ನ.ರಾ.ಪುರ ಶಿವಪಾಂಡೆ ನೇತೃತ್ವದ ಯುನೈಟೆಡ್ ತಂಡ ಪ್ರಥಮ ಹಾಗೂ ಸಿಂಸೆ ಸರ್ಕಲ್ ನ ತಕ್ಷಕ್ ಮತ್ತು ತಂಡದವರು ದ್ವಿತೀಯ ಸ್ಥಾನ ಪಡೆದರು.